ದಾವಣಗೆರೆ: ತುಮಕೂರಿನ ಎಸ್.ಮಾಲ್ ನಲ್ಲಿ ಮೇ 5ರಂದು ನಡೆದ ಮಿಸ್ ಕರ್ನಾಟಕ ಮಾಡೆಲ್‌ 2024 ಆಗಿ ದಾವಣಗೆರೆಯ ಪಿ.ಕೃತಿ ಹೊರ ಹೊಮ್ಮಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಿಸ್ ಕರ್ನಾಟಕ ಕೃತಿ, ದಾವಣಗೆರೆಯ ಕೆಎ ಡ್ಯಾನ್ಸ್ ತಂಡದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನಾನು ಆಯ್ಕೆಯಾಗಿ ನಂತರ ತುಮಕೂರಿನಲ್ಲಿ ನಡೆದ ಅಂತಿಮ ಸ್ಪರ್ಧೆಗೆ ಆಯ್ಕೆ ಆಗಿದ್ದು, ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ 15 ಜನ ಆಯ್ಕೆ ಆಗಿದ್ದರು. ಒಟ್ಟು ನಾಲ್ಕು ಸುತ್ತುಗಳ ನಿರ್ಣಾಯಕ ಆಯ್ಕೆಯಲ್ಲಿ ಅಂತಿಮವಾಗಿ ವಿಜೇತಳಾಗಿದ್ದೇನೆ ಎಂದು ಮಾಹಿತಿ ನೀಡಿದರು.

ಎಲ್ಲಾ ವಯೋಮಾನದ ಗುಂಪಿನಲ್ಲಿ ಈ ಸ್ಪರ್ಧೆ ನಡೆದಿದ್ದು, ಗ್ಲಾಮೀನಿಯಾ ಕಂಪನಿ ಸಹಯೋಗದಲ್ಲಿ ಫ್ಯಾಷನ್ ಶೋನಲ್ಲಿ ವಿಂಗ್ಸ್ ಫ್ಯಾಷನ್ ಕಂಪನಿಯು ಈ ಸ್ಪರ್ಧೆಯನ್ನು ಆಯೋಜಿಸಿತು. ಸರಸ್ವತಿ ನಗರದ ಎ ಬ್ಲಾಕಿನ ನಿವಾಸಿಯಾಗಿದ್ದು, ನಗರದ ತರಳಬಾಳು ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದೇನೆ ಎಂದು ಹೇಳಿದರು.ಸುದ್ದಿಗೋಷ್ಟಿಯಲ್ಲಿ ವಿಜೇತರ ತಂದೆ ಪ್ರದೀಪ್, ತಾಯಿ ಶ್ವೇತಾ, ಸಹೋದರಿ ಖುಷಿ ಇದ್ದರು.

Share.
Leave A Reply

Exit mobile version