ದಾವಣಗೆರೆ.
ಜಿಲ್ಲಾ ಉಸ್ತುವಾರಿ ಸಚಿವರು ಬಿಜೆಪಿ ಮುಖಂಡರ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂದು ಚನ್ನಗಿರಿ ಶಾಸಕರಾದ ಬಸವರಾಜ್ ಶಿವಗಂಗಾ ಹೇಳಿಕೆ ನೀಡಿದ್ದಾರೆ ಆದರೆ ಯಾವ ಬಿಜೆಪಿ ಮುಖಂಡರ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಬಹಿರಂಗ ಪಡಿಸಬೇಕು ಎಂದು ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನು ಯಾಕೆ ಬದಲಾಯಿಸಬೇಕು ಎಂಬ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿಯ ಜೊತೆ ಯಾವ ರೀತಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದನ್ನು ಸಹ ತಿಳಿಸಿದ್ದಾರೆ.
ಶಾಸಕರಾದ ಶಿವಗಂಗಾ ಬಸವರಾಜ್ ಅವರಿಗೆ ಹೃತೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು. ಶಾಸಕರು ಕಾಂಗ್ರೆಸ್ ಪಕ್ಷದ ಮೇಲೆ ಇರುವ ಪ್ರಾಮಾಣಿಕತೆ ಮತ್ತು ಮಂತ್ರಿಯ ಒಳಪ್ಪಂದವನ್ನು ಖಂಡಿಸಿ ಧೈರ್ಯವಾಗಿ ಪತ್ರಿಕಾಗೋಷ್ಠಿಯನ್ನು ನಡೆಸಿರುವುದಕ್ಕೆ ಅಭಿನಂದನೆ ಮತ್ತು ಕಾಂಗ್ರೆಸ್ ಪಕ್ಷ ನಿಷ್ಠೆ , ಪ್ರಾಮಾಣಿಕತೆ ರೀತಿಯಲ್ಲೇ ಬಿಜೆಪಿಯ ಕಾರ್ಯಕರ್ತರು ಸಹ ಇದ್ದಾರೆ.
ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರನ್ನು ದಾವಣಗೆರೆ ಜಿಲ್ಲೆಯ ಜನ ಅನುಮಾನದಿಂದ ನೋಡುವ ಹಾಗೆ ಮಾಡುವುದು ಬೇಡ ಯಾರು ಕಾಂಗ್ರೆಸ್ಸಿನ ಮಂತ್ರಿಯ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಿದೆ ಆದ್ದರಿಂದ ಅವರ ಹೆಸರುಗಳನ್ನು ಶಾಸಕರು ಬಹಿರಂಗಪಡಿಸಬೇಕು ಎಂದರು.
ನಮ್ಮ ಬಿಜೆಪಿ ಪಕ್ಷದಲ್ಲೂ ಸಹ ಪಕ್ಷಕ್ಕೆ ದ್ರೋಹ ಬಗೆದು ನಾವೇ ಪ್ರಾಮಾಣಿಕರೆಂದು ತಮಗೆ ತಾವೇ ಶಬ್ಬಾಸ್ ಗಿರಿಯನ್ನು ಪಡೆದುಕೊಳ್ಳುತ್ತಿದ್ದಾರೆ ಆದ್ದರಿಂದ ಇವರ ಮುಖವಾಡವನ್ನ ಕಳಚ ಬೇಕಾಗಿದೆ ಸತ್ಯವನ್ನು ಬಹಳ ದಿನಗಳ ಕಾಲ ಮುಚ್ಚಿಡಲಾಗುವುದಿಲ್ಲ ಸುಳ್ಳಿಗೆ ಆಯಸ್ಸು ಕಮ್ಮಿ ಎಂದಿದ್ದರೂ ಸತ್ಯಕ್ಕೆ ಜಯ ಆದ್ದರಿಂದ ಕಾಂಗ್ರೆಸಿನ ಮುಖಂಡರಲಿ ಬಿಜೆಪಿ ಮುಖಂಡರಲಿ ತಮ್ಮ ಸ್ವಂತ ಅಧಿಕಾರದ ಆಸೆಗೆ ಪಕ್ಷದ ತತ್ವ ಸಿದ್ಧಾಂತವನ್ನು ಬಲಿಕೊಟ್ಟವರ ನಿಜ ಬಣ್ಣವನ್ನ ಬಯಲು ಮಾಡಿ ಸಾರ್ವಜನಿಕವಾಗಿ ತಿಳಿಸಿ ಶಾಶ್ವತವಾಗಿ ಮನೆಗೆ ಕಳಿಸಬೇಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಅಣಬೇರು ಜೀವನಮೂರ್ತಿ,ಎ.ವೈ ಪ್ರಕಾಶ್,ನೀಲಗುಂದ ರಾಜು,ಗೋವಿಂದರಾಜ್,ಟಿಂಕರ್ ಮಂಜಣ್ಣ,ಶಿವನಗೌಡ ಟಿ ಪಾಟೀಲ್,ಗುರುಸೋಗಿ ಉಪಸ್ಥಿತರಿದ್ದರು.
ಬಿಜೆಪಿಯ ಕೆಲವರು ಮಾಜಿ ಸಂಸದರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರ ಸಾವನ್ನು ಬಯಸುತ್ತಿರುವುದು ದುರಂತ. ಕಾಂಗ್ರೆಸ್ ನ ಹಿರಿಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನಮಗೆ ರಾಜಕೀಯ ವಿರೋಧಿಗಳು ಅಷ್ಟೇ ನಾವುಗಳು ಎಂದೂ ಅವರ ಸಾವನ್ನು ಬಯಸುವುದಿಲ್ಲ. ಹಿರಿಯ ಶಾಸಕರಿಗೆ 94 ವರ್ಷವಾಗಿದೆ ಅವರು 100 ವರ್ಷ ಬಾಳಲಿ ಆದರೆ ನಮ್ಮವರೇ ಕೆಲವರು ಮಾಜಿ ಸಂದರ ಸಾವನ್ನು ಬಯಸುತ್ತಿದ್ದಾರೆ ಇದು ನಮ್ಮ ದುರಂತ.
ನಮ್ಮ ಪಕ್ಷದಲ್ಲಿ ಕೆಲವರು ಯಾವಾಗಲೂ ಹಿರಿಯರ ಕುರಿತು ಮಾತನಾಡುತ್ತಿದ್ದಾರೆ. ಹಿರಿಯರ ಹೆಸರು ಹೇಳಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆಂದು ಬಿಜೆಪಿ ಮುಖಂಡರಾದ ಯಶವಂತ ರಾವ್ ಜಾಧವ್ ಹೇಳಿದರು.