ಗ್ಯಾರಂಟಿ ಯೋಜನೆಗಳು ಬೋಗಸ್ : ದಾವಣಗೆರೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ
ದಾವಣಗೆರೆ : ಕರ್ನಾಟಕದ ಗ್ಯಾರಂಟಿ ಯೋಜನೆಗಳು ಬೋಗಸ್ ಎಂದು ದೇಶದ ಜನತೆಗೆ ಅರಿವಾಗಿದೆ ಅದಕ್ಕಾಗಿ ಪಂಚರಾಜ್ಯದ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳಿಂದ ಗೆಲುವು ಸಾಧಿಸುವುದು ಕಾಂಗ್ರೆಸ್ ನವರಿಗೆ ಸಾಧ್ಯವಿಲ್ಲ ಎಂದು ದಾವಣಗೆರೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಭವಿಷ್ಯ ನುಡಿದಿದ್ದಾರೆ.
ರಾಜ್ಯದ ಜನತೆ ಕಾಂಗ್ರೆಸ್ ನ ಐದು ಗ್ಯಾರಂಟಿ ಗಳು ಬೊಗಸ್ ಗ್ಯಾರಂಟಿ ಗಳೆಂದು ಅರ್ಥ ಮಾಡಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಯಾರಿಗೆ ಅನುಕೂಲವಾಗಿದೆ ಹಾಗೂ ಅನಾನುಕೂಲವಾಗಿದೆ ಎಂಬುದನ್ನು ಜನರು ಅರ್ಥ ಮಾಡಿ ಕೊಂಡಿದ್ದಾರೆ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳೇ ಮರಿಚಿಕೆಯಾಗುತ್ತಿವೆ ಎಂದರು.
ಪಂಚರಾಜ್ಯ ಚುನಾವಣೆಯ ಕೊನೆಹಂತದ ಚುನಾವಣೆ ಮುಗಿಯುತ್ತಾ ಬಂದಿದೆ.ಐದರಲ್ಲಿ ಭಾರತೀಯ ಜನತಾ ಪಕ್ಷ ನಾಲ್ಕು ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲಿದ್ದೇವೆ. ಬಿಜೆಪಿಯನ್ನು ದೇಶದ ಜನತೆ ಒಪ್ಪಿಕೊಂಡಿದ್ದಾರೆ.
ಮತದಾರರು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ.ಬರುವ ಫಲಿತಾಂಶ ದಲ್ಲಿ ನಾಲ್ಕು ರಾಜ್ಯದಲ್ಲಿ
ರಾಜಸ್ತಾನದಲ್ಲಿ ,ಮಿಜೋರಾಂ ನಲ್ಲಿ ಬಿಜೆಪಿ ಗೆಲುವು ಖಚಿತಗೊಂಡಿದೆ. ಛತ್ತೀಸ್ ಘಡದಲ್ಲಿ ಮಧ್ಯಪ್ರದೇಶದಲ್ಲೂ ಬಿಜೆಪಿಯ ಉತ್ತಮ ಆಡಳಿತಕ್ಕೆ ಬೆಂಬಲ ವ್ಯಕ್ತವಾಗಿದೆ.
ಬಿಜೆಪಿ ಸರ್ಕಾರದ ಆಡಳಿತದ ವೇಳೆ ಬಡವರಿಗೆ ಶೋಷಿತ ವರ್ಗದವರ ಅಭಿವೃದ್ಧಿ ಪರಿಗಣಿಸಿ ಜನರು ಬಿಜೆಪಿಗೆ ಬೆಂಬಲ ನೀಡುವ ಭರವಸೆ ಇದೆ ಎಂದರು.ತೆಲಂಗಾಣದಲ್ಲಿಬಿಜೆಪಿ ಮತಗಳಿಕೆ ಹೆಚ್ಚಾಗಲಿದೆ.ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಹುಸಿಯಾಗಿವೆ ಎಂಬುದನ್ನು ಭಾರತದ ಜನತೆ ಅರ್ಥ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಕೊಟ್ಟಿರುವ ಭರವಸೆಗಳನ್ನು ಸರ್ಕಾರ ಈಡೇರಿಸಲು ವಿಫಲವಾಗಿರುವುದನ್ನು ಐದು ರಾಜ್ಯದ ಜನತೆ ನೋಡಿದ್ದಾರೆ.ಕಾಂಗ್ರೆಸ್ ಅಲೆ ದೇಶದಲ್ಲಿ ಮಾಯವಾಗುತ್ತಾ ಬಂದಿದೆ ಇದೇ ಕಾರಣಕ್ಕೆ ನಾವು ಗೆಲ್ಲುವುದು ಸಾಧ್ಯವಾಗಲಿದೆ.
ದೇಶವೇ ಮೆಚ್ಚುವ ನಾಯಕ ನರೇಂದ್ರ ಮೋದಿ. ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೨೮ ಸ್ಥಾನಗಳಲ್ಲಿ ೨೫ ಸ್ಥಾನ ಗೆಲ್ಲುವುದು ಖಚಿತ ಎಂಬ ಭರವಸೆ ವ್ಯಕ್ತಪಡಿಸಿದರು.
