ಚನ್ನಗಿರಿ:  ಬಸವಾದಿ ಶಿವಶರಣರು  12 ನೇ ಶತಮಾನದಲ್ಲಿ  ಅನುಭವ  ಮಂಟಪವನ್ನು  ಸ್ಥಾಪಿಸುವ ಮೂಲಕ  ಪ್ರಜಾಪ್ರಭುತ್ವದ  ಸ್ವಾತಂತ್ರ್ಯವನ್ನು ಬಿತ್ತಿದ್ದರು  ಎಂದು ತುಮಕೂರಿನ ಸಾಹಿತಿ ನಟರಾಜ್ ಬೂದಾಳ್ ಹೇಳಿದರು.

ಭಾನುವಾರ ತಾಲೂಕಿನ ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಹಿರಿಯ ಶ್ರೀಗಳ ಸ್ಮರಣೋತ್ಸವ  ಮತ್ತು  ಬಸವತತ್ವ  ಸಮ್ಮೇಳನದಲ್ಲಿ    ಪ್ರಸ್ತುತ ವಿದ್ಯಾಮಾನಕ್ಕೆ  ಬಸವತತ್ವದ  ಅವಶ್ಯಕತೆ ಎಂಬ ವಿಷಯದ ಕುರಿತು ಮಾತನಾಡಿ, ಅಂದು ಶರಣರು ಸಾಮಾಜಿಕ ಕ್ರಾಂತಿಯನ್ನು  ಮಾಡಿ  ಕೊನೆ  ಹಂತದಲ್ಲಿ  ತಮ್ಮ ಜೀವಗಳನ್ನು ಉಳಿಸಿಕೊಳ್ಳಲು  ತಮ್ಮ  ಸ್ಥಾನಗಳನ್ನು ಬಿಟ್ಟು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ  ಇಂದು ವಿಶ್ವ ಬಸವಣ್ಣವರ ತತ್ವ ಅರ್ದಶಗಳನ್ನು ಒಪ್ಪಿ ವಿಶ್ವನಾಯಕರನ್ನಾಗಿಸಿಕೊಂಡಿದೆ  ಎಂದರು. ವಚನ ಸಾಹಿತ್ಯಗಳ ಮೌಲ್ಯಗಳು  ಇಂದಿಗೂ ಜೀವಂತವಾಗಿರಬೇಕಾದರೆ  ಸಾಕಷ್ಟು  ಜನರ ತ್ಯಾಗ ಬಲಿದಾನಗಳು ಇವೆ  ಎಂದರು.

ಮಾಜಿ ಶಾಸಕ ಮಹಿಮಾ ಪಟೇಲ್ ಮಾತನಾಡಿ,   ಮನುಷ್ಯರಲ್ಲಿ  ಪರಿವರ್ತನೆ  ತರಲು ಮಠಗಳು ಹಮ್ಮಿಕೊಳ್ಳುವ  ಇಂತಹ ಕಾರ್ಯಕ್ರಮಗಳು  ಆಗತ್ಯವಾಗಿವೆ. ಈ  ಕಾರ್ಯಕ್ರಮದಲ್ಲಿ  ಸರಿತಪ್ಪುಗಳ ವಿಶ್ಲೇಷಣೆಯಾಗಬೇಕು. ಪ್ರೀತಿ ತುಂಬಿದ  ಸಮಾಜ ನಿರ್ಮಾಣವಾಗಬೇಕು.  ಇತ್ತೀಚಿನ ದಿನಗಳಲ್ಲಿ  ರಾಜಕಾರಣ ಎನ್ನುವುದು ವ್ಯಾಪಾರ  ದಂಧೆಯಾಗಿದೆ. ಅದರಲ್ಲಿ ಸೇವಾಮನೋಬಾವವನ್ನು ಬೆಳೆಸಿಕೊಂಡಾಗ ಜನರಿಗೆ ಉತ್ತಮವಾದ ಅಡಳಿತವನ್ನು  ನೀಡಲು ಸಾಧ್ಯ ಎಂದರು. 

ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ,  ಈ ವರ್ಷ ಮಳೆಯು ಬರುವ ಮುನ್ಸೂಚನೆ ಕಾಣದೇ  ರೈತರು ಮತ್ತು ಅಡಿಕೆ ಬೆಳೆಗಾರರು ಕಂಗಾಲಾಗುವ ವಾತಾವರಣ ನಿರ್ಮಾಣವಾಗಿದೆ.  ಉಬ್ರಾಣಿ ಏತ ನೀರಾವರಿ ನೀರು ಫೆಬ್ರವರಿ ಅಂತ್ಯದಲ್ಲಿ ನಿಲ್ಲಲಿದ್ದು  ಕ್ಷೇತ್ರದ ಶಾಸಕರು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಬಳಿ ಮಾತನಾಡಿ  ಒಂದು ತಿಂಗಳು  ಹೆಚ್ಚುವರಿ ನೀರನ್ನು ಕೆರೆಗಳಿಗೆ ಪೂರೈಸಬೇಕು. 

