ಚನ್ನಗಿರಿ:  ಜನ್ಮಗಳಲ್ಲಿ ಮಾನವ ಜನ್ಮ  ದೊಡ್ಡದಾಗಿದ್ದು ದಾನ ದರ್ಮ ಪರೋಪಕಾರದ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು  ಎಂದು ಯಡೆಯೂರು ರೇಣುಕಾ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ತಾಲೂಕಿನ ಮಾವಿನಹೊಳೆ ಶ್ರೀ ಮಹಾರುದ್ರೇಶ್ವರ ಸಮುದಾಯ ಭವನದಲ್ಲಿ ಚನ್ನಗಿರಿ ಚನ್ನಮ್ಮಾಜಿ ಲಯನ್ಸ್ ಕ್ಲಬ್ ವತಿಯಿಂದ  ಹಮ್ಮಿಕೊಳ್ಳಲಾಗಿದ್ದ ಲಯನ್ಸ್ ಕ್ಲಬ್‌ನ  ದಶಮಾನೋತ್ಸವ ಸಮಾರಂಭ ಮತ್ತು ಲಯನ್ಸ್ ಕ್ಲಬ್‌ಗೆ ಗೆ ಗೌರ‍್ನರ್ ಭೇಟಿ   ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿ,   ದಾರ್ಶನಿಕರು ಶರಣರು ಸಮಾಜಕ್ಕೆ  ತಮ್ಮದೇ  ಆದ ಕೊಡುಗೆ ನೀಡಿದ್ದಾರೆ. ಅದರಂತೆ ಚನ್ನಗಿರಿಯ ಲಯನ್ಸ್ ಕ್ಲಬ್ ನ ಸದಸ್ಯರು ತಮ್ಮ ಬಿಡುವಿಲ್ಲದ ಸಮಯದಲ್ಲಿ ಸಹ ಸಮಾಜಕ್ಕೆ  ತಮ್ಮ ಸೇವೆಯನ್ನು ಸಲ್ಲಿಸುವ ಕೆಲಸ ಮಾಡಿದ್ದಾರೆ ಎಂದರು.

ಜೀವನದಲ್ಲಿ ನಾವು ಹುಟ್ಟಿದ ಮೇಲೆ ಸಾರ್ಥಕ ಬದಕನ್ನು ಬದುಕಬೇಕು. ಭೂಮಿಯ ಮೇಲೆ  ಯಾರೂ ಶಾಶ್ವತರಲ್ಲ. ಆದರೆ ನಾವು ಬದುಕಿದ್ದಾಗ ಸಮಾಜಕ್ಕೆ ನೀಡಿದ ಕೊಡುಗೆ ಮಾತ್ರವೇ ಉಳಿದುಕೊಳ್ಳುವುದು. ಸಾಕಷ್ಟು ಒತ್ತಡಗಳಲ್ಲಿ  ಬದುಕುತ್ತಿರುವ  ಜನರು ಇಂದು ಅರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದ್ದು  ಸಮಯಕ್ಕೆ ಸರಿಯಾಗಿ  ಚಿಕಿತ್ಸೆ ಪಡೆದುಕೊಳ್ಳಬೇಕು  ಎಂದರು.

ದಾವಣಗೆರೆ ಜಿಲ್ಲಾ ಗೌರನ್ನರ್ ಲಯನ್ ಡಾ. ನೇರಿ ಕಾರ್ನಿಲೋ ಮಾತನಾಡಿ,  ಲಯನ್ಸ್  ಸಂಸ್ಥೆಯು  ರಾಷ್ಟ್ರಾದಾದ್ಯಂತ  ಸೇವೆ ಸಲ್ಲಿಸುತ್ತಿರುವಂತಹ ಸಂಸ್ಥೆಯಾಗಿದ್ದು  ಸೇವಾ ಮನೋಭಾವನೆಯನ್ನು ರೂಡಿಸಿಕೊಂಡಿರುವ ಏಕೈಲ್  ಸಂಸ್ಥೆಯಾಗಿದೆ.  ದೇಶದಲ್ಲಿ ಶಾಂತಿ  ಸೌಹಾರ್ದತೆಯನ್ನು  ಬೆಳೆಸಿಕೊಂಡಿರುವ ಸಂಸ್ಥೆಯಾಗಿದೆ.  

ನಮ್ಮ ವ್ಯಾಪ್ತಿಗೆ 4 ಜಿಲ್ಲೆಗಳು ಸೇರಿದ್ದು ಬೆಳಕು ಎಂಬ ಕಾರ್ಯಕ್ರಮದ ಮೂಲಕ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಚನ್ನಗಿರಿ ಕ್ಲಬ್ ಉತ್ತಮವಾದ ಸೇವಾ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ. ಪ್ರಪಂಚದಲ್ಲಿ ಸಾಕಷ್ಟು ಮಕ್ಕಳು ಕ್ಯಾನ್ಸರ್ ,ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು  ಅಂತವರಿಗೆ  ನಾವು ನೆರವಾಗಬೇಕಿದೆ  ಎಂದರು.

ಚನ್ನಗಿರಿ  ಚನ್ನಮ್ಮಾಜಿ ಲಯನ್ಸ್  ಸಂಸ್ಥೆಯ ಅಧ್ಯಕ್ಷ  ಪ್ರಕಾಶ್ ಮಾವಿನಹೊಳೆ ಮಾತನಾಡಿ, ಚನ್ನಗಿರಿಯ ಭಾಗದಲ್ಲಿ  ರಕ್ತದಾನ ಶಿಬಿರ, ಪರಿಸರ ಜಾಗೃತಿ ಮತ್ತು ಪಿಠೋಪಲರಣ ವಿತರಣೆ ಸೇರಿದಂತೆ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೇವೆಯನ್ನು ಸಲ್ಲಿಸಲಾಗಿದೆ  ಎಂದರು. 

ಈ ಸಂದರ್ಭದಲ್ಲಿ ಕಾರ್ಯದರ್ಶಿ ಪ್ರವೀಣ್, ಖಜಾಂಚಿ ಕೃಷ್ಣಮೂರ್ತಿ,ವಲಯಾಧ್ಯಕ್ಷರ ಮಹೇಶ್ ಜವಳಿ, ದಾವಣಗರೆ ಪ್ರಾಂತೀಯ ಅಧ್ಯಕ್ಷ ಓಂಕಾರಪ್ಪ, ಕಾರ್ಯದರ್ಶಿ ಮಲ್ಲಿಕಾರ್ಜುನ್, ಬೆಳ್ಳೂಡಿ ಶಿವಕುಮಾರ್ ಇತರರು ಹಾಜರಿದ್ದರು.

Share.
Leave A Reply

Exit mobile version