- ಪ್ರಮುಖ ಸುದ್ದಿ
- ದಾವಣಗೆರೆ ವಿಶೇಷ
- ಕ್ರೈಂ ಸುದ್ದಿ
- ರಾಜಕೀಯ ಸುದ್ದಿ
- ರೈತಮಿತ್ರ
- ಅಡಕೆ ಧಾರಣೆ
- ಚಿನ್ನ, ಬೆಳ್ಳಿ ಧಾರಣೆ
- Blog
Subscribe to Updates
Get the latest creative news from FooBar about art, design and business.
Author: davangerevijaya.com
ದಾವಣಗೆರೆ : ರಾಜ್ಯ ಸರ್ಕಾರ ತನ್ನ ವಿರುದ್ಧ ಬಂದ ಆರೋಪಗಳಿಗೆ ತಿರುಗೇಟು ನೀಡಲು ಮುಂದಾಗಿದ್ದು ಬಿಜೆಪಿ ಸರ್ಕಾರದ ನಡೆದ ಅವ್ಯವಹಾರ ತನಿಖೆ ಮುಂದಾಗಿದೆ. ಕೋವಿಡ್ ಸಮಯದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ವಿಚಾರವಾಗಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ಅಸ್ತ್ರ ಪ್ರಯೋಗಿಸಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ. ನ್ಯಾ.ಮೈಕಲ್ ಡಿ ಕುನ್ನಾ ವರದಿ ಆಧಾರದ ಮೇಲೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಹಾಗಾದ್ರೆ ಬಿಜೆಪಿ ಮುಂದಿನ ನಡೆಯಬೇಕು? ಈ ಕುರಿತು ಸ್ಟೋರಿ ಇಲ್ಲಿದೆ. ಚೀನಾದಿಂದ ಪಿಪಿಇ ಕಿಟ್ ಖರೀದಿಸಿದ ವಿಚಾರವೇ ಈಗ ಕಾಂಗ್ರೆಸ್ ಸರ್ಕಾರದ ಪಾಲಿಗೆ ಬ್ರಹ್ಮಾಸ್ತ್ರವಾಗಿದೆ. ಇನ್ನೂ ನ್ಯಾ.ಮೈಕಲ್ ಡಿ ಕುನ್ನಾ ವರದಿಯಲ್ಲಿ ಯಡಿಯೂರಪ್ಪ ಹಾಗೂ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸ್ ದಾಖಲಿಸಿ ತನಿಖೆಗೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ನಿವೃತ್ತ ನ್ಯಾಯಮೂರ್ತಿ ಡಿ. ಮೈಕೆಲ್ ಕುನ್ಹಾ ಅವರ ಆಯೋಗ ರಚನೆ ಮಾಡಿದ್ದು…
*✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕* *🪐📖ದಿನ ಭವಿಷ್ಯ 10/11/2024 ಭಾನುವಾರ📖🪐* *01, ♈🐏,📖,ಮೇಷ ರಾಶಿ*📖 ಇತರರ ವಿಚಾರಗಳಿಂದ ದೂರವಿರುವುದು ಉತ್ತಮ. ವೃತ್ತಿಪರ ವ್ಯವಹಾರಗಳಲ್ಲಿ ಸ್ಥಿರವಾದ ಲಾಭವನ್ನು ಪಡೆಯುತ್ತೀರಿ. ಉದ್ಯೋಗ ವಿಚಾರದಲ್ಲಿ ಅಧಿಕಾರಿಗಳ ಜೊತೆಗಿನ ಚರ್ಚೆಗಳು ಫಲ ನೀಡುತ್ತವೆ. ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಅನುಕೂಲಕರವಾಗಿರುತ್ತದೆ. ನಿರುದ್ಯೋಗಿಗಳು ತಮ್ಮ ಶ್ರಮಕ್ಕೆ ತಕ್ಕ ಅವಕಾಶಗಳನ್ನು ಪಡೆಯುತ್ತಾರೆ, ಅದೃಷ್ಟದ ದಿಕ್ಕು:ಪಶ್ಚಿಮ ಅದೃಷ್ಟದ ಸಂಖ್ಯೆ:5 ಅದೃಷ್ಟದ ಬಣ್ಣ:ಹಳದಿ *02, ♉🐂,📖,ವೃಷಭ ರಾಶಿ*📖 ವ್ಯರ್ಥ ಪ್ರಯಾಣ ಮಾಡುತ್ತೀರಿ. ಮನೆಯ ಹೊರಗೆ ಋಣಾತ್ಮಕ ವಾತವರಣ ಇರುತ್ತದೆ. ಬಾಲ್ಯದ ಗೆಳೆಯರೊಂದಿಗೆ ವಿವಾದಗಳು ಉಂಟಾಗುತ್ತವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಇತರರೊಂದಿಗೆ ಮಾತುಗಳನ್ನು ಕೆಳಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಮಿಶ್ರ ಫಲಿತಾಂಶಗಳಿರುತ್ತವೆ, ಅದೃಷ್ಟದ ದಿಕ್ಕು:ಉತ್ತರ ಅದೃಷ್ಟದ ಸಂಖ್ಯೆ:4 ಅದೃಷ್ಟದ ಬಣ್ಣ:ಬೂದು *03,♊👥,📖,ಮಿಥುನ ರಾಶಿ*📖 ದೂರದ ಸಂಬಂಧಿಕರೊಂದಿಗೆ ಶುಭ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೀರಿ. ಮೌಲ್ಯದ ವಸ್ತು ಮತ್ತು ವಾಹನಗಳನ್ನು ಖರೀದಿಸಲಾಗುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ, ನಿಮ್ಮ ಕೆಲಸಕ್ಕೆ ಸೂಕ್ತವಾದ ಲಾಭವನ್ನು ನೀವು ಪಡೆಯುತ್ತೀರಿ. ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು…
ಚಿತ್ರದುರ್ಗ : ಅನಧಿಕೃತ ಸ್ಲಂಗಳ ತೆರವಿಗೆ ಮುಂದಾದ ಚಿತ್ರದುರ್ಗ ನಗರಸಭೆ ಅಧಿಕಾರಿಗಳಿಗೆ ಬಿಜೆಪಿ ನಾಯಕ ಜಿ.ಎಸ್.ಅನಿತ್ ತಡೆಯೊಡ್ಡಿ, ಸ್ಥಳವಕಾಶದ ನಂತರ ಇಲ್ಲಿನ ಮನೆಗಳು ಎತ್ತಂಗಡಿ ಮಾಡಿ ಎಂದು ಸೂಚಿಸಿ ಬೆಂಬಲಕ್ಕೆ ನಿಂತರು. ಚಿತ್ರದುರ್ಗ ವಿಜಯ ನಗರದಲ್ಲಿ ಈ ಘಟನೆ ನಡೆದಿದ್ದು, ನಿವಾಸಿಗಳ ಜೊತೆ ಚರ್ಚಿಸಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಅನಿತ್ ಮಾತನಾಡಿದರು. ಜನರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿ ನಾಗರಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಇದೊಂದು ಬಡವರ ಏರಿಯಾ, ಇರೋದಕ್ಕೆ ಸೂರು ಇಲ್ಲದೇ ಎಲ್ಲೋ ಒಂದು ಕಡೆ ವಾಸವಾಗಿತ್ತು. ಆದರೆ ನಗರ ಸಭೆ ಇದು ಅನಧಿಕೃತ ಸ್ಲಂ ಎಂದು ನಿವಾಸಿಗಳ ಮನೆ ತೆರವಿಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಅವರು ಎಲ್ಲಿಗೆ ಹೋಗಬೇಕೆಂಬ ಚಿಂತನೆಯಲ್ಲಿದ್ದರು. ಆಗ ಜಿ.ಎಸ್.ಅನಿತ್ ನಿಮ್ಮ ಜತೆ ನಾನಿದ್ದೇನೆ, ಎದೆಗುಂದಬೇಡಿ ಕೈಲಾದ ಸಹಾಯ ಮಾಡುತ್ತೇನೆ ಎಂಬ ನಂಬಿಕೆ ನೀಡಿದರು.
ಸಂಡೂರು : ಚನ್ನಪಟ್ಟಣ ಉಪಚುನಾವಣೆಯಂತೆ ಸಂಡೂರು ಉಪಚುನಾವಣೆ ಕಣ ಜೋರಾಗಿದ್ದು, ರಾಷ್ಟ್ರೀಯಎರಡು ಪಕ್ಷಗಳ ನಡುವೆ ನೇರಾಹಣಾಹಣಿ ಇದ್ದು, ದಾವಣಗೆರೆ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರಪುತ್ರ ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿದರು. ಸಂಡೂರು ವಿಧಾನಸಭಾ ಕ್ಷೇತ್ರದ ಭುಜಂಗನಗರ, ತಾರನಗರ , ಕೋರ್ಟ್ ರೋಡ್ ಹಾಗೂ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತಗೆ ಮತ ನೀಡಿ ಗೆಲ್ಲಿಸಬೇಕೆಂದು ಜನರ ಮನವೊಲಿಸಿದರು. ಈ ಸಂದರ್ಭದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ , ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಶ್ಯಾಮ , ಸ್ಥಳೀಯ ಮುಖಂಡರುಗಳಾದ ಕರಡಿ ಯರಿಸ್ವಾಮಿ, ರೇವಣಸಿದ್ದಪ್ಪ , ಸಂಜೀವ್ ರೆಡ್ಡಿ , ಸುಭಾಷ್ , ಬಾಲಕೃಷ್ಣ , ಬಾನೆಷ್, ರಘು , ವೆಂಕಟೇಶ್ , ರಘು ಹಾಗೂ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.
*✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕* *🐬📖ದಿನ ಭವಿಷ್ಯ 09/11/2024 ಶನಿವಾರ📖🐬* *01, ♈🐏,💫,ಮೇಷ ರಾಶಿ*💫 ಪ್ರಮುಖ ಕೆಲಸಗಳು ಅನುಕೂಲಕರವಾಗಿರುತ್ತವೆ. ದೂರ ಪ್ರಯಾಣ ಲಾಭದಾಯಕವಾಗಿರುತ್ತದೆ. ಮನೆಯ ಹೊರಗೆ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತವೆ. ಪವಿತ್ರ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ವಿವಾದಗಳು ಬಗೆಹರಿಯುತ್ತವೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ, ಅದೃಷ್ಟದ ದಿಕ್ಕು:ದಕ್ಷಿಣ ಅದೃಷ್ಟದ ಸಂಖ್ಯೆ:2 ಅದೃಷ್ಟದ ಬಣ್ಣ:ಹಸಿರು *02, ♉🐂, 💫,ವೃಷಭ ರಾಶಿ*💫 ಕೆಲವು ವ್ಯವಹಾರಗಳಲ್ಲಿ ಸ್ನೇಹಿತರಿಂದ ಆರ್ಥಿಕ ಸಹಾಯ ದೊರೆಯುತ್ತದೆ. ಕುಟುಂಬದ ಸದಸ್ಯರ ನೆರವಿನಿಂದ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ಸಹೋದರರೊಂದಿಗಿನ ಆಸ್ತಿ ವಿವಾದಗಳು ಬಗೆಹರಿಯುತ್ತವೆ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಶುಭ ಸುದ್ದಿ ದೊರೆಯುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅಧಿಕಾರಿಗಳ ಬೆಂಬಲ ದೊರೆಯುತ್ತದೆ, ಅದೃಷ್ಟದ ದಿಕ್ಕು:ಆಗ್ನೇಯ ಅದೃಷ್ಟದ ಸಂಖ್ಯೆ:3 ಅದೃಷ್ಟದ ಬಣ್ಣ:ಬೂದು *03,♊👥,💫,ಮಿಥುನ ರಾಶಿ*💫 ಪ್ರಮುಖರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ. ಸಮುದಾಯದಲ್ಲಿ ಹಿರಿಯರ ಪರಿಚಯಗಳು ಹೆಚ್ಚಾಗುತ್ತವೆ . ವಾಹನ ಅನುಕೂಲತೆ ಉಂಟಾಗುತ್ತದೆ.…
ದಾವಣಗೆರೆ : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಡಾ.ಸುರೇಶ್ ಹನಗವಾಡಿ ರವರು ಮೂಲತಃ ವೈದ್ಯರಾಗಿದ್ದು ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಫೆಥಾಲಜಿ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.. ಡಾ.ಸುರೇಶ್ ರವರು ಅತಿ ವಿರಳ, ದುಬಾರಿ ವೆಚ್ಚದ ಹಿಮೋಫಿಲಿಯಾ ನ್ಯೂನತೆ ಹೊಂದಿದ್ದು ಈ ಕಾಯಿಲೆ ಬಗ್ಗೆ ಸತತ 44 ವರ್ಷಗಳಿಂದ ಸಾಕಷ್ಟು ಅಧ್ಯಯನ ಮಾಡಿ ದೇಶ ವಿದೇಶಗಳ ಸುತ್ತಾಟ ಮಾಡಿ ತಮ್ಮ ಹಿಮೋಫಿಲಿಯಾ ಸಮುದಾಯದವರ ಕಷ್ಟ ಕಾರ್ಪಣ್ಯಗಳನ್ನು ಆಲಿಸಿ ಸರ್ಕಾರ ಮತ್ತು ಸಾರ್ವಜನಿಕರಿಗೆ ಸದರಿ ನ್ಯೂನತೆ ಬಗ್ಗೆ ಜಾಗೃತಿ ಮೂಡಿಸಿ ಅತಿ ದುಬಾರಿ ವೆಚ್ಚದ ಹಿಮೋಫಿಲಿಯಾ ಚಿಕಿತ್ಸೆಯನ್ನು ಸರ್ಕಾರದಿಂದ ಉಚಿತವಾಗಿ ದೇಶಾದ್ಯಂತ ದೊರಕಲು ಕಾರಣಕರ್ತರಾಗಿದ್ದಾರೆ. ದೇಶದಲ್ಲಿಯೇ ಹಿಮೋಫಿಲಿಯಾ, ತಲಸ್ಸೇಮಿಯಾ ಸೇರಿದಂತೆ ವಿರಳ ರಕ್ತಸ್ರಾವ ರೋಗಗಳಿಗೆ ಸಂಬಂಧಿಸಿದಂತೆ ಅತ್ಯುತ್ತಮ ಚಿಕಿತ್ಸಾ ಕೇಂದ್ರವನ್ನು ದಾವಣಗೆರೆ ನಗರದಲ್ಲಿ ಸ್ಥಾಪಿಸಿ ಅನ್ಯ ರಾಜ್ಯದ ರೋಗಿಗಳು ಒಳಗೊಂಡಂತೆ ಸಾವಿರಾರು ರೋಗಿಗಳಿಗೆ ಉತ್ಕೃಷ್ಟ ಗುಣಮಟ್ಟದ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ.. ಡಾ. ಸುರೇಶ್ ಹನಗವಾಡಿ ರವರ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ನಿಸ್ವಾರ್ಥ…
