ನಂದೀಶ್, ಭದ್ರಾವತಿ : ಫೈರ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಭದ್ರಾವತಿ ನ್ಯೂಟೌನ್ ಪೊಲೀಸರು 1.40 ಲಕ್ಷ ರೂ. ಮೌಲ್ಯದ ಕ್ಯಾಸ್ಟಿಂಗ್ಸ್ 40 ಸ್ಟೀಲ್ ಪೀಸ್‌ಗಳು ಮತ್ತು ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್‌ಪಿ ಮಿಥುನ್ ಕುಮಾರ್, ಎಎಸ್‌ಪಿ ಭೂಮಾರೆಡ್ಡಿ ಮಾರ್ಗ ದರ್ಶನದಲ್ಲಿ ಡಿವೈ ಎಸ್‌ಪಿ ಕೆ.ಆರ್. ನಾಗರಾಜ್ ಮೇಲ್ವಿ ಚಾರಣೆ ಯಲ್ಲಿ ಸಿಪಿಐ ಶ್ರೀಶೈಲ ಕುಮಾರ್, ಪಿಎಸ್‌ಐ ಭಾರತೀ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿತ್ತು.
ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿ ಯಾದ ರಾಜೇಶ್ವರಿ ಸಿಎನ್‌ಸಿ ಮಿಷಿ ನಿಂಗ್ ಟೆಕ್ನಾಲಜಿ ಫ್ಯಾಕ್ಟರಿಯಲ್ಲಿ ಜೂ. 30 ರಂದು 1.40 ಲಕ್ಷ ರೂ. ಮೌಲ್ಯದ ಕ್ಯಾಸ್ಟಿಂಗ್ಸ್ 40 ಸ್ಟೀಲ್ ಪೀಸ್‌ಗಳು ಕಳವಾಗಿದ್ದವು. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ತಂಡವೊಂದನ್ನು ರಚಿಸಿ ಕಾರ್ಯಾಚರಣೆಗೆ ಇಳಿದಿತ್ತು.
ಕಳವು, ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ ಐ ಭಾರತೀ
ಕ್ಯಾಸ್ಟಿಂಗ್ ಸ್ಟೀಲ್ ಪೀಸ್ ಗಳು ಕಳವಾಗಿದ್ದ ದಿನವೇ ಪಿಎಸ್ ಐ ಭಾರತೀ ಕೇಸ್ ದಾಖಲಿಸಿಕೊಂಡು ಮೇಲಧಿಕಾರಿಗಳ ಸೂಚನೆಯಂತೆ ಸ್ಥಳಕ್ಕೆ ಧಾವಿಸಿದ್ದರು. ಅಲ್ಲದೇ ಅಲ್ಲಿ ನಡೆದ ಸೀನ್ ಆಫ್ ಕ್ರೈಂ ನ್ನು ವೀಕ್ಷಣೆ ಮಾಡಿದ್ದರು. ನಂತರ ಕಾರ್ಯಾಚರಣೆ ಶುರುವಾಗಿತ್ತು
ಯಾರು ಆರೋಪಿಗಳು
ಆರೋಪಿ ಜೇಡಿಕಟ್ಟೆ ಹೊಸೂರು ವಾಸಿ ಎಸ್.ಗಂಗಾಧರ (28), ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾ ವಾಸಿ ಮಹಮ್ಮದ್ ಇಮ್ರಾನ್ ಖಾನ್ (35), ಶಿವಮೊಗ್ಗದ ಮದಾರಿ ಪಾಳ್ಯ ರಸ್ತೆ ವಾಸಿ ಮಹಮ್ಮದ್ ಹಫೀಜುಲ್ಲಾ (33), ಮುತ್ತಾಕೀಂ ಮುಸ್ತು (22) ಬಂಧಿತರು. ಇವರು ಕೃತ್ಯಕ್ಕೆ ಬಳಸಿದ ಅಶೋಕ್ ಲೈಲ್ಯಾಂಡ್ ವಾಹನವನ್ನು ವಶ ಪಡಿಸಿಕೊಳ್ಳಲಾಗಿದೆ.
ಕದ್ದಿದ್ದು ಹೇಗೆ
ಕೋಟಿಗಟ್ಟಲೇ ಬಂಡವಾಳ ಹಾಕಿಕೊಂಡ ಕಾರ್ಖಾನೆ ಮಾಲೀಕರು ಫ್ಯಾಕ್ಟರಿಗೆ ಸಿಸಿಟಿವಿ ಹಾಕಿಸಿರಲಿಲ್ಲ. ಇದು ಕಳ್ಳರಿಗೆ ವರದಾನವಾಗಿತ್ತು. ಇದನ್ನೇ ಬಂಡವಾಳವಾಗಿಸಿಕೊಂಡ ಕಳ್ಳರು. ಕಾರ್ಖಾನೆಯ ಏರ್ ವೆಂಟರ್ ಲೇಟರ್ ಮೂಲಕ ಒಳಹೊಕ್ಕು ಬೆಲೆ ಬಾಳುವ ಕ್ಯಾಸ್ಟಿಂಗ್ಸ್ ಸ್ಟೀಲ್ 40 ಪೀಸ್‌ಗಳನ್ನು ಕಳವು ಮಾಡಿದ್ದರು. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಜೂ.30ರಂದು ದೂರು ದಾಖಲಾಗಿತ್ತು.
