ತೀರ್ಥಹಳ್ಳಿ; ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625/625 ಕ್ಕೆ ಅಂಕಗಳಿಸುವ ತೀರ್ಥಹಳ್ಳಿ ತಾಲ್ಲೂಕಿನ ಪ್ರತಿ ವಿದ್ಯಾರ್ಥಿಗೂ, 25 ಸಾವಿರ ನಗದು ಘೋಷಣೆ ಹಾಗೂ 600 ಕ್ಕಿಂತ ಹೆಚ್ಚು ಅಂಕ ಗಳಿಸುವ ಪ್ರತಿ ಮಗುವಿಗೂ ಸನ್ಮಾನಿಸಿ ಗೌರವಿಸುತ್ತೇನೆ ಎಂದು ಡಾ. ಆರ್ .ಎಂ. ಮಂಜುನಾಥ್ ಗೌಡ್ರು ಘೋಷಣೆ ಮಾಡಿದರು.
ತಾಲ್ಲೂಕಿನ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ , ತಾಲ್ಲೂಕಿನ ಎಸ್ ಎಸ್ ಎಲ್ ಸಿ ಮಕ್ಕಳಿಗಾಗಿ, ಉಡುಪಿಯ ಸಿದ್ದಾಂತ ಫೌಂಡೇಶನ್ ಮುಖ್ಯಸ್ಥರಾದ ಶ್ರೀಗೋಪಾಲಕೃಷ್ಣ ಭಟ್ ಮತ್ತು ತಂಡದ ಸಹಕಾರದಲ್ಲಿ ಶಾಲಾ ಶಿಕ್ಷಣ ಇಲಾಖೆ ತೀರ್ಥಹಳ್ಳಿ ಇವರ ಸಹಯೋಗದಲ್ಲಿ ನಡೆದ ಎಸ್ ಎಸ್ ಎಲ್ ಸಿ ಮಕ್ಕಳಿ ಪರೀಕ್ಷಾ ಪೂರ್ವ ತಯಾರಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಉಡುಪಿಯ ಸಿದ್ದಾಂತ ಫೌಂಡೇಶನ್ ಅವರ ಶೈಕ್ಷಣಿಕ ಕಾಳಜಿಗೆ ಹಾಗೂ ಶಾಲಾ ಶಿಕ್ಷಣ ಇಲಾಖೆ ತೀರ್ಥಹಳ್ಳಿ ಹಾಗೂ ಎಲ್ಲಾ ಸಹ ಶಿಕ್ಷಕರ, ಮುಖ್ಯ ಶಿಕ್ಷಕರ, ಮಕ್ಕಳು ಪೋಷಕರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಂಡಕ್ಕೆ ಡಾ.ಆರ್. ಎಂ ಮಂಜುನಾಥ್ ಗೌಡ್ರು ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ಆರಂಭಕ್ಕೂ ಮುಂಚೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿ ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗಿದ್ದ, ಹಿರಿಯ ಮುತ್ಸದಿ ರಾಜಕಾರಣಿ ಎಸ್ ಎಂ ಕೃಷ್ಣ ಅವರ ಅಕಾಲಿಕ ಮರಣವನ್ನು ಶೋಕ ಆಚರಣೆ ಮಾಡುವುದರ ಮೂಲಕ ಗೌರವವನ್ನು ಸಲ್ಲಿಸಿ ಕಾರ್ಯಕ್ರಮವನ್ನು ಆರಂಭಿಸಲಾಯಿತು.
.
ಶ್ರೀಯುತರು ಇಂದು ಅಸ್ತಂಗತರಾದ ಪ್ರಯುಕ್ತ ವೇದಿಕೆಯಲ್ಲಿದ್ದ ಮುಖ್ಯ ಅತಿಥಿಗಳ ಸಲಹೆ ಮೇರೆಗೆ ದೀಪವನ್ನು ಹಚ್ಚಿ ಉದ್ಘಾಟನೆ ಮಾಡದೆ, ಶೋಕಾಚರಣೆ ಮಾಡಿ, ಸದರಿಯವರಿಗೆ ಗೌರವ ಸೂಚಿಸಿ ಕಾರ್ಯಕ್ರಮವನ್ನು ಆರಂಭಿಸಲಾಯಿತು..
