ಭದ್ರಾವತಿ: ನಗರದ ನ್ಯೂಟೌನ್ ನಿವಾಸಿ ಪತ್ರಕರ್ತ ಆರ್.ವಿ.ಕೃಷ್ಣರವರ ಪುತ್ರ ಕೆ.ಜೆ. ಜೋಶ್ವ (29) ಶುಕ್ರವಾರ ರಾತ್ರಿ ನಿಧನ ಹೊಂದಿದರು.
ತಂದೆ ಆರ್.ವಿ.ಕೃಷ್ಣ, ತಾಯಿ ಹಾಗೂ ಓರ್ವ ಸಹೋದರ, ಓರ್ವ ಸಹೋದರಿ ಇದ್ದರು. ಜೋಶ್ವರವರು ವಾಹನ ಚಾಲಕರಾಗಿದ್ದು, ಬಾಲ್ಯದಿಂದಲೂ ಹಾವುಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದರು.
ಸಹಸ್ರಾರು ಹಾವುಗಳನ್ನು ರಕ್ಷಣೆ ಮಾಡುವ ಮೂಲಕ ಸ್ನೇಕ್ ಜೋಶ್ವ ಎಂದು ಗುರುತಿಸಿ ಕೊಂಡಿದ್ದರು. ಇವರ ನಿಧನಕ್ಕೆ ಕುವೆಂಪು ವಾಹನ ಚಾಲಕರ ಮತ್ತು ಮಾಲೀಕರ ಸಂಘ, ತಾಲೂಕು ಕಾರ್ಯನಿರತ ಪತ್ರಕರ್ತರ
ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕ ಪ್ರಮುಖರು ಸಂತಾಪ ಸೂಚಿಸಿದ್ದಾರೆ.