ದಾವಣಗೆರೆ : ದೆಹಲಿಯಲ್ಲಿ ಎಲ್ಲವೂ ತೀರ್ಮಾನವಾಗಿದೆ. ಸ್ವಲ್ಪ ದಿನ ಕಾಯಿರಿ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ. ನನ್ನ ಕೈ ಬಲ ಪಡಿಸಲು ಸಹಕರಿಸಿ ಅಂತೇಳಿ ಇತ್ತೀಚೆಗೆ ಡಿಸಿಎಂ ಡಿಕೆಶಿ ಹೇಳಿರೋ ಈ ಒಂದು ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನುಂಟು ಮಾಡಿದೆ. ಹಾಗಾದ್ರೆ ಡಿಕೆಶಿ ಹೇಳಿರೋ ಆ ದಿಲ್ಲಿ ತೀರ್ಮಾನ ಏನು.? DK ಒಕ್ಕಲಿಗ ದಾಳಕ್ಕೆ ದಳ ಭದ್ರಕೋಟೆ ಛಿದ್ರವಾಗುತ್ತಾ..? ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ್ರಾ ಡಿಸಿಎಂ ಡಿಕೆಶಿ..? ಅಷ್ಟಕ್ಕೂ ಸಿಎಂ ಸಿದ್ರಾಮಯ್ಯ 60 ಸಾವಿರ ಲೀಡ್ ಕೊಡಿ ನನ್ನ ಯಾರೂ ಟಚ್ ಮಾಡೋದಕ್ಕೆ ಆಗಲ್ಲ ಅಂತೇಳಿದ್ಯಾಕೆ.?

ಒಕ್ಕಲಿಗ ಅಸ್ತ್ರ.. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಇಬ್ರು ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಒಕ್ಕಲಿಗ ಅಸ್ತ್ರವನ್ನ ಜಳಪಿಸುತ್ತಿದ್ದಾರೆ. ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳನ್ನ ಗೆಲ್ಲಿಸಿಕೊಡೋ ಜವಾಬ್ದಾರಿಯನ್ನ ಸಿಎಂ ಸಿದ್ರಾಮಯ್ಯನವರ ಹೆಗಲಿಗೆ ಹೈಕಮಾಂಡ್ ಹಾಕಿದೆ. ಅದೇ ರೀತಿ ಬೆಂಗಳೂರಲ್ಲಿ ಹೆಚ್ಚು ಎಂಪಿ ಸೀಟುಗಳನ್ನ ಗೆಲ್ಲಿಸಿಕೊಡೋ ಹೊಣೆಯನ್ನ ಡಿಸಿಎಂ ಡಿಕೆಶಿಗೆ ಹೊರಿಸಿದೆ. ಈ ಎರಡು ಟಾಸ್ಕ್​​​ಗಳಲ್ಲಿ ಯಾರು ಗೆಲ್ತಾರೋ ಅವರಿಗೆ ಸಿಎಂ ಹುದ್ದೆ.. ಸಿದ್ದು ಚಾಮರಾಜನಗರ ಮತ್ತು ಮೈಸೂರುಗಳನ್ನ ಗೆದ್ರೆ ಸಿಎಂ ಕುರ್ಚಿಯಲ್ಲಿ ಮುಂದುವರೆಯಬಹುದು. ಡಿಕೆಶಿ ಬೆಂಗಳೂರಲ್ಲಿ ಹೆಚ್ಚು ಎಂಪಿ ಸೀಟುಗಳನ್ನ ಗೆಲ್ಲಿಸಿಕೊಟ್ಟು ಸಿದ್ದುಗೆ ಹಿನ್ನಡೆಯಾದ್ರೆ ಇನ್ನ ಒಂದೂವರೆ ವರ್ಷದ ನಂತರ ಡಿಕೆಶಿಗೆ ಸಿಎಂ ಹುದ್ದೆ ಸಿಗುತ್ತೆ ಅನ್ನೋ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಕೇಳಿಬರ್ತಾಯಿವೆ. ಇದೇ ಕಾರಣಕ್ಕೆ ಇತ್ತೀಚೆಗೆ ಸಿಎಂ ಸಿದ್ರಾಮಯ್ಯ ಮೈಸೂರಲ್ಲಿ ನಿಂತಿರೋದು ಎಂ ಲಕ್ಷಣ್ ಅಲ್ಲ. ನಾನೇ ನಿಂತಿದ್ದೀನಿ ಅಂತೇಳಿ ವೋಟ್ ಹಾಕಿ.. ಎಂ. ಲಕ್ಷ್ಮಣ್ ಗೆದ್ರೆ ನಾನೇ ಗೆದ್ದಂತೆ.. ಅವರಿಗೆ 60 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಡಿ, ನನ್ನ ಯಾರೂ ಟಚ್ ಮಾಡೋದಕ್ಕೆ ಆಗಲ್ಲ ಅಂತೇಳಿದ್ರು. ಸಿದ್ರಾಮಯ್ಯನವರ ಈ ಮಾತಿನ ಹಿಂದಿರೋ ಹಲವು ಗೂಢಾರ್ಥಗಳ ಬಗ್ಗೆ ವ್ಯಾಪಕ ಚರ್ಚೆ ಆಗಿತ್ತು.

