ಚನ್ನಗಿರಿ: ನಮ್ಮೂರು ನಮ್ಮ ಕೆರೆ ಗ್ರಾಮೀಣ ಸಮುದಾಯ ತನ್ನ ದೈನಂದಿನ ಅವಶ್ಯಕತೆಗಳಿಗೆ ಕೆರೆಗಳನ್ನು ಅವಲಂಬಿಸಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ದಿನೇಶ್ ಪೂಜಾರಿ ಹೇಳಿದರು.

ತಾಲೂಕಿನ ಕಂಚಿಗನಾಳ್ ಗ್ರಾಮದಲ್ಲಿ ಕಂಚಿಗನಹಾಳ್ ಗ್ರಾಮ ಪಂಚಾಯಿತಿ ಕಂಚಿಗನಹಾಳ್ ಗ್ರಾಮದ ಕೆರೆ ಅಭಿವೃದ್ಧಿ ಸಮಿತಿ ಸಹಭಾಗಿತ್ವದಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಪುನಶ್ಚೇತನಗೊಳ್ಳುತ್ತಿರುವ ಬೆಂಕಿಕೆರೆ ವಲಯದ ಕಂಚಿಗನಹಾಳ್ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಯ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕೃಷಿ ಉತ್ಪಾದನೆಯಲ್ಲಿ ಕೆರೆಗಳು ಮಹತ್ವದ ಪಾತ್ರ ವಹಿಸುತ್ತದೆ. ಕೆರೆಗಳು ಹೆಚ್ಚು ಕಾಲ ತಮ್ಮ ಒಡಲಲ್ಲಿ ನೀರು ಉಳಿಸಿಕೊಳ್ಳುವುದರಿಂದ ಕೆರೆಯ ಕೆಳಭಾಗದಲ್ಲಿ ಬಾವಿ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಸುಧಾರಿಸಿ ಕೃಷಿ, ಮನೆ ಬಳಕೆಗೆ ಅನುಕೂಲವಾಗುತ್ತದೆ ಎಂದರು.

ಊರಿನ ಕೆರೆಯನ್ನು ದುರಸ್ತಿ ಮಾಡಿ ನೀರು ತುಂಬಿಸಿದರೆ ಊರಿನಲ್ಲಿರುವ ಬಾವಿ, ಕೊಳವೆ ಬಾವಿಗಳು ಸಮೃದ್ಧಗೊಂಡು ಮನೆ ಮನೆಯಲ್ಲಿ ನೀರಿನ ಸಮಸ್ಯೆ ಪರಿಹಾರವಾಗುತ್ತದೆ. ಇದಕ್ಕಾಗಿ ಗ್ರಾಮೀಣ ಜನರ ನೀರಿನ ಬವಣೆ ನೀಗಿಸಲೆಂದೆ ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆಯವರ ಕನಸಿನಂತೆ ಮೂಡಿಬಂದ ಕಾರ್ಯಕ್ರಮವೇ ನಮ್ಮೂರು ನಮ್ಮ ಕೆರೆ. ಕೆರೆಯ ಸುತ್ತಮುತ್ತಲ ಪರಿಸರವನ್ನು ತಂಪಾಗಿರಿಸಿ ಬಾವಿ ಕೊಳವೆಬಾವಿಗಳಲ್ಲಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಮಾರ್ಗದರ್ಶನವನ್ನು ನೀಡಿದರು.

ಕಂಚಿಗನಹಾಳ್ ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಸಿದ್ದರಾಮಪ್ಪ ಕೆ ಇ ವಹಿಸಿಕೊಂಡಿದ್ದು. ಈ ಸಂದರ್ಭದಲ್ಲಿ ಕಂಚಿಗನಹಾಳ್ ಗ್ರಾ.ಪಂ ಅಧ್ಯಕ್ಷೆ ಜಿ ಎಸ್ ದೇವಮ್ಮ ಮಂಜಪ್ಪ ಕಲ್ಲಪ್ಲರ್. ಮತ್ತು ಸಂತೇಬೆನ್ನೂರು ಯೋಜನಾಧಿಕಾರಿಯವರಾದ ರವಿಚಂದ್ರ, ಪಿ.ಡಿ.ಓ. ಸುರೇಶ ಎಂ, ಯೋಗೇಶ್ವರಪ್ಪ, ಒಕ್ಕೂಟದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಮತ್ತು ಕಂಚಿಗನಹಾಳ್ ಕೆರೆ ಅಭಿವೃದ್ಧಿ ಸಮಿತಿಯ ಗೌರವ ಅಧ್ಯಕ್ಷರಾದ ಈಶ್ವರಪ್ಪ ಕೆ ಪಿ, ಕೃಷಿ ಅಧಿಕಾರಿಯಾದ ರಾಜೇಂದ್ರ ಜಿ ಎನ್, ವಲಯ ಮೇಲ್ವಿಚಾರಕರಾದ ಮಮತಾ ಮತ್ತು ಸೇವಾ ಪ್ರತಿನಿಧಿಯರಾದ ಪ್ರಮೀಳಾ, ಕಂಚಿಗನಹಾಳ್ ಗ್ರಾಮ ಪಂಚಾಯತ್ ಸರ್ವ ಸದಸ್ಯರುಗಳು.ಕಂಚಿಗನಹಾಳ್ ಕೆರೆ ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರುಗಳು.ಊರಿನ ಗ್ರಾಮಸ್ಥರು. ಪ್ರಗತಿ ಬಂದು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

Share.
Leave A Reply

Exit mobile version