ಚಿತ್ರದುರ್ಗ :  ಸ್ನೇಹಿತರ ಚೇಸ್ಟೆಗೆ ಬಾಲಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಡುವಳ್ಳಿ ಗ್ರಾಮದ ನವೋದಯ ಶಾಲೆಯಲ್ಲಿ  ನಡೆದಿದೆ.

8ನೇ ತರಗತಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿ ಪ್ರೇಮ್ ಸಾಗರ್ (13) ಮೃತಪಟ್ಟಿರುವ ಬಾಲಕ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಕೆಂಗುಂಟೆ ಗ್ರಾಮದ ಶಿಕ್ಷಕರಾದ ತಾಯಿ ಸುಮಂಗಳ, ತಂದೆ ರಮೇಶ ಅವರ ಮಗನಾಗಿರುವ ಪ್ರೇಮ್ ಸಾಗರ್ ಉಡುವಳ್ಳಿ ಗ್ರಾಮದ ನವೋದಯ ಶಾಲೆಯಲ್ಲಿ 8ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದು, ಕಳೆದ 15 ದಿನಗಳ ಹಿಂದೆ ನಡೆದ ಯಾವುದೋ ವಿಚಾರವಾಗಿ ಸ್ನೇಹಿತರು ಪ್ರೇಮ್ ಸಾಗರ್ ಬಾಲಕನನ್ನು ಕಿಚಾಯಿಸುತ್ತಾ ಚೇಸ್ಟೇ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ., ಇದರಿಂದ ಪ್ರೇಮ್ ಕುಮಾರ್ ನೊಂದಿದ್ದನು ಎಂಬ ಮಾಹಿತಿ ಇದೆ.

ಬೆಳಗ್ಗೆ ತರಗತಿಗೆ ತೆರಳಿ ಎರಡು ವಿಷಯದ ತರಗತಿಗೆ ಹಾಜರಾಗಿ ನಂತರ ಕೊಠಡಿಗೆ ಬಂದು ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಪ್ರೇಮ ಸಾಗರ್ ಮೃತದೇಹವನ್ನು ಹಿರಿಯೂರು ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಈ ಬಗ್ಗೆ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share.
Leave A Reply

Exit mobile version