ದಾವಣಗೆರೆ: ಕಾಂಗ್ರೆಸ್ ಸುಳ್ಳು, ಅಪಪ್ರಚಾರ ಮತ್ತು ಅನುಮಾನದ ಮೂಲಕವೇ ಬಿಜೆಪಿ ಪಕ್ಷವನ್ನು ಸೋಲಿಸಲು ಯತ್ನಿಸುತ್ತಿದೆ. ಆದರೆ, ದೇಶದ ಜನರಿಗೆ ಮೋದಿಯ ತಾಕತ್ತು ಮತ್ತು ಪಾರದರ್ಶಕ ಆಡಳಿತದ ಮೇಲೆ ನಂಬಿಕೆಯಿರುವುದರಿಂದ ಈ ಬಾರಿಯೂ ಮೋದಿ ದೇಶದ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷವು ನೀತಿ, ನೇತೃತ್ವ ಮತ್ತು ನಿಯತ್ತು ಈ ಮೂರು ಅಂಶಗಳ ಮೇಲೆ ಬಲವಾದ ನಂಬಿಕೆಯಿಟ್ಟುಕೊಂಡಿರುವ ಪಕ್ಷವಾಗಿದ್ದು, ನಮ್ಮದು ದೇಶ ವಿಕಾಸದ ನೀತಿ ಎಂಬುದು ಸ್ಪಷ್ಟವಿದೆ, ದೇಶ ಮಾತ್ರವಲ್ಲ ಇಡೀ ವಿಶ್ವವೇ ಮೆಚ್ಚಿರುವ ಮೋದಿ ನಮ್ಮ ಪಕ್ಷದ ನೇತೃತ್ವ ವಹಿಸಿದ್ದಾರೆ ಹಾಗೂ ಅತ್ಯಂತ ಪರಿಶ್ರಮ ಮತ್ತು ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸಿದ್ದಾರೆ. ಆದ್ದರಿಂದ ಜನರು ಕೂಡ ಬಿಜೆಪಿಯನ್ನು ಬೆಂಬಲಿಸುವ ನಂಬಿಕೆ ನಮಗಿದೆ ಎಂದರು.

ಬಿಜೆಪಿ ಅಂತ್ಯೋದಯದ ಮೂಲಕ ಅಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳನ್ನು ತಲುಪಿಸಲು ಪ್ರಯತ್ನಿಸುವ ಪಕ್ಷವಾಗಿದ್ದು, ದೇಶದ ಜನರು ಬೇಡುವ ಸ್ಥಿತಿಯಿಂದ ನೀಡುವ ಸ್ಥಿತಿಗೆ ತರಬೇಕೆನ್ನುವುದು ಮೋದಿಯವರ ಆಶಯವಾಗಿದೆ. ಸುಧಾರಣೆ, ಸಂರಕ್ಷಣೆ, ಸಾಂಸ್ಕೃತಿಕ, ಸಮೃದ್ಧಿ ಮತ್ತು ಅಭಿವೃದ್ಧಿಯ ಪರಿಕಲ್ಪನೆಯನೆಯಲ್ಲಿ ಬಿಜೆಪಿ ಯೋಜನೆ ರೂಪಿಸುತ್ತದೆ ಎಂದು ತಿಳಿಸಿದರು.

ಈಗಾಗಲೇ ಭಾರತ ಜಾಗತಿಕವಾಗಿ ೩ನೇ ಆರ್ಥಿಕ ಶಕ್ತಿ ಹೊಂದಿರುವ ದೇಶವಾಗಿದ್ದು, ಮುಂಬರುವ ೨ ವರ್ಷಗಳಲ್ಲಿ ಜಗತ್ತಿನ ನಂ.೧ ಆರ್ಥಿಕ ಬಲಾಢ್ಯ ದೇಶವಾಗಿ ಬೆಳೆಯಲು ಬಿಜೆಪಿ ಯೋಜನೆಗಳನ್ನು ಸಿದ್ಧಪಡಿಸಿದೆ ಎಂದರು.