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ. ಆರ್ ಎಂ ಮಂಜುನಾಥ ಗೌಡ್ರು, ಎಸ್ ಎಂ ಕೃಷ್ಣ ಅವರ ರಾಜಕೀಯ ಸಾಧನೆಗಳು ಹಾಗೂ ಅವರ ದೂರದೃಷ್ಟಿಯ ರಾಜಕೀಯ ಇಚ್ಛಾಶಕ್ತಿಯ ಬಗ್ಗೆ ಮಾತಾನಾಡಿದರು, ನಂತರ ಸಿದ್ಧಾಂತ ಫೌಂಡೇಶನ್ ಉಡುಪಿ ಇವರ ಸಹಯೋಗದಲ್ಲಿ ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಂದಾಳತ್ವದಲ್ಲಿ ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪರೀಕ್ಷೆಯ ಪೂರ್ವ ತಯಾರಿ ಬಗ್ಗೆ ಉತ್ತಮ ಮಾಹಿತಿ ಕಾರ್ಯಗಾರ ಏರ್ಪಡಿಸಿರುವುದು ಮನಸ್ಸಿಗೆ ಅತ್ಯಂತ ಖುಷಿ ಎನಿಸಿದೆ ಎಂದು ಅಭಿನಂದಿಸಿದರು
” ನಮ್ಮ ಕಾಲದಲ್ಲಿ ಶಿಕ್ಷಣ ವ್ಯವಸ್ಥೆ ಕನಿಷ್ಠ ಸೌಲಭ್ಯಗಳಿಂದ ಕೂಡಿದ್ದು ಅಂದು ಅಂಕ ಗಳಿಕೆಯ ಉದ್ದೇಶಕ್ಕಿಂತ ಮೌಲ್ಯ ಶಿಕ್ಷಣವೇ ತುಂಬಾ ಪ್ರಮುಖವಾಗಿತ್ತು. ನಾವು ಮಾಡಿದ ಅನೇಕ ಶೈಕ್ಷಣಿಕ ಪ್ರಯತ್ನಗಳು ನಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿವೆ, ಆದರೆ ಇಂದಿನ ಶಿಕ್ಷಣ ವ್ಯವಸ್ಥೆ ಅತ್ಯಂತ ಸ್ಪರ್ಧಾತ್ಮಕವಾಗಿದ್ದು ಮಕ್ಕಳಲ್ಲಿ ಅತ್ಯುತ್ತಮ ಅಂಕಗಳಿಸುವಂತಹ ಪ್ರಯತ್ನಗಳು ಸಹ ಉನ್ನತ ಮಟ್ಟದಲ್ಲಿ ಇರುವುದರಿಂದಲೇ ನೂರಾರು ಮಕ್ಕಳು 625 ಕ್ಕೆ 625 ಅಂಕಗಳನ್ನು ಗಳಿಸುವ ನಿಟ್ಟಿನಲ್ಲಿ ಯಶಸ್ವಿಯಾಗುತ್ತಿರುವುದು ಇಂದಿನ ಶೈಕ್ಷಣಿಕ ಗುಣಮಟ್ಟಕ್ಕೆ ಹಾಗೂ ಮಕ್ಕಳಲ್ಲಿ ಓದುವಂತಹ ಆಸಕ್ತಿಗೆ ಮತ್ತು ಶಿಕ್ಷಕರ ಅತ್ಯುತ್ತಮ ಬೋಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು,
ನಾನು ಸುಮಾರು 84 ದೇಶಗಳನ್ನ ಸುತ್ತಿದ್ದೆನೆ. ಆದರೆ ರಷ್ಯಾ ದೇಶದಲ್ಲಿ ಶಿಕ್ಷಕರಿಗೆ ನೀಡುತ್ತಿರುವಂತಹ ಗೌರವ ಮತ್ತು ವೇತನ ಇಡೀ ವಿಶ್ವಕ್ಕೆ ಮಾದರಿಯಾದದ್ದು ಅಂತಹ ವ್ಯವಸ್ಥೆ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿಯೂ ಬದಲಾವಣೆ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು
ಇತ್ತೀಚಿನ ವರ್ಷಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೀರ್ಥಹಳ್ಳಿ ತಾಲೂಕು ಶಿವಮೊಗ್ಗ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆಯುತ್ತಿರುವುದು ಖುಷಿಯ ಜೊತೆಗೆ ಹೆಮ್ಮೆ ಅನಿಸಿದೆ
