ಚಿತ್ರದುರ್ಗ : ಅನಧಿಕೃತ ಸ್ಲಂಗಳ ತೆರವಿಗೆ ಮುಂದಾದ ಚಿತ್ರದುರ್ಗ ನಗರಸಭೆ ಅಧಿಕಾರಿಗಳಿಗೆ ಬಿಜೆಪಿ ನಾಯಕ ಜಿ.ಎಸ್.ಅನಿತ್ ತಡೆಯೊಡ್ಡಿ, ಸ್ಥಳವಕಾಶದ ನಂತರ ಇಲ್ಲಿನ ಮನೆಗಳು ಎತ್ತಂಗಡಿ ಮಾಡಿ ಎಂದು ಸೂಚಿಸಿ ಬೆಂಬಲಕ್ಕೆ ನಿಂತರು.
ಚಿತ್ರದುರ್ಗ ವಿಜಯ ನಗರದಲ್ಲಿ ಈ ಘಟನೆ ನಡೆದಿದ್ದು, ನಿವಾಸಿಗಳ ಜೊತೆ ಚರ್ಚಿಸಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಅನಿತ್ ಮಾತನಾಡಿದರು. ಜನರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿ ನಾಗರಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
ಇದೊಂದು ಬಡವರ ಏರಿಯಾ, ಇರೋದಕ್ಕೆ ಸೂರು ಇಲ್ಲದೇ ಎಲ್ಲೋ ಒಂದು ಕಡೆ ವಾಸವಾಗಿತ್ತು. ಆದರೆ ನಗರ ಸಭೆ ಇದು ಅನಧಿಕೃತ ಸ್ಲಂ ಎಂದು ನಿವಾಸಿಗಳ ಮನೆ ತೆರವಿಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಅವರು ಎಲ್ಲಿಗೆ ಹೋಗಬೇಕೆಂಬ ಚಿಂತನೆಯಲ್ಲಿದ್ದರು. ಆಗ ಜಿ.ಎಸ್.ಅನಿತ್ ನಿಮ್ಮ ಜತೆ ನಾನಿದ್ದೇನೆ, ಎದೆಗುಂದಬೇಡಿ ಕೈಲಾದ ಸಹಾಯ ಮಾಡುತ್ತೇನೆ ಎಂಬ ನಂಬಿಕೆ ನೀಡಿದರು.