ಭದ್ರಾವತಿ: ಸಂವಿಧಾನ ರಚನೆಗೊಂಡು 75ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಸಂವಿಧಾನ ಜಾಗೃತಿ ಜಾಥಾ ಆಯೋಜಿಸಲಾಗಿದ್ದು, ಜಾಥಾವು ಭದ್ರಾವತಿ ತಾಲ್ಲೂಕಿನ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಮತ್ತು ತಾವರಘಟ್ಟ ಗ್ರಾಮ ಪಂಚಾಯಿತಿ ಸಂವಿಧಾನದ ಪೀಠಿಕೆಯನ್ನು ಓದಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗೋಪಾಲಪ್ಪ, ಕುವೆಂಪು ವಿವಿ ಕುಲಪತಿ ಗಳು, ಸಿಬ್ಬಂದಿ ವರ್ಗ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಪ್ರಧಾನ ಸಂಚಾಲಕ ಎಸ್ ಪುಟ್ಟರಾಜು, ಎಸ್ ಗೋವಿಂದರಾಜು ಆರ್ ಹರೀಶ, ನರಸಿಂಹಮೂರ್ತಿ ಡಿ,ಜಮೀರ್ ಅತ್ತಿಗುಂದ, ಮಹೇಶ್ ಕುಮಾರ್ ಅತ್ತಿಗುಂದ, ನವೀನ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು