ಚನ್ನಗಿರಿ: ರಾಜ್ಯ ಸರಕಾರವು ಮುಂಬರುವಂತಹ ಸಚಿವ ಸಂಪುಟದಲ್ಲಿ ಸರಕಾರಿ ನೌಕರರಿಗೆ ಹಳೆ ಪಿಂಚಣಿ ಸೇವೆ ನೀಡಬೇಕು ಎಂದು ಚನ್ನಗಿರಿ ತಾಲೂಕು ಎನ್.ಪಿ.ಎಸ್. ನೌಕರರ ಸಂಘದ ಅಧ್ಯಕ್ಷ ರಮೇಶ್ ಹೇಳಿದರು.

ಪಟ್ಟಣದಲ್ಲಿ ಗಾಂಧಿ ಭಾವಚಿತ್ರದೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿ, ನಾವುಗಳು ನಮ್ಮ ಸೇವೆಯನ್ನು ಸಮರ್ಪಕವಾದ ರೀತಿಯಲ್ಲಿ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದು ನಿವೃತ್ತಿಯ ನಂತರ ನಮ್ಮ ಜೀವನಧಾರಕ್ಕೆ ಪಿಂಚಣಿಯೊಂದೇ ಉಳಿಯುವುದು. ಆದ್ದರಿಂದ ಹೊಸದಾಗಿ ಸೇರ್ಪಡೆಗೊಂಡಿರುವಂತಹ ಸರಕಾರಿ ನೌಕರರಿಗೆ ಓಪಿಎಸ್. ಜಾರಿ ಮಾಡಬೇಕು ಎಂದರು.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಸರಕಾರದ ಮೇಲೆ ಸಾಕಷ್ಟು ಆಶಾಭಾವನೆಯನ್ನು ಇಟ್ಟುಕೊಂಡಿದ್ದು ಮುಂಬರುವ ಸಂಪುಟ ಸಭೆಯಲ್ಲಿ ನೌಕರರರ ಪರವಾದ ಆನಿರ್ಧಾರವನ್ನು ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಎನ್.ಪಿ.ಎಸ್. ನೌಕರರ ಸಂಘದ ಪದಾಧಿಕಾರಿಗಳಾದ ರವಿಕಿರಣ್ ಇತರರು ಹಾಜರಿದ್ದರು

Share.
Leave A Reply

Exit mobile version