ಇದೇ ರೀತಿ ಇದೀಗ ಡಿಕೆಶಿ ಆಡಿರೋ ಮಾತುಗಳು ಕೂಡ ಸಾಕಷ್ಟು ಕುತೂಹಲ ಕೆರಳಿಸ್ತಾಯಿವೆ. ಹೌದು ವೀಕ್ಷಕರೇ, ಮೈಸೂರು ನಗರದಲ್ಲಿ ನಡೆದ ಮೈಸೂರು-ಕೊಡಗು ಜಿಲ್ಲೆಯ ಒಕ್ಕಲಿಗ ಜನಾಂಗದ ಮುಖಂಡರ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಮೈಸೂರಿನಲ್ಲಿ ಒಕ್ಕಲಿಗರ ಬೆಳವಣಿಗೆಗೆ ಸ್ಪಲ್ಪ ಸಮಸ್ಯೆಗಳಿವೆ. ಅದನ್ನು ಮುಂದಿನ ದಿನಗಳಲ್ಲಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ. ಅಷ್ಟೇ ಅಲ್ಲ, ನಿತ್ಯ ಕುಮಾರಸ್ವಾಮಿ ನನ್ನ ಬಗ್ಗೆ, ಚೆಲುವರಾಯಸ್ವಾಮಿ, ಕೆ.ವೆಂಕಟೇಶ್ ಸೇರಿದಂತೆ ಇತರೆ ಸಾಮಾನ್ಯ ಒಕ್ಕಲಿಗ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇಂತಹ ಚುಚ್ಚು ಮಾತುಗಳನ್ನು ಎಷ್ಟು ದಿನ ಸಹಿಸಿಕೊಳ್ಳಲು ಸಾಧ್ಯ ಅಂತೇಳಿ ಪ್ರಶ್ನಿಸಿದ್ದಾರೆ. ಇದೇ ವೇಳೆ ಜೆಡಿಎಸ್‌ನ ಆಯುಷ್ಯ ಮುಗಿದಿದೆ. ಬಿಜೆಪಿಯಲ್ಲಿ ಒಕ್ಕಲಿಗರ ನಾಯಕತ್ವ ಬೆಳೆಯಲು ಅವಕಾಶವಿಲ್ಲ. ಹಾಗಾಗಿಯೇ ಕಾಂಗ್ರೆಸ್ ಪಕ್ಷದಲ್ಲಿ ಮೈಸೂರು-ಕೊಡಗು, ಮಂಡ್ಯ, ಹಾಸನ, ತುಮಕೂರು ಸೇರಿದಂತೆ ಇತರೆಡೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗರಿಗೆ ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.

