ದಾವಣಗೆರೆ : ರಾಜ್ಯದ ರೈತರ ನಿದ್ದೆಗೆಡಿಸಿರುವ ವಕ್ಫ್ ಕಾಯ್ದೆ, ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ಗೆ ಭಾರಿ ಮುಜುಗರ ತರಿಸುತ್ತಿದೆ. ಮೈತ್ರಿ ನಾಯಕರು ಇದೇ ವಿಷಯವನ್ನು ಉಪಚುನಾವಣೆಯಲ್ಲಿ ಪ್ರಸ್ತಾಪ ಮಾಡುತ್ತಿದ್ದು ಹಿಂದು ವೋಟ್ಗಳು ಒನ್ಸೈಡ್ ಮಾಡುವ ಪ್ರಯತ್ನ ಬಿಜೆಪಿ ನಾಯಕರು ನಡೆಸಿದ್ದಾರೆ.
ಈ ವಿಚಾರದ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಸ್ಪಷ್ಟನೇ ನೀಡಿದರೂ ಉಪಚುನಾವಣೆಯಲ್ಲಿ ಭಾರಿ ಚರ್ಚೆ ಆಗುತ್ತಿದೆ. ಹಾಗಾದ್ರೆ ಉಪಚುನಾವಣೆಯಲ್ಲಿ ವಕ್ಫ್ ವಿಷಯ ಕಾಂಗ್ರೆಸ್ ಮುಳುವಾಗುತ್ತಾ? ಬಿಜೆಪಿಗೆ ಲಾಭ ತಂದುಕೊಡುತ್ತಾ? ಇಲ್ಲಿದೆ ಮಾಹಿತಿ.
ಸಂಡೂರು, ಶಿಗ್ಗಾವಿ ಹಾಗೂ ಚನ್ನಪಟ್ಟಣ ಉಪಚುನಾವಣೆಯ ಪ್ರಚಾರದ ಕಾವು ಜೋರಾಗಿದ್ದು, ಪ್ರತಿಪಕ್ಷ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಚುನಾವಣಾ ಪ್ರಚಾರದ ವೇಳೆ ವಕ್ಫ್ ವಿವಾದ ಪ್ರಸ್ತಾಪಿಸಿರುವ ಬಿಜೆಪಿ ನಾಯಕರು, ರೈತರು ಭೂದಾಖಲೆಗಳನ್ನು ಒಮ್ಮೆ ಪರಿಶೀಲಿಸುವಂತೆ ಮನವಿ ಮಾಡಿದೆ.
ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕಿಳಿದಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಭಾನುವಾರ ಚಕ್ಕರೆ ಗ್ರಾಮದಲ್ಲಿ ಪ್ರಚಾರ ನಡೆಸಿದರು. ವಕ್ಫ್ ಮಂಡಳಿ ಎಲ್ಲೆಂದರಲ್ಲಿ ಭೂಮಿ ಕಸಿಯುವ ಪ್ರಯತ್ನಗಳನ್ನು ಮಾಡಿದ್ದು, ರೈತರು ಕೂಡಲೇ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ, ತಮ್ಮ ಭೂಮಿ ದಾಖಲೆಗಳನ್ನು ಪರಿಶೀಲಿಸಬೇಕೆಂದು ಮನವಿ ಮಾಡಿಕೊಂಡರು.
ಚನ್ನಪಟ್ಟಣ ತಾಲೂಕಿನ ಯಲಿಯೂರು ಬಳಿಯ ಹಿಂದೂಗಳ ರುದ್ರಭೂಮಿಯ ಮೇಲೂ ವಕ್ಫ್ ಕಣ್ಣು ಬಿದ್ದಿದೆ. ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಾ ಬಂದಿದ್ದರೂ ರೈತರ ಭೂಮಿಗಳ ನಕಲಿ ದಾಖಲೆಗಳ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ.ಭಾರತೀಯ ಸೇನೆಗಿಂತಲೂ ವಕ್ಫ್ ಮಂಡಳಿ ಹೆಚ್ಚಿನ ಭೂಮಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ವೇಳೆ ತಮ್ಮನ್ನು ತಾವು ಭಗೀರಥ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಅಂದಿನ ಸಿಎಂ ಡಿವಿ ಸದಾನಂದಗೌಡ ಅವರು 17 ಕೆರೆಗಳಿಗೆ ನೀರು ತುಂಬಿಸಲು ಹಣ ಮಂಜೂರು ಮಾಡಿದ್ದರು. ನಂತರ ಸಿಎಂ ಆದ ಬಸವರಾಜ ಬೊಮ್ಮಾಯಿ ಅವರು ಹಣ ಬಿಡುಗಡೆಗೆ ಆದೇಶ ನೀಡಿದ್ದರು ನೀರಾವರಿ ಎಂಜಿನಿಯರ್ ವೆಂಕಟೇಗೌಡ ಅವರು ಯೋಜನೆಗೆ ಚಾಲನೆ ನೀಡಿದ್ದರು. ವೆಂಕಟೇಗೌಡರು ನಮ್ಮ ಮೇಲೆ ಹಲವು ಬಾರಿ ಒತ್ತಡ ಹೇರಿ ಈ ಯೋಜನೆ ಜಾರಿಯಾಗುವಂತೆ ಮಾಡಿದ್ದರು ಎಂದರು.
ಒಟ್ಟಿನಲ್ಲಿ ಉಪಚುನಾವಣೆ ಸಂದರ್ಭದಲ್ಲಿ ಎದ್ದಿರುವ ವಕ್ಪ್ ಎನ್ನುವ ನೆಗೆಟಿವ್ ಎನರ್ಜಿಯನ್ನು ಬಿಜೆಪಿ ಸಕ್ರೀಯವಾಗಿ ಬಳಸಿಕೊಳ್ಳುತ್ತಿದ್ದು ಕಾಂಗ್ರೆಸ್ ಸರ್ಕಾರಕ್ಕೆ ಭಾರಿ ಮುಜುಗರ ತರಿಸುತ್ತಿದೆ.