ಕಸಬಾ  ಹೋಬಳಿಯ  ರೈತರಿಗೆ  ಪಂಪ್‌ಸೆಟ್ ತೆರವುಗೊಳಿಸುವಂತೆ  ಅಧಿಕಾರಿಗಳು  ತಿಳಿಸಿದ್ದು,   ಕುಡಿಯುವ ನೀರಿಗೂ ಸಾಕಷ್ಟು  ಸಮಸ್ಯೆಯಾಗಲಿದ್ದು  ಜಿಲ್ಲಾಧಿಕಾರಿಗಳು  ಮತ್ತು ಸಂಬಂಧಿಸಿದ  ಎಂಜಿನ್ ಯರ್‌ಗಳ ಬಳಿ ಮಾತನಾಡಿ,  ಸುಮಾರು 200 ಕ್ಯೂಸೆಕ್ಸ್ ನೀರನ್ನು ಬಿಡಿಸಿಕೊಳ್ಳುವ ಮೂಲಕ ರೈತರಿಗೆ  ಸಹಕಾರ ಮಾಡುವಂತೆ  ತಿಳಿಸಿದರು.   

ಶಾಸಕ ಬಸವರಾಜು  ಶಿವಗಂಗಾ ಮಾತನಾಡಿ  ಚನ್ನಗಿರಿ ವಿಧಾನಸಭಾ  ಕ್ಷೇತ್ರದಲ್ಲಿ  ಉಂಟಾಗುತ್ತಿರುವ ನೀರಿನ  ಸಮಸ್ಯೆ ಬಗ್ಗೆ  ಗಂಬೀರವಾಗಿ ತೆಗೆದುಕೊಂಡಿದ್ದು  ವಿಧಾನಸಭಾ ಅಧಿವೇಶನದಲ್ಲಿ  ಅದಕ್ಕೆ ಸಂಬಂದಿಸಿದ  ಕೆಲಸಗಳನ್ನು ಮಾಡಿದ್ದೇನೆ. ನಾಲೆಯಲ್ಲಿ  ಹರಿಯುಔಮತಹ ನೀರು ಕೊನೆಬಾಗದ  ಹಾವೇರಿ  ರೈತರಿಗೆ ತಲುಪಬೇಕಾಗಿರುವದರಿಂದ  ಹೆಚ್ಚುವರಿ ನೀರನ್ನು ಬಿಡಿಸಿಕೊಳ್ಳಲು  ಪ್ರಯತ್ನಿಸಲಾಗುವುದು. 

ಮಾಡಾಳ್ ವಿರೂಪಾಕ್ಷಪ್ಪನವರಿಗೂ  ನನಗೂ ಗುರುಶಿಷ್ಯರ  ಸಂಬಂದ  ಚುನಾವಣೆ  ಸಂದರ್ಭದಲ್ಲಿ  ಚುನಾವಣೆ  ಮಾಡಿದ್ದೇನೆ. ಆದರೆ  ಕ್ಷೇತ್ರದ  ಅಭಿವೃದ್ದಿಯ  ವಿಚಾರದಲ್ಲಿ  ಅವರ  ಮಾರ್ಗದರ್ಶನ ಪಡೆಯುತೇನೆ,  ನಾನು  ರಾಜಕಾರಣಕ್ಕೆ ಪ್ರವೇಶ ಪಡೆಯಲು  ಮಾಡಾಳ್ ವಿರೂಪಾಕ್ಷಪ್ಪನವರೇ ಕಾರಣ. ಚನ್ನಗಿರಿ ವಿಧಾನಸಭಾ  ಕ್ಷೇತ್ರದಲ್ಲಿ  ಒಂದು ಒಕ್ಕಲಿಗ ಮತಗಳು  ಇಲ್ಲ ಆದರೆ  ನಾನು  ಡಿ.ಕೆ.ಶಿವಕುಮಾರ್‌ರವರನ್ನು ನನ್ನ ಗುರುಗಳು ಎಂದು ಒಪ್ಪಿಕೊಂಡಿದ್ದೇನೆ.  ನನ್ನ ಮಾರ್ಗದರ್ಶಕರೇ ನನಗೆ  ಗುರುಗಳು.  ಉಬ್ರಾಣಿ ಏತ ನೀರಾವರಿಗೆ  ಹೆಚ್ಚು ದಿನ ನೀರು ಹರಿಸುವ ಕುರಿತು ಡಿ.ಕೆ.ಶಿವಕುಮಾರ್ ಬಳಿ ಮಾತನಾಡಿ ನೀರು ಹರಿಸುವ ಬಗ್ಗೆ  ಮಾತನಾಡಲಾಗವುದು ಎಂದರು. ಈ  ಸಂದರ್ಭದಲ್ಲಿ  ಶಿವಮೊಗ್ಗ ಸರ್ಜಿ ಪೌಂಡೇಶನ್‌ನ  ಸಂಸ್ಥಾಪಕ ಡಾ.ಧನುಂಜಯ ಸರ್ಜಿ, ಕಾಂಗ್ರೇಸ್ ಮುಖಂಡರಾದ ಹೊದಿಗೆರೆ ರಮೇಶ್, ರಾಘವೇಂದ್ರ ತಾಯ್ನಾಡು,  ಕನ್ನಡ ನಾಡು ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕೃಷ್ಣಮೂರ್ತಿ, ಚಿತ್ರದುರ್ಗ ಕಾಂಗ್ರೇಸ್ ಮುಖಂಡ  ಹನುಮಲಿ ಷಣ್ಮುಖಪ್ಪ ಬಸವಣ್ಣನವರ  ವಿಚಾರಧಾರೆಗಳ ಕುರಿತು ಮಾತನಾಡಿದರು.

Share.
Leave A Reply

Exit mobile version