ಮಧ್ಯಪ್ರದೇಶ, ರಾಜಸ್ಥಾನ ಬಿಜೆಪಿ ವಶಕ್ಕೆ : ಬಿಜೆಪಿ ಟಿಕೇಟ್ ಆಕಾಂಕ್ಷಿ ಕೆ.ಬಿ ಕೊಟ್ರೇಶ್
ದಾವಣಗೆರೆ: ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ನೇಮಕಗೊಂಡಿರುವುದರಿಂದ ಬಿಜೆಪಿಗೆ ಆನೆ ಬಲ ಬಂದಂತಾಗಿದೆ ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಎಲ್ಲಾ ೨೮ ಸ್ಥಾನದಲ್ಲಿ ಜಯಗಳಿಸುವ ವಿಶ್ವಾಸವಿದೆ ಎಂದು ಬಿಜೆಪಿ ಮುಖಂಡರು ಹಾಗೂ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ಕೆ.ಬಿ ಕೊಟ್ರೇಶ್ ಹೇಳಿದ್ದಾರೆ.
ರಾಜ್ಯದಲ್ಲಿ ಕೆಲವರಿಗೆ ಅಸಮಾಧಾನ ಇದೆ ಆದರೆ ಎಲ್ಲವನ್ನೂ ವಿಜಯೇಂದ್ರ ಸರಿಪಡಿಸಲಿದ್ದಾರೆ. ದಾವಣಗೆರೆಯಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಯಾರಿಗೇ ಟಿಕೇಟ್ ನೀಡಲಿ ಗೆಲುವು ಶತಸಿದ್ದ.ನಮ್ಮಲ್ಲಿ ವೈಮನಸ್ಸಿಲ್ಲ ಯಾರಿಗೆ ಟಿಕೇಟ್ ನೀಡಿದರು.ಕೆಲಸ ಮಾಡಲಿದ್ದೇವೆ ಎಂದರು.
ಪಂಚರಾಜ್ಯದಲ್ಲಿ ಅದರಲ್ಲಿ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚನೆಯಾಗಲಿದೆ.ಅದೇ ರೀತಿ ಯಾಗಿ ಛತ್ತೀಸ್ ಘಡ್ ನಲ್ಲಿ ಬಿಜೆಪಿ ಮುಂದಿದೆ ಹಾಗೂ ತೆಲಂಗಾಣದಲ್ಲಿ ಬಿಜೆಪಿಯ ಟ್ರೆಂಡ್ ಇರಲಿಲ್ಲ ಆದರೂ ಕೂಡ ಕಳೆದ ಚುನಾವಣೆಗಿಂತ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಹವಾ ಎದ್ದಿದೆ.ಬಹಳ ಇಂಪ್ರೂಮೆಂಟ್ ಕಂಡು ಬರುತ್ತಿದೆ.ವೋಟ್ ಶೇರಿಂಗ್ ಜೊತೆಗೆ ಕ್ಷೇತ್ರಗಳನ್ನೂ ಕೂಡ ಬಿಜೆಪಿ ಗೆಲ್ಲುತ್ತಿದೆ ಎಂದರು.
ಮಿಜೋರಾಂನಲ್ಲಿದಾಖಲೆಮಾಡುತ್ತಿದ್ದೇವೆ.ಮಧ್ಯ ಪ್ರದೇಶದಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯಲಿದೆ ಕಾರಣ ಜನರಿಗೆ ತಲುಪಬೇಕಾದ ಎಲ್ಲಾ ಸೌಲಭ್ಯಗಳನ್ನು ಬಿಜೆಪಿ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನಸ್ನೇಹಿ ಆಡಳಿತ ಮಧ್ಯಪ್ರದೇಶದಲ್ಲಿ ನೀಡಲಾಗಿದೆ. ಈ ಎಲ್ಲಾ ಕಾರಣದಿಂದ ಈ ಬಾರಿ ಬಿಜೆಪಿ ಬಹುಮತ ಪಡೆದು ಆಡಳಿತ ನಡೆಸಲಿದೆ ಎಂದರು.
ಮಿಜೋರಾಂ ನಲ್ಲಿ ಎಂಎಲ್ ಎ ಜೊತೆಗೂಡಿ ಸರ್ಕಾರ ರಚನೆ ಮಾಡಲಾಗಿತ್ತು.ಪ್ರಧಾನಿ ಮೋದಿವರು ಹಾಗೂ ಅಮಿತ್ ಷಾ ಅವರು ಬಿರುಸಿನ ಪ್ರಚಾರ ಮಾಡಿದ್ದಾರೆ ಜನರು ಬಿಜೆಪಿಗೆ ಮತ ನೀಡಿದ್ದಾರೆ ಆ ಭರವಸೆ ನಮಗಿದೆ ಎಂದರು.ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರು ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಮತ್ತೊಮ್ಮೆ ಮೋದಿಯವರನ್ನು ಅಧಿಕಾರಕ್ಕೆ ತರಬೇಕು.ಜನಸಾಮಾನ್ಯರಲ್ಲಿ ಬಿಜೆಪಿ ಕಡೆ ಒಲವಿದೆ ಎಂದರು.
