
ದಾವಣಗೆರೆ : ಉಡುಪಿಯ ಹಿರಿಯಡ್ಕದಲ್ಲಿ ದಾವಣಗೆರೆಯಲ್ಲಿ ಸೂಪರ್ ಕಾಪ್ ಅಂತಲೇ ಹೆಸರು ಮಾಡಿರುವ ಟಿ.ವಿ.ದೇವರಾಜ್ ಗರುಡ ಗ್ಯಾಂಗ್ ನ ಸದಸ್ಯನೊಬ್ಬನ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ.
ಈ ಹಿಂದೆ ದಾವಣಗೆರೆಯಲ್ಲಿ ಎಸ್ಪಿ ಚೇತನ್ ನೇತೃತ್ವದಲ್ಲಿ ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕಿದ್ದರು ಮರಳು ದಂಧೆ, ಸಾಕಷ್ಟು ಮರ್ಡರ್ ಕೇಸ್, ಬಂದೋ ಬಸ್ತ್ ಸೇರಿದಂತೆ ಇನ್ನಿತರ ಕೆಲಸಗಳಲ್ಲಿ ದೇವರಾಜ್ ತಮ್ಮದೇ ಆದ ಹೆಸರು ಮಾಡಿದ್ದರು. ಈ ಕಾರಣದಿಂದ ದೇವರಾಜ್ ಗೆ ಮುಖ್ಯಮಂತ್ರಿ ಪದಕ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಬಂದಿವೆ.
ಯಾರು ಇಸ್ಹಾಕ್
ಇಸ್ಹಾಕ್ ನಟೋರಿಯಸ್ ಕ್ರಿಮಿನಲ್ ಆಗಿದ್ದು, ಗರುಡ ಗ್ಯಾಂಗ್ ಸದಸ್ಯ. ಈತ ಪರಾರಿಯಾಗುತ್ತಿದ್ದಾಗ ಕಾಲಿಗೆ ಗುಂಡು ತಗುಲಿದೆ.ಹಿರಿಯಡ್ಕ ಠಾಣೆ ವ್ಯಾಪ್ತಿಯಲ್ಲಿ ಈ ಶೂಟೌಟ್ ನಡೆದಿದೆ.

ಇತ್ತೀಚಿಗೆ ಬೆಂಗಳೂರು ಪೊಲೀಸರಿಂದ ತಪ್ಪಿಸಿಕೊಂಡು ಬಂದಿದ್ದ ಇಸಾಕ್ ಮಣಿಪಾಲದಲ್ಲಿ ಕಾಣಿಸಿಕೊಂಡಿದ್ದ. ದರೋಡೆ ಪ್ರಕರಣವೊಂದರ ಸಂಬಂಧ ದೇವರಾಜ್ ನೇತೃತ್ವದ ತಂಡ ಇಸಾಕ್ ಬೆನ್ನು ಹತ್ತಿದ್ದರು. ಆದರೆ ಪೊಲೀಸರಿಂದ ತಪ್ಪಿಸಿಕೊಳ್ಳುವ ವೇಳೆ ಅಪಘಾತ ಮಾಡಿದ್ದ ಇಸಾಕ್, ಬಳಿಕ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ. ಆತನ ಶೋಧ ಕಾರ್ಯದಲ್ಲಿ ಪೊಲೀಸರು ತೊಡಗಿದ್ದು, ಖಡಕ್ ಆಫೀಸರ್ ಎಂದು ಹೆಸರು ಮಾಡಿರುವ ಅರುಣ್ ನೀ ಎಲ್ಲೆ ಹೋದರೂ ನಾ ಬಿಡೋದಿಲ್ಲ ಎಂದು ಶಪಥ ಮಾಡಿದ್ದರು. ನಂತರ
ಬುಧವಾರ ಸಂಜೆ ಕಾರ್ಯಾಚರಣೆಯಲ್ಲಿ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಮೇಲೆ ಮಣಿಪಾಲ ಇನ್ಸ್ಪೆಕ್ಟರ್ ದೇವರಾಜ್ ಮತ್ತು ತಂಡ ಹಿರಿಯಡ್ಕ ವ್ಯಾಪ್ತಿಯಲ್ಲಿ ಫೈರಿಂಗ್ ಮಾಡಿದ್ದಾರೆ. ಕಾರ್ಯಾಚರಣೆ ವೇಳೆ ಇಬ್ಬರು ಪಿಎಸ್ಐ ಹಾಗೂ ಒಬ್ಬರು ಪೇದೆಗೆ ಗಾಯವಾಗಿದೆ.
ತಂಡ ರಚಿಸಲಾಗಿತ್ತು
ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 35/25 ರಲ್ಲಿ ಆರೋಪಿ ಇಸಾಕ್ ಹಾಗೂ ಇತರರ ಬಂಧನಕ್ಕಾಗಿ ಮಣಿಪಾಲ ಪೊಲೀಸ್ ಠಾಣಾ ಇನ್ಸ್ಪೆಕ್ಟರ್, ಮಲ್ಪೆ ವೃತ್ತ ನಿರೀಕ್ಷಕರು ಹಾಗೂ ಇತರ ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಆರೋಪಿತರ ಜಾಡನ್ನು ಹಿಡಿದು, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆರೋಪಿ ಇಸಾಕ್ ಸೇರಿದಂತೆ ಒಟ್ಟು ನಾಲ್ಕು ಜನರನ್ನು ದಸ್ತಗಿರಿ ಮಾಡಿದ್ದರು.
ಈ ಎಲ್ಲಾ ನಾಲ್ಕು ಆರೋಪಿಗಳನ್ನು ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಮಣಿಪಾಲಕ್ಕೆ ಕರೆತರುವಾಗ, ಉಡುಪಿ ಜಿಲ್ಲೆಯ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆ ಅಂಗಡಿ ಬಳಿ, ಸುಮಾರು 7.15ಕ್ಕೆ ಆರೋಪಿ ಇಸಾಕನು ತನಗೆ ತುರ್ತಾಗಿ ವಾಂತಿ ಹಾಗೂ ಮೂತ್ರ ವಿಸರ್ಜನೆ ಮಾಡಲೇಬೇಕೆಂದು ಹಠ ಮಾಡಿ, ಕರೆತರುತ್ತಿದ್ದ ವಾಹನವನ್ನು ನಿಲ್ಲಿಸಿದ್ದ.
ಮೂತ್ರ ವಿಸರ್ಜನೆ ನಂತರ ಏಕಾಏಕಿ ಈತನೊಂದಿಗೆ ಇದ್ದ ಉಡುಪಿ ಪೊಲೀಸ್ ನಗರ ಪೊಲೀಸ್ ಠಾಣೆಯ ಸಿಬ್ಬಂದಿಯವರನ್ನ ತಳ್ಳಿ ಅವರ ಮೇಲೆ, ಆತನ ಕೈಗೆ ಅಳವಡಿಸಲಾಗಿದ್ದ ಲೀಡಿಂಗ್ ಚೈನ್ ಅನ್ನು ಬಳಸಿ ಬಲವಾಗಿ ಸುತ್ತಿ ದೂಡಿದ್ದ
ನಂತರದಲ್ಲಿ ಇಬ್ಬರು ಪೊಲೀಸ್ ಉಪನಿರೀಕ್ಷಕರುಗಳು ಹಿಡಿಯಲು ಪ್ರಯತ್ನಿಸಿದಾಗ ಅವರಿಗೆ ಬಲವಾಗಿ ಒದ್ದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಹೀಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಆತನ ಲೀಡಿಂಗ್ ಚೈನ್ ಕರೆ ತರುತ್ತಿದ್ದ ವಾಹನದ ಎದುರಿನ ಗ್ಲಾಸಿಗೆ ಬಡಿದು, ಗ್ಲಾಸ್ ಒಡೆದು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಗಾಯಗಳಾಗಿತ್ತು.
ಎಚ್ಚರಿಕೆ ನೀಡಿದ ಸಿಪಿಐ ದೇವರಾಜ್
ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ದೇವರಾಜ್ ಇಸ್ಹಾಕ್ ಗೆ ಎಚ್ಚರಿಕೆ ನೀಡಿದ್ದರು. ಆದರೆ ಮಾತು ಕೇಳದೇ ಇದ್ದಾಗ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಕೂಡ ಇಸಾಕ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆರೋಪಿ ಇಸಾಕ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಆರೋಪಿ ಇಸಾಕ್ ಹಾಗೂ ಗಾಯಗೊಂಡ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಸ್ತುತ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಎಸ್ಪಿ ಅರುಣ್, ಸಿಪಿಐ ದೇವರಾಜ್ ದಾವಣಗೆರೆಯಲ್ಲಿ ಹೆಸರು ಮಾಡಿದವರು
ಎಸ್ಪಿ ಅರುಣ್ ಒಬ್ಬ ನಿಷ್ಠಾವಂತ ಅಧಿಕಾರಿಯಾಗಿದ್ದು, ಎಲ್ಲೆ ಹೋದರೂ ತಮ್ಮತನ ಬಿಡೋದಿಲ್ಲ. ಅಧಿಕಾರವಹಿಸಿಕೊಂಡ ಬಳಿಕ ಇದುವರೆಗೂ ಯಾವ ರಾಜಕಾರಣಿ ಮನೆಗೆ ಹೋದವರೆಲ್ಲ. ದಾವಣಗೆರೆಯಲ್ಲಿ ಕೆಲವೇ ದಿನ ಕಾರ್ಯನಿರ್ವಹಿಸಿದರೂ ಇಡೀ ದಾವಣಗೆರೆಯನ್ನು ತಮ್ಮ ಹೆಸರಿನಲ್ಲಿಯೇ ಕಂಟ್ರೋಲ್ ತಂದಿದ್ದರು. ಎಸ್ಪಿ ಅರುಣ್ ಬರುತ್ತಿದ್ದಾರೆ ಎಂದು ಗೊತ್ತಾದ ಕ್ಷಣದಿದಂಲೇ ಭ್ರಷ್ಟ ಪೊಲೀಸ್, ರೌಡಿ ಗಳ ಎದೆಯಲ್ಲಿ ತಳಮಳವಾಗುತ್ತಿತ್ತು..ಇನ್ನು ಸಿಪಿಐ ದೇವರಾಜ್ ಕೂಡ ಒಬ್ಬ ಗೋಲ್ಡ್ ಮೆಡಲಿಸ್ಟ್ ಆಗಿದ್ದು, ಜನರ ಪಾಲಿಗೆ ಸಿಂಗಂ ಅಂತ ಹೆಸರು ಮಾಡಿದ್ದಾರೆ. ಒಟ್ಟಾರೆ ಇವರಿಬ್ಬರು ಜನರ ಪಾಲಿಗೆ ಹೀರೋ ಆಗಿದ್ದು, ಇಂತಹ ಇನ್ನಷ್ಟು ಅಧಿಕಾರಿಗಳು ಸಮಾಜಕ್ಕೆ ಬೇಕಿದೆ.