ಹಗರಿಬೊಮ್ಮನಹಳ್ಳಿ :  ರಾಯಚೂರು ಜಿಲ್ಲೆಯ ತಿಂಥಣಿ ಬ್ರಿಜ್‌ನ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಜ.12ರಿಂದ 14ವರೆಗೆ ಹಾಲುಮತ ಸಂಸ್ಕೃತಿ ವೈ ಭವ ಜರುಗಲಿದೆ ಎಂದು ಕನಕಗುರು ಪೀಠದ ತಾಲೂಕು ಧರ್ಮದರ್ಶಿ ಕರಿಗಾರ ಚಂದ್ರಪ್ಪ ತಿಳಿಸಿದರು.

ಪಟ್ಟಣದ ಸರ್ಕ್ಯೂಟ್ ಹೌಸ್‌ನಲ್ಲಿ ಹಾಲಮತ ಸಂಸ್ಕೃತಿ ವೈಭವದ ಪೋಸ್ಟರ್ ಅನಾವರಣಗೊಳಿಸಿ ಬಳಿಕ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದರು. ಪೀಠದಲ್ಲಿ ಜ.12ರಂದು ಶಿವಸಿದ್ದ ಯೋಗ ಮಂದಿರಕ್ಕೆ ಶಿಲಾನ್ಯಾಸ, ಪೂಜಾರಿಗಳ ಸಮಾವೇಶ ನಡೆಯಲಿದೆ. ಜ.13ರಂದು ನಾನಾ ಕ್ಷೇತ್ರಗಳಲ್ಲಿ ಗುರುತರ ಸೇವೆಸಲ್ಲಿಸಿದ ಸಾಧಕರಿಗೆ ತಲಾ 50 ಸಾವಿರ ರೂ. ಮೊತ್ತದ ಹಾಲುಮತ ಭಾಸ್ಕರ, ಸಿದ್ದಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಾಲುಮತ ವೈಭವ ಯಶಸ್ವಿಗೊಳಿಸಲು ತಾಲೂಕಿನಿಂದ ಪೂರಕ ಸಿದ್ಧತೆ ಕೈಗೊಳ್ಳಲಾಗುವುದು ಎಂದರು.

ಟಗರಿನ ಕಾಳಗ

ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ ಮಾತನಾಡಿ, ಮಠದ ಆವರಣದಲ್ಲಿ ಜ.14ರಂದು ಸಿದ್ದರಾಮೇಶ್ವರ ಜಯಂತ್ಯುತ್ಸವ ಜರುಗಲಿದೆ. ತಲಾ 50 ಸಾವಿರ ರೂ. ಬಹುಮಾನ ಒಳಗೊಂಡ ಟಗರಿನ ಕಾಳಗ, ಎತ್ತುಗಳ ಭಾರ ಎಳೆಯುವ ಸ್ಪರ್ಧೆ ನಡೆಯಲಿದೆ. ಹಾಲುಮತ ಸಮಾಜ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿ ಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಸಂಸ್ಕೃತಿ ಉತ್ಸವದ ಮೂಲಕ ಸಮಾಜವನ್ನು ಶ್ರೀಗಳು ಸುಸಜ್ಜಿತವಾಗಿ ಸಂಘಟಿಸುತ್ತಿದ್ದಾರೆ ಎಂದರು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ನಿಟಕಪೂರ್ವ ಧರ್ಮದರ್ಶಿ ಬಣಕಾರ ಗೋಣೆಪ್ಪ, ಜಿಲ್ಲಾ ಕುರುಬರ ಸಂಘದ ಮಾಜಿ ಉಪಾಧ್ಯಕ್ಷ ರಾಮಲಿಂಗಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಹ್ಯಾಳ್ಯದ ಚನ್ನಬಸಪ್ಪ ಮಾತನಾಡಿದರು. ಇದೇವೇಳೆ ರಂಗಭೂಮಿ ಸೇವೆಗೆ ಗೌರವ ಡಾಕ್ಟರೇಟ್ ಪಡೆದ ಕಲಾವಿದ ಹರೇಗೊಂಡನಹಳ್ಳಿ ಡಾ.ಉಮಾಶಂಕರ ಮತ್ತು ಧರ್ಮದರ್ಶಿಗಳನ್ನು ಸನ್ಮಾನಿಸಲಾಯಿತು. ಮುಖಂಡರಾದ ಡೊಳ್ಳಿನ ನಾಗಪ್ಪ, ಹುಡೇದ್ ಹುಲುಗಪ್ಪ, ಪರಶುರಾಮ, ಭರ್ಮನಗೌಡ, ನೆಲ್ಲುದ್ರಿ ಶೇಖರಪ್ಪ, ಕೊಟ್ರೇಶ ಇತರರಿದ್ದರು.ಹಗರಿಬೊಮ್ಮನಹಳ್ಳಿ ಸರ್ಕ್ಯೂಟ್ ಹೌಸ್ನಲ್ಲಿ ಹಾಲುಮತ ಸಂಸ್ಕೃತಿ ವೈಭವದ ಪೋಸ್ಟರ್ ಗಳನ್ನು ಸಮಾಜದ ಮುಖಂಡರು ಅನಾವರಣಗೊಳಿಸಿದರು.

Share.
Leave A Reply

Exit mobile version