——–
ಪಂಚ ರಾಜ್ಯ ಚುನಾವಣೆಯಲ್ಲಿ ಮೋದಿ ಮೇನಿಯಾ
…….
ದಾವಣಗೆರೆ : ಕಾಂಗ್ರೆಸ್ ಆಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ ಆದರೆ ಮೋದಿ ವರ್ಚಸ್ಸು ನೂರಕ್ಕೆ ನೂರರಷ್ಟು ಹೆಚ್ಚಾಗಿದೆ. ದೇಶದಲ್ಲೇ ಅಲ್ಲ ಪ್ರಪಂಚದಾದ್ಯಂತ ಮೋದಿಯವರ ವರ್ಚಸ್ಸು ಹೆಚ್ಚಾಗಿದೆ ಎಂದು ದಾವಣಗೆರೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್ ಜಗದೀಶ್ ಹೇಳಿದರು.
ಮೊದಿಯವರೇ ದೇಶದ ಮುಂದಿನ ಪ್ರಧಾನಿ.ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ ಆದರೆ ಪಕ್ಷ ಯಾರಿಗಾದರೂ ಟಿಕೇಟ್ ನೀಡಲಿ ನಾವು ಅವರ ಪರ ಕೆಲಸ ಮಾಡಲಿದ್ದೇವೆ ಎಂದು ತಮ್ಮ ಅಭಿಪ್ರಾಯ ಹೇಳಿದರು. ಲೋಕಸಭಾಚುನಾವಣೆ ನಡೆಯುವುದು ಮೋದಿಯವರ ವರ್ಚಸ್ಸಿನ ಮೇಲೆ. ಮೋದಿ ಎಂದರೇನೆ ಬಿಜೆಪಿ ಎಂದರು.
ಭಾರತೀಯ ಜನತಾ ಪಕ್ಷಕ್ಕೆ ಮೋದಿ ಮನೆಯ ಯಜಮಾನ ಇದ್ದಂತೆ. ದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತ ನಡೆಸಬೇಕೆಂದು ಜನತೆ ಬಯಸಿದ್ದಾರೆ ಆದ್ದರಿಂದ ಪಂಚರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ.
ಭಾರತೀಯತೆ,ಸಂಸ್ಕೃತಿ,ನಮ್ಮ ಪರಂಪರೆ ಹಾಗೂ ಪ್ರಧಾನಿ ಮೋದಿಯವರ ಅಭಿವೃದ್ಧಿ ಕಾರ್ಯಗಳಿಂದ ಬಿಜೆಪಿ ಪಂಚರಾಜ್ಯದಲ್ಲಿ ಆಡಳಿತ ನಡೆಸಲಿದೆ.ಜನತೆ ಬಿಜೆಪಿಗೆ ಬೆಂಬಲ ನೀಡಲಿದ್ದಾರೆಂದರು.
ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ವರವಲ್ಲ ಒಂದು ರೀತಿ ಶಾಪ ಇದ್ದಂತೆ. ಗ್ಯಾರಂಟಿ ಗಳಿಂದ ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಅನಾನುಕೂಲಗಳಾಗಿವೆ.ಕಾಂಗ್ರೆಸ್ ನವರು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ವಿಫಲವಾಗಿದ್ದಾರೆ. ಭಾಗ್ಯಗಳು ಕೆಲಸ ಮಾಡುವುದಿಲ್ಲ.
ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಸಣ್ಣಪುಟ್ಟ ನ್ಯೂನ್ಯತೆಗಳಿಂದ ಕಾಂಗ್ರೆಸ್ ಜಯಗಳಿಸಿತ್ತು ಅಷ್ಟೇ. ಆದರೆ ಮುಂದಿನ ಚುನಾವಣೆಯಲ್ಲಿ ಆ ರೀತಿ ನಡೆಯುವುದಿಲ್ಲ.ತೆಲಂಗಾಣದಲ್ಲಿ ಗೆಲ್ಲುವ ವಿಶ್ವಾಸವಿದೆ.ಆದರೆ ಉತ್ತರ ಭಾರತದಲ್ಲಿ ಜಯಭೇರಿ ಬಾರಿಸಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರದಲ್ಲಿ ಜಯಗಳಿಸಲಿದ್ದೇವೆ.ಮೋದಿಯವರ ಜನಪ್ರಿಯ ಕಾರ್ಯಕ್ರಮಗಳು ಹಾಗೂ ರಾಜ್ಯದ ಸಂಸದರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಗೆಲುವಿಗೆ ಕಾರಣವಾಗಲಿದೆ ಎಂದರು.
…..