
ದಾವಣಗೆರೆ : ಪ್ರತಿಷ್ಠಿತ ತುಮಕೋಸ್ ನಂತೆ ದಾಮಕೋಸ್ ಕೂಡ ಅಭಿವೃದ್ಧಿ ಹೊಂದುತ್ತಿದ್ದು, ಹಾಲಿ ಅಧ್ಯಕ್ಷ ಬಿ.ಕೆ.ಶಿವಕುಮಾರ್ ಗೆ ಮತ್ತೆ ಅಧ್ಯಕ್ಷ ಸ್ಥಾನ ಒಲಿದಿದೆ.
ಈ ಹಿಂದೆ ದಾವಣಗೆರೆ ಅಡಿಕೆ ಅಭಿವೃದ್ಧಿ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘದ (ದಾಮ್ಕೋಸ್) ರಜತ ಮಹೋತ್ಸವ ಸಮಾರಂಭವನ್ನು ಶಿವಕುಮಾರ್ ಅದ್ದೂರಿಯಾಗಿ ಮಾಡಿದ್ದರು. ಸಂಸ್ಥೆಯು ಸಾಕಷ್ಟು ಏಳು-ಬೀಳುಗಳನ್ನು ಎದುರಿಸಿದೆ. ಸಂಘದ ಸದಸ್ಯರು ಹಾಗೂ ನಿರ್ದೇಶಕರ ಶ್ರಮದಿಂದ ದಾಮಕೋಸ್ ಪ್ರಗತಿ ಕಾಣುತ್ತಿದ್ದು, ಇದರಲ್ಲಿ ಶಿವಕುಮಾರ್ ಹಾಗೂ ನಿರ್ದೇಶಕರ ಶ್ರಮವೂ ಅಪಾರವಿದೆ.
ಸಂಸ್ಥೆಲಾಭದಲ್ಲಿದೆ..!
ಸಂಸ್ಥೆಯಲ್ಲಿ ಮೊದಲಿಗೆ 13 ಲಕ್ಷ ರೂ.ಗಳಷ್ಟಿದ್ದ ಷೇರು ಮೊತ್ತವು, ಪ್ರಸ್ತುತ ದಿನಗಳಲ್ಲಿ 45ಲಕ್ಷ ರೂ.ಗಳಿಗೆ ಏರಿಕೆಗೊಳಿಸಿರುವುದು ದಾಮಕೋಸ್ ಅಧ್ಯಕ್ಷ ಬಿ.ಕೆ. ಶಿವಕುಮಾರ್ ಅವಧಿಯಲ್ಲಿಯೇ. ಇನ್ನು ವಾರ್ಷಿಕ ವಹಿವಾಟು 30 ಕೋಟಿ ರೂ.ಗಳಿದ್ದು, ಪ್ರಸಕ್ತ ವರ್ಷ 30 ಲಕ್ಷ ರೂ.ಗಳನ್ನು ಉಳಿತಾಯಗೊಳಿಸಿ ಸಂಸ್ಥೆಯು ಲಾಭದ ಪಥದಲ್ಲಿ ಹೊರಟಿದೆ.
ಮಾಹಿತಿ ಕೇಂದ್ರ ಸ್ಥಾಪಿಸುವ ಗುರಿ..!
ಆರಂಭದಲ್ಲಿ ನಮ್ಮಸಂಸ್ಥೆಖಾಲಿ ಚೀಲ ಖರೀದಿಸಲು ಪಡುತ್ತಿತ್ತು. ಇಂದು ಸ್ವಂತ ಕಟ್ಟಡ ಹೊಂದಿದೆ. ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಎಸ್.ಟಿ. ಸೋಮಶೇಖರ್ ರ ಪ್ರಯತ್ನದಿಂದ ತಾಲ್ಲೂಕು ಕಚೇರಿ ಬಳಿ ಸಂಸ್ಥೆಗೆ ಜಾಗ ಲಭಿಸಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ರೈತರಿಗಾಗಿ ಅಡಕೆ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಒಂದು ಕೇಂದ್ರ ತೆರೆಯುವ ಯೋಜನೆ ಹೊಂದಿರುವ ಬಗ್ಗೆ ಶಿವಕುಮಾರ್ ತಿಳಿಸಿದ್ದಾರೆ.

ಷೇರು ಹೆಚ್ಚಿಸುವ ಸಂಕಲ್ಪ..!
ತುಮಕೋಸ್ ಸಂಸ್ಥೆಯ ಸಮವಾಗಿ ನಮ್ಮಸಂಸ್ಥೆಯ ಇದೆ. ಆದರೆ ಷೇರುದಾರರ ಸಂಖ್ಯೆಯಲ್ಲಿ ನಮ್ಮಸಂಸ್ಥೆ ಕಡಿಮೆಯಿದ್ದು, ಮುಂದಿನ ದಿನಗಳಲ್ಲಿ ನಾವು ಸಹ 15 ಸಾವಿರ ಜನ ಷೇರುದಾರರನ್ನು ಹೊಂದುವ ಮೂಲಕ 10 ಕೋಟಿ ಸಾಧನೆ ಗುರಿ ಹೊಂದಿದ್ದಾರೆ ಶಿವಕುಮಾರ್.
ಸಿಂಪಲ್ ಮ್ಯಾನ್
ಸಂಸ್ಕೃತಿ ಸಂಸ್ಕಾರವನ್ನು ಹೊಂದಿರುವ ಶಿವಕುಮಾರ್ ಒಬ್ಬ ಸಾಮಾನ್ಯ ವ್ಯಕ್ತಿ. ಕೃಷಿಕ ಕುಟುಂಬದಿಂದ ಬಂದ ಅಪರೂಪದ ವ್ಯಕ್ತಿತ್ವ. ದಾವಣಗೆರೆ ಯಲ್ಲಿ ಸುಮಾರು ವರ್ಷಗಳಿಂದ ಇದ್ದಂತಹ ಅಡಿಕೆ ಬೆಳೆಗಾರರ ಸಂಘದ ದಾಮ್ಕೋಸ್ ಸಂಸ್ಥೆಯ ಕ್ಷೇಮಾಭಿವೃದ್ಧಿಗೆ ತನ್ನ ಜೀವನವನ್ನು ಮುಡಿಪಾಗಿಟ್ಟು ರೈತರ ಹಿತವಾದ ಸಂಸ್ಥೆಯನ್ನು ತಮ್ಮ ಅಧಿಕಾರ ಅವಧಿಯಲ್ಲಿ ಕೇವಲ ಮೂರು ವರ್ಷಗಳಲ್ಲಿ ಹೆಸರುವಾಸಿಯಾಗಲು ಪ್ರಾಮಾಣಿಕ ಪ್ರಯತ್ನ ಮಾಡಿ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ತಂದಿದ್ದಾರೆ. ಹಾಗಾಗಿ ದಾವಣಗೆರೆ ಅಡಿಕೆ ಬೆಳೆಗಾರ ಸಂಘದ ದಾಮ್ಕೋಸ್ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಿಕೆ ಶಿವಕುಮಾರ್ ರವರಿಗೆ ಜಿಲ್ಲಾ ಬಿಜೆಪಿ ಘಟಕದಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದೆ. ಒಟ್ಟಿನಲ್ಲಿ ಸಹಕಾರಿ ಮನೋಭಾವನೆ ಹೊಂದಿರುವ ಶಿವಕುಮಾರ್ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲಿ ಎಂಬುದೇ ಬೆಳೆಗಾರರ ಆಶಯ.