ಎಂ.ಲಕ್ಷ್ಮಣ್ ಅವರ ಸರಳ ಸಜ್ಜನಿಕೆಯ ಒಬ್ಬ ಸಾಮಾನ್ಯ ಪ್ರಜೆ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದಾರೆ. 47 ವರ್ಷಗಳ ನಂತರ ಒಕ್ಕಲಿಗ ಸಮುದಾಯದ ಲಕ್ಷ್ಮಣ್ ಅವರಿಗೆ ಟಿಕೆಟ್ ನೀಡಿದ್ದೇವೆ. ಈ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಮತದಾರರು ಇರುವುದರಿಂದ ಪೂರ್ಣ ಪ್ರಮಾಣದಲ್ಲಿ ಲಕ್ಷ್ಮಣ್ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಹಾಸನ, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಯಾವ ಕಾರಣಕ್ಕೂ ಗೆಲ್ಲುವುದಿಲ್ಲ. ಮಹಿಳೆಯರಿಗೆ ನೀಡಿರುವ ಯೋಜನೆ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಗುರವಾಗಿ ಮಾತನಾಡಿದ್ದಾರೆ. ಇದರಿಂದ ನಮ್ಮ ಸಮಾಜಕ್ಕೆ ಅವಮಾನವಾಗುವುದಿಲ್ಲವೇ? ನಮ್ಮ ಮನೆಯ ಹೆಣ್ಣು ಮಕ್ಕಳಿಗೂ ಇದು ಅನ್ವಯಿಸುವುದಿಲ್ಲವೇ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎಂಟು ಒಕ್ಕಲಿಗ ಅಭ್ಯರ್ಥಿಗಳಿಗೆ ಅವಕಾಶ ಮಾಡಿ ಕೊಟ್ಟಿದ್ದು, ಈ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ನನ್ನ ನಾಯಕತ್ವಕ್ಕೆ ಈ ಭಾಗದ ಒಕ್ಕಲಿಗರು ಮತ್ತಷ್ಟು ಶಕ್ತಿ ತುಂಬಬೇಕು, ನಿಮ್ಮ ಆಸೆ ಹುಸಿಯಾಗೋದಿಲ್ಲ ಅಂತೇಳಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಮಾತು ಇದೀಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಇಷ್ಟಕ್ಕೆ ನಿಲ್ಲದ ಡಿಕೆಶಿ, ದಿಲ್ಲಿಯಲ್ಲಿ ಯಾವೆಲ್ಲಾ ತೀರ್ಮಾನ ಆಗ್ಬೇಕೋ, ಅದೆಲ್ಲಾ ಆಗಿ ಹೋಗಿದೆ. ಸ್ವಲ್ಪ ದಿನ ಕಾಯಿರಿ, ನೀವೆಲ್ಲ ನನ್ನ ಬೆಂಬಲಕ್ಕೆ ನಿಲ್ಲಬೇಕು. ಈಗ ಅದರ ಬಗ್ಗೆ ಚರ್ಚೆಗಳು ಬೇಡ ಅಂತೇಳಿ ಡಿಸಿಎಂ ಡಿಕೆಶಿ ಹೇಳಿದ್ದಾರೆ.

ಇದಷ್ಟೇ ಅಲ್ಲ., ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐದು ವರ್ಷ ಅಲ್ಲ. 10 ವರ್ಷದ ಸರ್ಕಾರ ಅಂತೇಳಿದ್ದಾರೆ. ಹಾಗಾದ್ರೆ ಈ ಟರ್ಮ್​​​ ಸಿದ್ದು ಫುಲ್​ಟೈಂ ಸಿಎಂ ಆಗಿ ಮುಂದುವರೆಯುತ್ತಾರಾ.? ಮುಂದಿನ ಐದು ವರ್ಷಕ್ಕೆ ಡಿಕೆಶಿ ಟವಲ್ ಹಾಕಿದ್ದಾರಾ ಅನ್ನೋ ಅನುಮಾನಗಳು ವ್ಯಕ್ತವಾಗ್ತಾಯಿವೆ.

ಹಾಗಾದ್ರೆ ಹಳೆ ಮೈಸೂರು ಭಾಗದ ಒಕ್ಕಲಿಗ ಮತಗಳು ಡಿಕೆಶಿನ ಸಿಎಂ ಮಾಡೋಕೆ ಸಾಥ್ ಕೊಡ್ತಾವಾ.? ಜೆಡಿಎಸ್​​ಗೆ ಕೈ ಕೊಟ್ಟು ಕಾಂಗ್ರೆಸ್ ಕೈ ಹಿಡಿಯುತ್ತಾವಾ.? ಸಿದ್ದು ಮತ್ತು ಡಿಕೆಶಿ ಮಾತುಗಳ ಹಿಂದಿರೋ ಗೂಡಾರ್ಥಗಳ ಬಗ್ಗೆ ನೀವೇನಂತಿರಾ?

Share.
Leave A Reply

Exit mobile version