ಕಳೆದ ವರ್ಷವೂ ಅನೇಕ ಮಕ್ಕಳು ಉತ್ತಮ ಅಂಕ ಗಳಿಸಿ ರಾಜ್ಯಮಟ್ಟದ ರ್ಯಾಂಕ್ ಗಳಿಸಿರುವುದು ಪ್ರಶಂಸನೀಯ ಜೊತೆಗೆ ಸರ್ಕಾರದಿಂದ ನೀಡುವ ಉಚಿತ ಲ್ಯಾಪ್ ಟ್ಯಾಪ್ ಅನ್ನು ಸಹ ನಮ್ಮ ತಾಲೂಕಿನ ನಾಲ್ಕು ವಿದ್ಯಾರ್ಥಿಗಳು ಪಡೆದಿರುವುದು ತುಂಬಾ ಹೆಮ್ಮೆಯ ವಿಚಾರ ಅವರ ಶಾಲೆಗೂ, ಶಿಕ್ಷಕರಿಗೂ ಮತ್ತು ಪೋಷಕರಿಗೂ ತಾಲೂಕು ಶಿಕ್ಷಣ ಇಲಾಖೆಗೂ ನನ್ನ ವೈಯಕ್ತಿಕ ಅಭಿನಂದನೆಗಳು
ಮುಂದುವರೆದು ಈ ಬರುವ ಶೈಕ್ಷಣಿಕ ವರ್ಷದಲ್ಲಿ 625 ಕ್ಕೆ 625 ಅಂಕಗಳಿಸುವ ಪ್ರತಿ ಮಗುವಿಗೂ 25,000 ನಗದು ಬಹುಮಾನವನ್ನು ನೀಡುತ್ತೇನೆ. ಜೊತೆಗೆ 600 ಕ್ಕಿಂತ ಹೆಚ್ಚು ಅಂಕ ಗಳಿಸುವ ಪ್ರತಿ ಮಗುವಿಗೂ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇನೆ ಎಂದು ಮಕ್ಕಳಲ್ಲಿ ಹೊಸ ಭರವಸೆ ಮತ್ತು ತಮ್ಮ ಮಾತುಗಳ ಮೂಲಕ ಪ್ರೇರಣದಾಯಕವಾಗಿ ಮಾತನಾಡಿದರು,,
ನಂತರ ಮಾತನಾಡಿದ ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ಶ್ರೀ ರಹಮತ್ ಉಲ್ಲಾ ಅಸಾದಿ ಅವರು ನಮ್ಮ ತೀರ್ಥಹಳ್ಳಿ ತಾಲೂಕು ಶಿಕ್ಷಣ ವ್ಯವಸ್ಥೆ ಸದೃಢವಾಗಿದ್ದು ಪಟ್ಟಣ ಪಂಚಾಯತಿ ವ್ಯಾಪ್ತಿಯ ಶಾಲೆಯ ಮಕ್ಕಳು ಸಹ ಉತ್ತಮ ರೀತಿಯಲ್ಲಿ ಕಲಿಕೆಯಲ್ಲಿ ತೊಡಗಿಕೊಂಡು ಸಾಧನೆ ಮಾಡುತ್ತಿರುವುದು ಪಟ್ಟಣ ಪಂಚಾಯಿತಿಯ ಅಧ್ಯಕ್ಷನಾಗಿ ನನಗೂ ಹಾಗೂ ಎಲ್ಲಾ ಸರ್ವ ಸದಸ್ಯರಿಗೂ ಅತ್ಯಂತ ಖುಷಿಯ ವಿಷಯ ಎಂದು ಅಭಿಪ್ರಾಯಪಟ್ಟರು, ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿಯಿಂದಲೂ ಮಕ್ಕಳಿಗೆ ಪ್ರೋತ್ಸಾಹ ನೀಡುವ ಭರವಸೆಯನ್ನು ನೀಡಿದರು
ಪಟ್ಟಣ ಪಂಚಾಯತಿಯ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ರಮೇಶ್ ಅವರು ಮಾತನಾಡಿ ಮಕ್ಕಳಲ್ಲಿರುವ ಶೈಕ್ಷಣಿಕ ಕಲಿಕಾ ಆಸಕ್ತಿ ಅವರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಆ ನಿಟ್ಟಿನಲ್ಲಿ ಎಲ್ಲ ಮಕ್ಕಳ ಸಾಧನೆಗೆ ನಮ್ಮ ಶುಭಾಶಯಗಳು ಎಂದು ತಿಳಿಸಿದರು
ಸಿದ್ಧಾಂತ ಫೌಂಡೇಶನ್ ನ ಮುಖ್ಯಸ್ಥರಾದ ಗೋಪಾಲಕೃಷ್ಣ ಭಟ್ ಅವರು ಮಾತನಾಡಿ ಮಕ್ಕಳಲ್ಲಿ ಪರೀಕ್ಷಾ ಸಂಬಂಧ ಇರುವಂತಹ ಗೊಂದಲಗಳನ್ನು ತೊಡೆದುಹಾಕಿ ಪರೀಕ್ಷೆಗೆ ಹೊಸ ಭರವಸೆಯೊಂದಿಗೆ ಮತ್ತು ಧೈರ್ಯದೊಂದಿಗೆ ಪರೀಕ್ಷೆಯನ್ನು ಎದುರಿಸುವ ಹೊಸ ಪ್ರಯತ್ನಕ್ಕೆ ನಮ್ಮದೊಂದು ಅಳಿಲು ಸೇವೆ ಎಂದು ಅಭಿಪ್ರಾಯಪಟ್ಟರು,
