ಚನ್ನಗಿರಿ:  ಕಾರ್ಮಿಕರು  ಹಲವಾರು ವರ್ಷಗಳಿಂದ  ಹೋರಾಟ ಮಾಡಿ ಪಡೆದ ಕಾರ್ಮಿಕ ಕಾನೂನುಗಳನ್ನು ಮೊಟಕುಗೊಳಿಸಿ ಅನುಷ್ಟಾನ ಮಾಡಿರುವ 4 ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು  ತಕ್ಷಣವೇ  ಹಿಂಪಡೆಯುವಂತೆ  ಆಗ್ರಹಿಸಿ  ಕರ್ನಾಟಕ ಶ್ರಮಿಕ ಶಕ್ತಿ ತಾಲೂಕು ಘಟಕದ  ಕಾರ್ಯಕರ್ತರು  ಪಟ್ಟಣದ  ಗಾಂಧಿ ವೃತ್ತದ ಬಳಿ ಪ್ರತಿಭಟನೆ  ನಡೆಸಿದರು.

ಕರ್ನಾಟಕ ಶ್ರಮಿಕ ಶಕ್ತಿ ತಾಲೂಕು ಘಟಕದ ಅಧ್ಯಕ್ಷ ಅಧಿಲ್‌ಖಾನ್ ಮಾತನಾಡಿ,  ಸರಕಾರಗಳು  ಅನುಷ್ಟಾನ ಮಾಡಿರುವ  ಕಾರ್ಮಿಕ ವಿರೋಧಿ ಕಾರ್ಮಿಕ  ಸಂಹಿತೆಯಿಂದ  ಇಂದು ಕಾರ್ಮಿಕರು ಶಾಶ್ವತವಾಗಿ ಉದ್ಯೋಗಗಳನ್ನು  ಕಳೆದುಕೊಳ್ಳುವಂತಾಗಿದೆ.

ಎಲ್ಲಾ ಕ್ಷೇತ್ರಗಳಲ್ಲಿಯೂ  ಗುತ್ತಿಗೆ ಅಧಾರದಲ್ಲಿ  ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಹೊಸ ಕಾರ್ಮಿಕ ಕಾನೂನಗಳಿಂದ   ಕಾರ್ಮಿಕ  ಸಂಘಗಳನ್ನು ರಚಿಸಿಕೊಳ್ಳುವುದು ಕಷ್ಟವಾಗಿದೆ. ಆದ್ದರಿಂದ  ಸರಕಾರವು ತಕ್ಷಣವೇ 4 ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂಪಡೆಯಬೇಕು.

 ಸರಕಾರಿ  ಮತ್ತು ಸಾರ್ವಜನಿಕ ವಲಯದ ಉದ್ಯಮ ಕ್ಷೇತ್ರದಲ್ಲಿ ಖಾಸಗಿಕರಣವನ್ನು ನಿಲ್ಲಿಸಬೇಕು.  ಮಾಸಿಕ 26.000 ರೂಗಳ  ಕನಿಷ್ಟ  ವೇತನ ಜಾರಿಯಾಗಬೇಕು.  ಅನ್ನಭಾಗ್ಯ ಯೋಜನೆಯ  ಹಮಾಲಿ  ಕಾರ್ಮಿಕರಿಗೆ  ನೇರ ಪಾವತಿ ಸಂಬಳ ವ್ಯವಸ್ಥೆ ಜಾರಿಯಾಗಬೇಕು.

ಕಟ್ಟಡ ಕಾರ್ಮಿಕ ಮಂಡಳಿಯ  ಸಮಗರ  ಯೋಜನೆಗಳು ಸರಿಯಾಗಿ ಜಾರಿ ಮಾಡಿ ಇಎಸ್ಐ. ಜಾರಿ ಮಾಡಬೇಕು, ರಾಜ್ಯದ  ಅಸಂಘಟಿತ  ಕಾರ್ಮಿಕರಿಗೆ  ಅದರಲ್ಲಿಯೂ ಹಮಾಲಿ, ಟೈಲರ್,ಮ್ಯೆಕಾನಿಕ್, ಮನೆ ಕೆಲಸ ಕಾರ್ಮಿಕರಿಗೆ  ಕಲ್ಯಾಣ ಮಂಡಳಿ  ರಚಿಸಬೇಕು  ಎಂದು ಆಗ್ರಹಿಸಿದರು.  ಈ ಸಂದರ್ಭದಲ್ಲಿ  ಸಂಘಟನೆಯ  ಪದಾಧಿಕಾರಿಗಳಾದ ಸುರೇಶ್, ಸಿದ್ದಪ್ಪ,  ಅಂಜನಪ್ಪ, ರಫೀಕ್, ಮಕ್ತಿಯಾರ್ ಇತರರು ಹಾಜರಿದ್ದರು.

Share.
Leave A Reply

Exit mobile version