ದಾವಣಗೆರೆ : ದಾವಣಗೆರೆಯಲ್ಲಿ ಸೂಪರ್ ಕಾಪ್ ಎಂದೆ ಹೆಸರು ಮಾಡಿದ್ದ ಡಿಎಸ್ಪಿ ಬಸವರಾಜ್ ಮಗಳು ದ್ವೀತಿಯ ಪಿಯುಸಿ ಯಲ್ಲಿ ಕಾಲೇಜಿಗೆ ಟಾಪರ್ ಆಗಿದ್ದಾಳೆ.

ಬಿ. ದೀಕ್ಷಾ ಬಾಗೇವಾಡಿ 600 ಅಂಕಕ್ಕೆ 581 ಅಂಕಗಳನ್ನು ಪಡೆದಿದ್ದಾರೆ. ಅಥಣಿ ಪಿಯು ಕಾಲೇಜಿನಲ್ಲಿ ಓದಿದ್ದು, ಟಾಪರ್ ವಿಭಾಗದಲ್ಲಿ ಒಬ್ಬರಾಗಿದ್ದಾರೆ.

ನನಗೆ ನನ್ನ ತಂದೆ-ತಾಯಿ, ಗುರುಗಳ ಸಹಕಾರ ಇದ್ದ ಕಾರಣ ಉತ್ತಮ ಅಂಕಗಳನ್ನು ತೆಗೆದುಕೊಂಡಿದ್ದೆನೆ. ಕಾಲೇಜಿನಲ್ಲಿ ಕೂಡ ಪದೇ, ಪದೇ ರಿವಿಜನ್ ಮಾಡುತ್ತಿದ್ದರು. ಅಪ್ಪ ಡ್ಯೂಟಿಯಲ್ಲಿ ಯಾವಾಗಲೂ ಬ್ಯೂಸಿಯಾಗುತ್ತಿದ್ದರು. ಅಮ್ಮ ನನ್ನ ಓದಿಗೆ ಸಹಕಾರಿಯಾಗಿದ್ದರು. ಟೈಮ್ ಟೇಬಲ್ ಇರಲಿಲ್ಲ. ಕಷ್ಟಪಟ್ಟು ಓದಿದೆ. ಇನ್ನೂ ಹೆಚ್ಚಿನ ಅಂಕಗಳು ಬರುತ್ತೇ ಅಂತ ನಿರೀಕ್ಷೇ ಮಾಡಿದ್ದೇ..ಸಿಇಟಿ, ನೆಟ್ ಎಕ್ಸಾಂ ಇದೆ.ರಿಸಲ್ಟ್ ಬಂದ ಮೇಲೆ ಯೋಚನೆ ಮಾಡುತ್ತೇನೆ ಅನ್ನುತ್ತಾರೆ ದೀಕ್ಷಾ.

Share.
Leave A Reply

Exit mobile version