
ದಾವಣಗೆರೆ: ಸರ್ಕಾರದ ಪ್ರಮುಖ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಗುತ್ತಿಗೆ ಕಾಮಗಾರಿ ಕಮಿಷನ್ ಆರೋಪ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೇಲೆ ಬಂದಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 80 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎನ್ನುವ ಆರೋಪ ಬಂದಿದ್ದು ಸರ್ಕಾರಕ್ಕೆ ಭಾರಿ ಮುಜುಗರ ತರಿಸಿದೆ. ಹಾಗಾದ್ರೆ ಆರೋಪ ಮಾಡಿದವರು ಯಾರು? ಇಲ್ಲಿದೆ ಮಾಹಿತಿ
ಸರ್ಕಾರದ ವಿವಿಧ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಗುತ್ತಿಗೆದಾರರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರ ವಿಪಕ್ಷಗಳಿಗೆ ಅಸ್ತçವಾಗಿ ಪರಿಣಮಿಸಿದ್ದು, ಸಿದ್ದರಾಮಯ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಎರಡನೇ ಬಾರಿಗೆ ಗುತ್ತಿಗೆದಾರರ ಸಂಘ ಇಂಥ ಗಂಭೀರ ಆರೋಪ ಮಾಡಿದೆ. ಹೀಗಾಗಿ ಸಹಜವಾಗಿಯೇ ಬಿಜೆಪಿ ಇದಕ್ಕೆ ತೀಕ್ಷ್ಯ ಪ್ರತಿಕ್ರಿಯೆ ನೀಡಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿದ್ದ ಇದೇ ಬಗೆಯ ಆರೋಪ ಸರಕಾರ ಬದಲಾವಣೆಗೆ ಕಾರಣವಾಗಿತ್ತು. ಈಗ ಕಾಂಗ್ರೆಸ್ ಸರಕಾರದ ವಿರುದ್ಧವೂ ಗುತ್ತಿಗೆದಾರರು ತಿರುಗಿ ಬಿದ್ದಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಪರದಾಡುವ ಪರಿಸ್ಥಿತಿಯನ್ನು ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ನಿರ್ಮಿಸಿದೆ.
ಬಿಜೆಪಿ ಆಡಳಿತದಲ್ಲಿ ಅಭಿವೃದ್ಧಿಯಲ್ಲಿ ಮಾದರಿಯಾಗಿದ್ದ ಕರ್ನಾಟಕ ರಾಜ್ಯಕ್ಕೆ ಕಾಂಗ್ರೆಸ್ ಸರ್ಕಾರ ಇದೀಗ ಭ್ರಷ್ಟಾಚಾರದಲ್ಲಿ ಕಪ್ಪುಮಸಿ ಬಳಿದಿರುವ ದುರ್ದೈವವೇ ಸರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಕೂಡ ಅಸಮಾಧಾನ ಹೊರಹಾಕಿದ್ದು, ಇದು ಶೇ. 60ರ ಕಮಿಷನ್ ಅನ್ನೂ ದಾಟಿರುವ ಸರಕಾರ ಎಂಬುದು ಜನರಿಗೂ ಗೊತ್ತಿದೆ.
ಈ ಸರಕಾರ ಕಣ್ಣು ಮುಚ್ಚಿ ಹಾಲು ಕುಡಿದರೆ ಗೊತ್ತಾಗುವುದಿಲ್ಲ ಎಂದುಕೊಂಡಿದೆ. ಆದರೆ ಗುತ್ತಿಗೆದಾರರ ಸಂಘದ ಆರೋಪ ವಾಸ್ತವ ಕಠೋರ ಸತ್ಯ. ಕಾರ್ಯಾದೇಶ ಪಡೆಯಲು ಶೇ.10, ಎಲ್‌ಸಿಗೆ ಶೇ. 10 ರಷ್ಟು ಕಮಿಷನ್ ಕೊಡಬೇಕು. ಇಷ್ಟರ ಮೇಲೆ ಶಾಸಕರು, ಜಿಲ್ಲಾ ಮಂತ್ರಿ, ಎಇಇ, ಎಇ, ಸೂಪರಿಂಟೆAಡೆAಟ್ ಎಂಜಿನಿಯರ್ ಹೀಗೆ ಎಲ್ಲ ಹಂತದಲ್ಲೂ ಕೊಡಬೇಕಿರುತ್ತದೆ ಎಂದಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ದೇಶದಲ್ಲಿ 80 ಪರ್ಸೆಂಟ್ ಸರಕಾರ. ಚುನಾವಣೆಯಲ್ಲಿ ಗೆದ್ದುಅಧಿ ಕಾರ ಹಿಡಿಯುವುದಕ್ಕಾಗಿ ಬಿಜೆಪಿ 40 ಪರ್ಸೆಂಟ್ ಸರಕಾರವೆಂದು ಸುಳ್ಳು ಆರೋಪ ಮಾಡಿದ್ದರು. ಇಂದು 80 ಪರ್ಸೆಂಟ್ ಸರಕಾರ ಇಡೀ ದೇಶದಲ್ಲಿ ಯಾವುದಾದರೂ ಇದ್ದರೆ ಅದು ಕರ್ನಾಟಕ ರಾಜ್ಯ ಸರಕಾರ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇಡೀ ದೇಶದಲ್ಲಿ ಭ್ರಷ್ಟ ಸರಕಾರವೆಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ್ ರಾಯರಡ್ಡಿ ಧೀವರೇ ಪ್ರಮಾಣಪತ್ರ ನೀಡಿದ್ದಾರೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.