ನಂದೀಶ್ ಭದ್ರಾವತಿ ದಾವಣಗೆರೆ ; ಲೋಕಸಭೆ ಚುನಾವಣೆ ಹಿನ್ನೆಲೆ ಪಕ್ಷಾಂತರ ಪರ್ವ ಆರಂಭವಾಗಿದ್ದು, ಕಾಂಗ್ರೆಸ್ ನ ಬಿಗ್ ವಿಕೆಟ್ ಬಿಜೆಪಿಗೆ ಸೇರ್ಪಡೆಯಾಗಲಿದೆ.

ಕಾಂಗ್ರೆಸ್ ನಲ್ಲಿ ಸಚಿವ ಮಲ್ಲಿಕಾರ್ಜುನ್ ಆಪ್ತ ಶಿವನಹಳ್ಳಿ ರಮೇಶ್ ಸೇರಿದಂತೆ ಎಂಟು ಜನರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಇದೆ. ಶಿವನಹಳ್ಳಿ ರಮೇಶ್ ಹಲವಾರು ವರ್ಷಗಳಿಂದ ಕಾಂಗ್ರೆಸ್ ನಲ್ಲಿದ್ದು, ಈಗ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

ಚುನಾವಣಾ ಬಂದಾಗ ಮಾತ್ರ ಶಿವನಹಳ್ಳಿ ರಮೇಶ್ ಶಾಮನೂರು ಕುಟುಂಬಕ್ಕೆ ನೆನಪಾಗುತ್ತಿದ್ದರು. ಬಳಿಕ ಅವರನ್ನು ಮಾತನಾಡಿಸುತ್ತಿರಲಿಲ್ಲ. ಅವರಿಗೆ ಯಾವುದೇ ಸ್ಥಾನ ಮಾನ ಕೊಟ್ಟಿರಲಿಲ್ಲ. ದಾವಣಗೆರೆ ಉತ್ತರದಲ್ಲಿ ಶಿವನಹಳ್ಳಿ ರಮೇಶ್ ಉತ್ತಮ ಹೆಸರನ್ನು ಹೊಂದಿದ್ದು, ಪ್ರಭಾವಿ ನಾಯಕರಾಗಿದ್ದಾರೆ. ಶಾಸಕ ಶಾಮನೂರು, ಸಚಿವ ಮಲ್ಲಿಕಾರ್ಜುನ್ ಗೆ ಆಪ್ತರಾಗಿದ್ದರು. ಆದರೆ ಕೆಲವೇ ಕೆಲವರನ್ನು ಅವರು ಹತ್ತಿರ ಬಿಟ್ಟುಕೊಂಡು ಉನ್ನತ ಸ್ಥಾನ ಕೊಟ್ಟಿದ್ದರು. ಆದರೆ ನಾವು ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ದುಡಿದಿದ್ದೇವೆ. ನಮಗೆ ಯಾವುದೇ ಸ್ಥಾನ ಮಾನ ಸಿಕ್ಕಿಲ್ಲ. ಹೋಗಲಿ ಗೌರವವೂ ಸಿಕ್ಕಿಲ್ಲ. ಆದ್ದರಿಂದ ನಮ್ಮ ಸಾಹೇಬರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಶಿವನಹಳ್ಳಿ ರಮೇಶ್ ಅಭಿಮಾನಿಗಳು ತಿಳಿಸಿದ್ದಾರೆ.

ಹಲವು ದಿನಗಳಿಂದ ಮನವೊಲಿಕೆ

ಕಾಂಗ್ರೆಸ್ ನ ಪಟ್ಟ ಅಭಿಮಾನಿಯಾದ ಶಿವನಹಳ್ಳಿ ರಮೇಶ್ ರನ್ನು ನಾಯಕರಾದ ಬಾಡದ ಆನಂದರಾಜ್,  ಜಗದೀಶ್, ಶ್ರೀನಿವಾಸ ದಾಸಕರಿಯಪ್ಪ ಹಲವು ದಿನಗಳಿಂದ ಸಂಪರ್ಕಿಸಿದ್ದರು. ಅಂತಿಮವಾಗಿ ಇವರ ಮನವೊಲಿಕೆ ಯಶಸ್ವಿಯಾಗಿದೆ. ಈ ಮೂಲಕ ಕಾಂಗ್ರೆಸ್ ನಲ್ಲಿದ್ದ ದೇವರಮನಿ ಶಿವಕುಮಾರ್, ಜೆ.ಎನ್.ಶ್ರೀನಿವಾಸ, ಈಗ ಶಿವನಹಳ್ಳಿ ರಮೇಶ್ ನಂತಹ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮುಂದೆ ಬಿಜೆಪಿಯಲ್ಲಿ ಉನ್ನತ ಸ್ಥಾನ ಮಾನ ಸಿಗುತ್ತದೆಯೇ ಕಾದು ನೋಡಬೇಕು

Share.
Leave A Reply

Exit mobile version