ಹೀಗೆ ದೇಶದ ಅಭಿವೃದ್ಧಿಯ ಪರಿಕಲ್ಪನೆ ಹೊಂದಿರುವ ಮೋದಿಯವರು ಎಲ್ಲರನ್ನೂ ಒಳಗೊಳ್ಳುವಿಕೆ, ಏಕತೆಗೆ ಒತ್ತು ನೀಡುತ್ತಾರೆ. ಹೀಗಿದ್ದರೂ ಕಾಂಗ್ರೆಸ್‌ನವರು ಮೋದಿ ಅವರ ವಿರುದ್ಧವಾಗಿ ಸುಳ್ಳು, ಅಪಪ್ರಚಾರ ಮತ್ತು ಅನುಮಾನ ಹುಟ್ಟಿಹಾಕುವುದನ್ನೇ ಅಜೆಂಡಾ ಮಾಡಿಕೊಂಡು ಮತ ವಿಭಜಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್‌ನವರು ತೆರಿಗೆ, ಬರಪರಿಹಾರ ಹಾಗೂ ಮೀಸಲಾತಿ ವಿಷಯದಲ್ಲಿ ಅಪಪ್ರಚಾರ ಮಾಡುತ್ತಿದ್ದು, ಮೋದಿ ಅವರು ರಾಜ್ಯಕ್ಕೆ ೫.೨೯ ಲಕ್ಷ ಕೋಟಿ ತೆರಿಗೆ ಪಾಲು ನೀಡಿದ್ದಾರೆ. ಮನಮೋಹನ್ ಸಿಂಗ್ ಅವರು ಪ್ರಧಾನಿ ಆದಾಗಲೂ ಇಷ್ಟು ಹಣ ವಾಪಸ್ ಬಂದಿರಲಿಲ್ಲ. ಜತೆಗೆ ಕಳೆದ ೧೦ ವರ್ಷಗಳಲ್ಲಿ ಕೇಂದ್ರದಿAದ ರಾಜ್ಯಕ್ಕೆ ಬರಪರಿಹಾರವಾಗಿ ೪,೫೭೧ ಕೋಟಿ ಹಣ ನೀಡಲಾಗಿದೆ. ಮೀಸಲಾತಿ ವಿರೋಧಿಗಳು ನಾವು ಎಂದು ಕಾಂಗ್ರೆಸ್ ಬಿಂಬಿಸುತ್ತಿದ್ದು, ಅಸಲಿಗೆ ಪರಿಶಿಷ್ಟರ ಮೀಸಲಾತಿ ಒಳಗೆ ಮತೀಯ ಮೀಸಲಾತಿ ತುರುಕಲು ಪ್ರಯತ್ನಿಸಿದ್ದೇ ಕಾಂಗ್ರೆಸ್‌ನವರು. ಆದರೆ ಮೋದಿಯವರು ಪರಿಶಿಷ್ಟರ ಮೀಸಲಾತಿಯನ್ನು ಹೆಚ್ಚಿಸಿದರು ಎಂದು ತಿಳಿಸಿದರು.

ಅಂಬೇಡ್ಕರ್ ಆಶಯಗಳನ್ನು ಮತ್ತು ಸಂವಿಧಾನವನ್ನು ಉಳಿಸುವ ಕೆಲಸವನ್ನು ಮೋದಿಯವರು ಮಾಡುತ್ತಿದ್ದಾರೆ. ಕಾಂಗ್ರೆಸ್ ಸುಳ್ಳನ್ನೇ ಮನೆದೇವರನ್ನಾಗಿ ಮಾಡಿಕೊಂಡು ಅಪಪ್ರಚಾರ ಮಾಡುತ್ತಿದೆ. ಇವರಿಗೆ ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರೆಂದರೆ ಗೊತ್ತಿಲ್ಲ. ರಾಹುಲ್ ಗಾಂಧಿ ಹೆಸರು ಹೇಳಿದರೆ ಮತ ಸಿಗುವುದಿಲ್ಲ ಎಂಬ ಸತ್ಯ ಕಾಂಗ್ರೆಸ್‌ಗೆ ತಿಳಿದಿದೆ ಎಂದು ವ್ಯಂಗ್ಯವಾಡಿದರು.

ಕಾAಗ್ರೆಸ್‌ನವರು ರಾಜ್ಯದಲ್ಲಿ ಅಧಿಕಾರದಲ್ಲಿದ್ದು ಈ ಬರಗಾಲದಲ್ಲಿ ಎಷ್ಟು ಗೋಶಾಲೆಗಳನ್ನು ತೆರೆದಿದದಾರೆ, ಎಷ್ಟು ಮೇವು ನಿಡಿದ್ದಾರೆ ಎಂಬುದರ ಬಗ್ಗೆ ಲೆಕ್ಕ ಕೊಡಲಿ. ಕಳೆದ ೭ ತಿಂಗಳಿAದ ಹಾಲು ಉತ್ಪಾದಕರಿಗೆ ಸಬ್ಸಿಡಿ ಹಣ ನೀಡಿಲ್ಲ, ೧೦೮ ಆಂಬ್ಯುಲೆನ್ಸ್ ಸಿಬ್ಬಂದಿಗಳಿಗೆಸAಬಳ ನೀಡಿಲ್ಲ. ಯಾಕೆಂದರೆ ಇವರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿ ಖಜಾನೆ ಖಾಲಿಯಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್, ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್, ವಿಪ ಸದಸ್ಯರಾದ ಕೆ.ಎಸ್. ನವೀನ್, ಎನ್. ರವಿಕುಮಾರ್, ಮಾಳವಿಕಾ, ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಅಣ್ಣೇಶ್ ಐರಣಿ, ಮಾಜಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಬಿ.ಎಂ. ಸತೀಶ್ ಸೇರಿದಂತೆ ಮತ್ತಿತರರು ಇದ್ದರು.

Share.
Leave A Reply

Exit mobile version