ಪ್ರಾಸ್ತವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗಣೇಶ್ ವೈ ಯವರು ಕಳೆದ ವರ್ಷದಿಂದ ಸಿದ್ಧಾಂತ ಫೌಂಡೇಶನ್ ಸಹಕಾರದಲ್ಲಿ ಮಾಡುತ್ತಿರುವಂತಹ ಈ ಪ್ರೇರಣ ಕಾರ್ಯಗಾರವು ಮಕ್ಕಳಲ್ಲಿ ಹೆಚ್ಚು ಅಂಕ ಗಳಿಸಲು ಸಹಕಾರಿಯಾಗಿದ್ದು ಕಳೆದ ವರ್ಷ ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುವಲ್ಲಿ ಅನೇಕ ಅಂಶಗಳ ಜೊತೆಗೆ ಈ ಕಾರ್ಯಗಾರವು ಸಹ ಕಾರಣವಾಗಿದೆ, ಜೊತೆಗೆ ಪ್ರೌಢಶಾಲೆಯ ಎಲ್ಲಾ ಮುಖ್ಯ ಶಿಕ್ಷಕರು ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಎಲ್ಲಾ ವಿಶೇಷ ಶಿಕ್ಷಕರ ಹೊಂದಾಣಿಕೆಯ ಅಂಶವೇ ತಾಲೂಕಿನ ಶೈಕ್ಷಣಿಕ ಸಮಗ್ರ ಪ್ರಗತಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು
ಈ ಕಾರ್ಯಕ್ರಮದ ವೇದಿಕೆಯಲ್ಲಿ, ತೀರ್ಥಹಳ್ಳಿ ತಾಲೂಕು ಪ್ರಧಾನ ಮಂತ್ರಿ ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕರಾದ ಪ್ರವೀಣ್ ಎಂ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಗಿರಿರಾಜ್ ಜಿ,ಕೆ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಮು ಬಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ರಮೇಶ್ ಕೆ, ವಿ,
ಎಸ್ ಎಸ್ ಎಲ್ ಸಿ ಪರೀಕ್ಷಾ ತಾಲೂಕು ನೋಡಲ್ ಅಧಿಕಾರಿಯಾದ ಗಣೇಶ್ ಕೆ, ಡಿ ಹಾಗೂ ಶಿಕ್ಷಣ ಸಂಯೋಜಕರಾದ ನಾಗರಾಜ್, ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಡಾ. ಮುರಳೀಧರ್ ಕಿರಣ್ ಕೆರೆ ಹಾಗೂ ಶ್ರೀ ರಾಘವೇಂದ್ರ ಭಟ್, ಹಾಗೂ ತಾಲೂಕಿನ ಹಲವು ಮುಖ್ಯ ಶಿಕ್ಷಕರು ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, 750ಕ್ಕಿಂತ ಹೆಚ್ಚು ಮಕ್ಕಳು ಭಾಗವಹಿಸಿದ್ದರು ..ಸಿದ್ದಾಂತ ಪೌಂಡೇಷನ್ ವತಿಯಿಂದ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಎಲ್ಲಾ ಮಕ್ಕಳಿಗೂ ಮಾಡಲಾಗಿತ್ತು..
ಕಾರ್ಯಕ್ರಮವನ್ನು ರಂಜಿತ್ ನಿರೂಪಿಸಿ ಕು. ಆದ್ಯ ಪ್ರಾರ್ಥನೆ ಮಾಡಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗಣೇಶ್ ವೈ ಪ್ರಾಸ್ತಾವಿಸಿದರು, ಮಂಜು ಬಾಬು ಹೆಚ್ ಪಿ ವಂದಿಸಿದರು