ಏನಿದು ಡೈ ಕ್ಯಾಸ್ಟಿಂಗ್
ಡೈ ಕಾಸ್ಟಿಂಗ್ ಎಂದರೆ ದ್ರವ ಮತ್ತು ಕರಗುವಿಕೆ ಒಳಗೊಂಡಿರುವ ಒಂದು ದ್ರವ. ಇದನ್ನು ಹೆಚ್ಚಿನ ಒತ್ತಡದಲ್ಲಿ ಪೂರ್ವ ಸಿದ್ಧಪಡಿಸಿದ ಡೈಗೆ ಚುಚ್ಚಲಾಗುತ್ತದೆ. ಡೈ ಎಂಬುದು ನಿಮ್ಮ ಅವಶ್ಯಕತೆಯ ಅಪೇಕ್ಷಿತ ಆಯಾಮಗಳು, ಆಕಾರಗಳು ಮತ್ತು ಗಾತ್ರಗಳಲ್ಲಿ ನಕಲಿಯಾಗಿರುವ ಉಕ್ಕಿನ ಅಚ್ಚನ್ನು ಸೂಚಿಸುತ್ತದೆ.ಲೋಹವನ್ನು ಡೈಗೆ ಸುರಿದ ನಂತರ, ಅದನ್ನು ಅಚ್ಚಿನಿಂದ ತೆಗೆದುಹಾಕುವ ಮೊದಲು ಅದು ಗಟ್ಟಿಯಾಗುತ್ತದೆ. ಅದು ತಣ್ಣಗಾದಾಗ, ಗೇಟಿಂಗ್ ವಸ್ತುಗಳನ್ನು ಹೊರತೆಗೆಯಲಾಗುತ್ತದೆ. ನಂತರ ಇದು ಸ್ಟೀಲ್ ರೂಪದಲ್ಲಿ ಬಂದು ವಸ್ತುವಾಗಿ ರೂಪುಗೊಳ್ಳುತ್ತದ. ಇವುಗಳನ್ನು ಸಾಮಾನ್ಯವಾಗಿ ಫೌಂಡ್ರಿಯಲ್ಲಿ ತಯಾರಿಸಲಾಗುತ್ತದೆ, ಇದು ಅತ್ಯಾಧುನಿಕ ಯಂತ್ರೋಪಕರಣಗಳಲ್ಲಿ ಬಳಸಲಾಗುತ್ತದೆ.
ಕದ್ದ ಕ್ಯಾಸ್ಟಿಂಗ್ ಪೀಸ್ ಗಳನ್ನ ಕಳ್ಳರು ಏನು ಮಾಡುತ್ತಿದ್ದರು
ಕದ್ದ ಕ್ಯಾಸ್ಟಿಂಗ್ ಪೀಸ್ ಗಳನ್ನು ಕಳ್ಳರು ದೂರದ ಕೈಗಾರಿಕಾ ಪ್ರದೇಶದಲ್ಲಿನ ಗುಜರಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಸ್ಥಳೀಯವಾಗಿ ಮಾರಾಟ ಮಾಡಿದರೆ ಸಿಕ್ಕಿ ಕೊಳ್ಳಬಹುದೆಂಬ ಭಯದಲ್ಲಿ ದೂರದ ಊರಿನ ಗುಜರಿಗಳಿಗೆ ಮಾರಾಟ ಮಾಡುತ್ತಿದ್ದರು. ಗುಜರಿ ಅಂಗಡಿಯವರು ಪುನಃ ಕೈಗಾರಿಕೆಗಳಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದರು.
ಹಗಲು ರಾತ್ರಿ ಕಾರ್ಯಾಚರಣೆ ಮಾಡಿದ್ದೇ ಇವರು
ಸಾಮಾನ್ಯವಾಗಿ ಎಲ್ಲ ಪ್ರಕರಣಗಳು ಹೊರಬಂದಾಗ ಮೇಲಧಿಕಾರಿಗಳ ಹೆಸರು ಗಮನ ಸೆಳೆಯುತ್ತದೆ. ಆದರೆ ವಾಸ್ತವದಲ್ಲಿ ಕೆಳ ಸಿಬ್ಬಂದಿಗಳು ಕ್ರೈಂ ತಡೆಯಲು ಸಾಕಷ್ಟು ಕೆಲಸ ಮಾಡುತ್ತಾರೆ. ಅಂತೆಯೇ ಈ ಪ್ರಕರಣದಲ್ಲಿ ಕೆಳ ಸಿಬ್ಬಂದಿಗಳಾದ ಟಿ.ರಮೇಶ್, ಎಎಸ್‌ಐ ಟಿ.ಪಿ. ಮಂಜಪ್ಪ, ಎಚ್‌ಸಿ ನವೀನ್, ಸಿಬ್ಬಂದಿ ರಾಘವೇಂದ್ರ, ವಿಜಯ್ ನವೀನ್, ಪ್ರಸನ್ನ , ಮಾರುತಿ ತಂಡ ತನಿಖೆ ಕೈಗೊಂಡಿತ್ತು. ಒಟ್ಟಾರೆ ಸ್ಟೀಲ್ ಕ್ಯಾಸ್ಟಿಂಗ್ ಮಾರಾಟ ಮಾಡಿ ಕಳ್ಳತನ ಮಾಡಬೇಕಿದ್ದವರನ್ನು ನ್ಯೂಟೌನ್ ಪೊಲೀಸರು ಎಡೆಮುರಿಕಟ್ಟಿದ್ದಾರೆ.