ಚನ್ನಗಿರಿ: ಚನ್ನಗಿರಿ ಪಟ್ಟಣದ  ಹಾಲಸ್ವಾಮಿ ವಿರಕ್ತ ಮಠಕ್ಕೆ ಸೇರಿದ  ಚಿತ್ರದುರ್ಗ ರಸ್ತೆಯಲ್ಲಿ  ಇರುವ ಚೋಳರಕಾಲದಲ್ಲಿ ನಿರ್ಮಾಣ ಮಾಡಲಾಗಿದ್ದ  ಕಲ್ಮಠವನ್ನು ಪುನರುಜ್ಜೀವನ  ಗೊಳಿಸಿದ್ದು, ಅಖಿಲಭಾರತ ವೀರಶೈವ ಪುರೋಹಿತ ಮಹಾಸಭಾದ ಅಧ್ಯಕ್ಷರಾದ ವಿದ್ವಾನ್ ಬೂದಿಸ್ವಾಮಿ ಹಿರೇಮಠ್‌ರವರ ನೇತ್ರತ್ವದಲ್ಲಿ   ಹೋಮ ಹವನಗಳನ್ನು ನಡೆಸುವ ಮೂಲಕ ದೇಗುಲದ ಪ್ರವೇಶ ಮತ್ತು ಕಳಶಾರೋಹಣವನ್ನು ನಡೆಸಿದರು.

ಸಾನ್ನಿಧ್ಯ ವಹಿಸಿದ್ದ  ಹಾಲಸ್ವಾಮಿ ವಿರಕ್ತ ಮಠದ ಡಾ.ಬಸವಜಯಚಂದ್ರಸ್ವಾಮಿ ಮಾತನಾಡಿ,   ಪೂರ್ವಿಕರ ಕಾಲದಲ್ಲಿ ನಿರ್ಮಾಣ ಮಾಡಿದ್ದ  ಕಲ್ಮಠವು  ಶಿಥಿಲಗೊಂಡಿದ್ದು, ಅದೇ ಮಾದರಿಯಲ್ಲಿ  ಹಿರಿಯ ಶ್ರೀಗಳಾದ ಜಯದೇವಸ್ವಾಮಿಗಳ  ಆಶಯದಂತೆ  ಪುನರಜ್ಜೀವನಗೊಳಿಸಲಾಗಿದೆ.  

ಹಿಂದಿನ ದಿನಮಾನಗಳಲ್ಲಿ ಶಿವರಾತ್ರಿ ಹಬ್ಬದ  ಆಚರಣೆಯನ್ನು  ಭಕ್ತಿ ಭಾವದಿಂದ  ಇಲ್ಲಿನ  ಶಿವಲಿಂಗೇಶ್ವರರಿಗೆ  ಪೂಜೆ  ಸಲ್ಲಿಸುವ ಮೂಲಕ ಜಾಗರಣೆ ಆಚರಣೆ ಮಾಡಲಾಗುತ್ತಿತ್ತು. ಈ ಬಾರಿಯೂ ಸಹ ಶಿವರಾತ್ರಿ ಆಚರಣೆಯನ್ನು ಮಾಡಲಾಗುವುದು  ಎಂದರು. 

ಕಾರ್ಯಕ್ರಮದಲ್ಲಿ  ಚನ್ನಗಿರಿ  ಹಿರೇಮಠದ  ಕೇದಾರಲಿಂಗ ಶಿವಶಾಂತವೀರಸ್ವಾಮಿಗಳು ಮತ್ತು ವೀರಶೈವ  ಸಮಾಜದ  ಮುಖಂಡರುಗಳು ಹಾಜರಿದ್ದರು.

Share.
Leave A Reply

Exit mobile version