ಶಿವಮೊಗ್ಗ : ನಗರದ ಡಿವಿಎಸ್ ಸರ್ಕಲ್ ಬಳಿ ಇರುವ ಬಸವೇಶ್ವರ ವೃತ್ತದಲ್ಲಿ ಜಿಲ್ಲಾ ಮಡಿವಾಳ ಸಂಘದ ವತಿಯಿಂದ ಶ್ರೀ ಬಸವೇಶ್ವರರ ಜಯಂತಿ ಆಚರಣೆ ಅದ್ದೂರಿಯಾಗಿ ನಡೆಯಿತು. ಇದೇ ವೇಳೆ ಬಸವೇಶ್ವರರ ಪ್ರತಿಮೆಗೆ ಪುಷ್ಪಮಾಲೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಶ್ರೀ ಸಿ.ಎಸ್.ಚಂದ್ರಭೂಪಾಲ ಮಾತನಾಡಿ, ಬಸವಣ್ಣ ಒಬ್ಬ ಸಾಂಸ್ಕೃತಿಕ ನಾಯಕನಾಗಿದ್ದು,ಕಾಂಗ್ರೆಸ್ ಸರಕಾರ ಸಕಲ ಗೌರವ ನೀಡಿದೆ. ಬಸವಣ್ಣನವರು ೧೨ ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯ ಸುಧಾರಕರಾಗಿ ಅನುಭವ ಮಂಟಪವನ್ನು ಸ್ಥಾಪಿಸಿ ಸಮಾಜದಲ್ಲಿ ತಾರತಮ್ಯವನ್ನು ನಿವಾರಿಸಲು ಅರಿವು ಮೂಡಿಸಿದ್ದಾರೆ ಎಂದರು.
ಜಿಲ್ಲಾ ಮಡಿವಾಳ ಸಂಘದ ಗೌರವ ಅಧ್ಯಕ್ಷ ಎಂ.ಮಂಜಪ್ಪ. ಮಹಾ ಕರ್ಯಧ್ಯಕ್ಷ ಬಾಲಾಜಿ ರಾಜ್ ಮಹಾಪ್ರದಾನ ಕಾರ್ಯದರ್ಶಿ ಪ್ರಮೋದ್ ಎಂ.ಕೆ, ಮೈಲಾರಪ್ಪ, ಕೋಶಾಧ್ಯಕ್ಷ ಮಂಜುನಾಥ್ ಎನ್, ಪ್ರಮುಖರಾದ ಹುಚ್ಚಪ್ಪ, ರಾಜಣ್ಣ, ಸುಮಿತ್ ಆನಂದ್, ರಾಕೇಶ್, ಪೋಷಕರಾದ
ಹುಚ್ಚಪ್ಪ, ಕೆ.ಜಿ.ಗಂಗಾಧರ, ಜಯಪ್ಪ ಮತ್ತು ರಾಜು ಸಂಘಟನಾ ಕರ್ಯದರ್ಶಿ ಪ್ರಹ್ಲಾದ್, ಸುಮಿತ್ ಆನಂದ್, ಮತ್ತು ಮಡಿವಾಳರ ಸಮಾಜದ ಮುಖಂಡರು ಉಪಸ್ಥಿತರಿದ್ದರು.