ದಾವಣಗೆರೆ : ಭದ್ರಾ ಜಲಾಶಯದ ಬುಡದಲ್ಲಿ ಸುಮಾರು 16 ಎಕರೆ ಬಫರ್ ಜೋನ್ ಪ್ರದೇಶದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ಮತ್ತು ವಸತಿ ಸಮುಚ್ಚಯಗಳ ನಿರ್ಮಾಣ ಕಾಮಗಾರಿಗಳನ್ನು ಸದ್ದಿಲ್ಲದೆ ಮಾಡಲಾಗುತ್ತಿದ್ದು, ರೈತ ಮುಖಂಡ ಬಿ.ಎಂ.ಸತೀಶ್ ನೇತೃತ್ವದ ತಂಡ ಇದರ ವಿರುದ್ಧ ಡಿಸಿಗೆ ಮನವಿ ಸಲ್ಲಿಸಿದೆ. ಮಧ್ಯ ಕರ್ನಾಟಕದ ಜನರ ಜೀವನಾಡಿಯಾಗಿರುವ ಭದ್ರಾ ಜಲಾಶಯ 6 ಜಿಲ್ಲೆಗಳ ಸುಮಾರು 4.5 ಲಕ್ಷ ಎಕರೆ ಕೃಷಿಗೆ ಮತ್ತು ಕುಡಿಯುವ ನೀರಿನ ನೀರಾವರಿ ಮೂಲವಾಗಿದೆ. ಈ ನೀರನ್ನು ನಂಬಿ ಲಕ್ಷಾಂತರ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇದನ್ನು ತರೀಕೆರೆ ಮತ್ತು ಹೊಸದುರ್ಗ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು “ಜೆ.ಜೆ.ಎಂ” (ಜಲ ಜೀವನ ಮಿಷನ್) ಯೋಜನೆಯಡಿ ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಇದು ಭದ್ರಾ ಜಲಾಶಯದ ಅಭದ್ರತೆ ಕಾರಣವಾಗಿದೆ. ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದಿದ್ದಾರೆ. ಪ್ರಮುಖ ಬೇಡಿಕೆಗಳು_ 1.ಭದ್ರಾ ಡ್ಯಾಂ ತಳಭಾಗದಲ್ಲಿ ಜೆಜೆಎಂ ಯೋಜನೆಯಡಿ ಕೈಗೊಳ್ಳಲಾದ ಅವೈಜ್ಞಾನಿಕ ಕಾಮಗಾರಿಯನ್ನು ತಕ್ಷಣ…
ಮೂರೂ ವಿಧಾನಸಭೆ ಉಪಚುನಾವಣೆ ಕಾವು ರಂಗೇರಿದ್ದು ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ. ಇದರ ನಡುವೆ ಆರೋಪ ಪ್ರತ್ಯಾರೋಪ ಜೋರಾಗಿದ್ದು, ಒಬ್ಬರಿಗೊಬ್ಬರು ವೈಯಕ್ತಿಕವಾಗಿ ಬೈದಾಡಿಕೊಂಡಿದ್ದಾರೆ. ಇದರ ನಡುವೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದ್ದು ಫಿಲ್ಡ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಎಂಟ್ರಿ ಕೊಟ್ಟಿದ್ದಾರೆ. ಆ ಮೂಲಕ ನಿಖಿಲ್ ಕುಮಾರ ಸ್ವಾಮಿ ಪರ ಅನುಕಂಪದ ಅಲೆ ಸೃಷ್ಟಿಸುತ್ತಿದ್ದಾರೆ. ಹಾಗಾದ್ರೆ ಕಾಂಗ್ರೆಸ್ ಶಾಕ್ ಕಾಯ್ದಿದೆಯಾ? ಸಿಪಿವೈಗೆ ಕಾಂಗ್ರೆಸ್ ನಾಯಕರು ಕೈಕೊಟ್ರಾ? ಈ ಕುರಿತು ಮಹತ್ವದ ಸ್ಟೋರಿ ಇಲ್ಲಿದೆ. ರಾಜ್ಯದ ಮೂರು ಉಪಚುನಾವಣೆ ಕಾವು ದಿನೇದಿನೆ ಹೆಚ್ಚಾಗುತ್ತಿದೆ. ತೀವ್ರ ಕುತೂಹಲ ಕೆರಳಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರಕ್ಕೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಧುಮುಕುತ್ತಿದ್ದು, ಎನ್‌ಡಿಎ ಅಭ್ಯರ್ಥಿ ಹಾಗೂ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ದೇವೇಗೌಡ ಅವರು ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ನಾಯಕರೊಂದಿಗೆ ಎನ್‌ಡಿಎ ಅಭ್ಯರ್ಥಿಯ ಪರವಾಗಿ ಪ್ರಚಾರಕ್ಕಿಳಿಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಲೋಕಸಭಾ ಚುನಾವಣೆ ವೇಳೆ…
ದಾವಣಗೆರೆ : ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ದಾವಣಗೆರೆ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ಮತಯಾಚನೆ ಮಾಡಿದರು. ನಂತರ ಮಾತನಾಡಿದ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಈಗಿನ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಾಗೂ ದುರಾಡಳಿತದಿಂದ ಜನರೂ ಸಾಕಷ್ಟು ನೊಂದಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಇಂತಹ ಭ್ರಷ್ಟ ಮತ್ತು ಕೆಟ್ಟ ಆಡಳಿತ ಸರ್ಕಾರವನ್ನು ಎಂದೂ ನೋಡಿಲ್ಲ ಎಂದರು. ಇನ್ನು ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸುವಂತೆ ಕ್ಷೇತ್ರದ ಜನರಲ್ಲಿ ಮನವಿಯನ್ನು ಮಾಡಿದರು. ಈ ಸಂಧರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ್. ಆರ್. ನಿರಾಣಿ ಹಾಗೂ ಶಾಸಕರುಗಳು ಮತ್ತು ಮಾಜಿ ಶಾಸಕರುಗಳು ಹಾಗೂ ಇನ್ನೂ ಆನೇಕ ಮುಖಂಡರು ಉಪಸ್ಥಿತರಿದ್ದರು.
ಚನ್ನಪಟ್ಟಣ : ಚನ್ನಪಟ್ಟಣ ಕ್ಷೇತ್ರದ ಮಳೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಚಕ್ಕೇರೆ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರ ಪರವಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ರಾಜ್ಯ ಸಹಕಾರ ವಿಭಾಗದ ಸಂಚಾಲಕ ಮಂಜುನಾಥ್‌ಗೌಡ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅದ್ದೂರಿಯಾಗಿ ಪ್ರಚಾರ ನಡೆಸಿದರು. ಚನ್ನಪಟ್ಟಣ ಉಸ್ತುವಾರಿ ಅಚ್ಚುಕಟ್ಟಾಗಿ ಸಭೆ ಆಯೋಜನೆ ಬಗ್ಗೆ ಡಿಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ಮಾಗಡಿ ಬಾಲಕೃಷ್ಣ, ಸೋಮಶೇಖರ್, ಸಂಸದ ಶ್ರೇಯಸ್ ಪಟೇಲ್, ಉಮಾಪತಿ, ಶ್ರೀನಿವಾಸ್ ಗೌಡ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಮಹಿಳೆಯರು, ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದರು. ಸಿ ಪಿ ಯೋಗೇಶ್ವರ್ ಅವರಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡುವಂತೆ ಮನವಿ ಮಾಡಿದರು.