ದಾವಣಗೆರೆ : ಮಲೆನಾಡು ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸೋಮವಾರ ಪ್ರಧಾನಿ ಮೋದಿ ಹವಾ ಜೋರಾಗಿತ್ತು . ಎಲ್ಲಿ ನೋಡಿದರೂ ಕೇಸರಿ ಬಾವುಟ, ಮೋದಿ ಬಂದ ಕೂಡಲೇ ಜನರ ಹರ್ಷದ್ಘೋರಾ, ಲಕ್ಷಾಂತರ ಜನರ ಮಧ್ಯೆ ತೆರೆದ ವಾಹನದಲ್ಲಿ ತೆರಳಿದ ಪ್ರಧಾನಿ ಮೋದಿ ಜತೆ ದಾವಣಗೆರೆ ಲೋಕಸಭೆ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ.
ಈ ಝಲಕ್ ಕಂಡು ಬಂದಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ. ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕದಲ್ಲಿ ತೆರೆದ ವಾಹನದಲ್ಲಿ ಹೊರಟ ಗಾಯಿತ್ರಿ ಸಿದ್ದೇಶ್ವರ್ ಗೆ ಸ್ವರ್ಗದ ಬಾಗಿಲೇ ತೆರೆದಂತಾಗಿತ್ತು.
ಈ ಹಿಂದೆಯ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆಗೆ ಮೋದಿ ಬಂದಾಗ ಸಂಸದ ಸಿದ್ದೇಶ್ವರ ಮಾತ್ರ ವೇದಿಕೆಯಲ್ಲಿದ್ದರು. ಆಗ ಮೋದಿ ನೀವು ಕಮಲ ಗೆಲ್ಲಿಸಿ ನಿಮಗೆ ಲಕ್ಷ್ಮೀ ಕಳಿಸುತ್ತೇನೆ ಅಂದಿದ್ದರು. ಅಂತೆಯೇ ಸಂಸದರನ್ನು ರಾಜ್ಯ ಸಚಿವರನ್ನಾಗಿ ಮಾಡಿದರು. ಈ ಬಾರಿ ಮತ್ತೆ ಮೋದಿ ಬಂದ ವೇಳೆ ಸಿದ್ದೇಶ್ವರ ಪತ್ನಿ ಗಾಯಿತ್ರಿ ಸಿದ್ದೇಶ್ವರ ವೇದಿಕೆ ಹಂಚಿಕೊಂಡಿದ್ದರು.
ಸದಾ ಮನೆ ಕೆಲಸ, ತೋಟ,ಹಸು ಮಾವ, ಪತಿ ರಾಜಕೀಯ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದ್ದ ಲೋಕಸಭೆ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಟಿವಿಯಲ್ಲಿ ಮಾತ್ರ ಪ್ರಧಾನಿ ನೋಡಿದ್ದರು. ಆದರೀಗ ದಾವಣಗೆರೆ ಲೋಕಸಭೆ ಅಭ್ಯರ್ಥಿಯಾಗಿ ತೆರೆದ ವಾಹನದಲ್ಲಿ ಮೋದಿ ಜತೆ ಗುರುತಿಸಿಕೊಂಡಿದ್ದು, ಮರೆಯಲಾದ ನೆನಪಾಗಿತ್ತು.
ಸದ್ಯ ಇಡೀ ರಾಜ್ಯದಲ್ಲಿ ಇಬ್ಬರು ಮಹಿಳೆಯರಿಗೆ ಮಾತ್ರ ಬಿಜೆಪಿ ಟಿಕೆಟ್ ನೀಡಿದ್ದು ಅದರಲ್ಲಿ ಗಾಯಿತ್ರಿಸಿದ್ದೇಶ್ವರ ಕೂಡ ಒಬ್ಬರಾಗಿದ್ದು, ಪ್ರಧಾನಿ ಜತೆ ಕಳೆದ ಆ ಕ್ಷಣಗಳು ಎಂದಿಗೂ ಅಜಾರಾಮರ.