Author: davangerevijaya.com

ದಾವಣಗೆರೆ : ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿರುವ ದಾವಣಗೆರೆ ಲೋಕಾಯುಕ್ತ ಎಸ್ಪಿ ಕೌಲಾಪುರೆ ನೇತೃತ್ವದ ತಂಡ ಕೈಗಾರಿಕೆ, ವಾಣಿಜ್ಯ ಇಲಾಖೆ ಸಹಾಯ ನಿರ್ದೇಶಕ ಕಮಲರಾಜ್ ಮನೆ ಸೇರಿದಂತೆ ನಾನಾ ಕಡೆ ದಾಳಿ ನಡೆಸಿದೆ. ಆದಾಯಕ್ಕಿಂತ ಆಸ್ತಿ ಹೆಚ್ಚು ಗಳಿಕೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ದಾವಣಗೆರೆ ಡಿಸಿ ಕಚೇರಿ ಬಳಿ ಇರುವ ಕಚೇರಿ, ಶಕ್ತಿನಗರದ 3ನೇ ಕ್ರಾಸ್‌ನಲ್ಲಿನ ಮನೆ, ಚಿತ್ರದುರ್ಗದಲ್ಲಿನ 3 ಮನೆ ಮೇಲೆ ದಾಳಿ ನಡೆದಿದೆ. ದಾಳಿ ವೇಳೆ ಒಂದು ಇನ್ನೋವಾ ಕಾರ್, ಬುಲೆಟ್,  ಮೂರು ಸೈಟ್ ಇರುವುದು ಗೊತ್ತಾಗಿದೆ. ಅಲ್ಲದೇ1 ಲಕ್ಷ ನಗದು, ಚಿನ್ನ ಸಿಕ್ಕಿದೆ. ಪರಿಶೀಲನೆ ಕಾರ್ಯ ನಡೆಯುತ್ತಿದೆ. ಇನ್ಸ್ಪೆಕ್ಟರ್‌ಗಳಾದ ಮಧು ಸೂದನ್ ಹಾಗೂ ಪ್ರಭು ಸೇರಿದಂತೆ 10ಕ್ಕೂ ಹೆಚ್ಚು ಸಿಬ್ಬಂದಿ ಪರಿಶೀಲನೆಯಲ್ಲಿ ತೊಡಗಿದ್ದು, ಇನ್ನಷ್ಟು ಮಾಹಿತಿ ಬರಬೇಕಿದೆ. ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ದಾವಣಗೆರೆ, ಧಾರವಾಡ, ಬೆಳಗಾವಿ ಹಾವೇರಿ, ಬೀದರ್​ ಸೇರಿದಂತೆ…

Read More

*✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕* *💫📖ದಿನ ಭವಿಷ್ಯ 12//11/2024 ಮಂಗಳವಾರ📖💫* *01, ♈🐏,🧜‍♂️,ಮೇಷ ರಾಶಿ*🧜‍♂️ ಕೈಗೆತ್ತಿಕೊಂಡ ಕೆಲಸಗಳು ಕಷ್ಟದಿಂದ ಪೂರ್ಣಗೊಳ್ಳುತ್ತವೆ. ಸ್ಥಿರಾಸ್ತಿ ವ್ಯವಹಾರದಲ್ಲಿ ಹಿರಿಯರೊಂದಿಗೆ ಯೋಚಿಸಿ ಮಾತನಾಡಬೇಕು. ವೃತ್ತಿಪರ ವ್ಯವಹಾರಗಳು ಕೂಡಿ ಬರುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳ ವಿರೋಧ ಹೆಚ್ಚಾಗುತ್ತದೆ. ಪ್ರಯಾಣವನ್ನು ಮುಂದೂಡಲಾಗುತ್ತದೆ. ಮಕ್ಕಳ ಉದ್ಯೋಗ ಪ್ರಯತ್ನಗಳು ನಿರುತ್ಸಾಹಗೊಳಿಸುತ್ತವೆ, ಅದೃಷ್ಟದ ದಿಕ್ಕು:ಆಗ್ನೇಯ ಅದೃಷ್ಟದ ಸಂಖ್ಯೆ:9 ಅದೃಷ್ಟದ ಬಣ್ಣ:ಹಳದಿ *02, ♉🐂,🧜‍♂️,ವೃಷಭ ರಾಶಿ*🧜‍♂️ ಪ್ರಮುಖ ವ್ಯವಹಾರಗಳಲ್ಲಿ ಸಹೋದರರ ಸಹಕಾರದಿಂದ ಮುಂದೆ ಸಾಗುತ್ತೀರಿ. ಸ್ಥಿರಾಸ್ತಿ ವಿವಾದಗಳನ್ನು ಪರಿಹರಿಸಲಾಗುತ್ತದೆ. ಮನೆಯ ವಾತಾವರಣ ಸಂತೋಷದಿಂದ ಕೂಡಿರುತ್ತದೆ. ವೃತ್ತಿ ಮತ್ತು ಉದ್ಯೋಗದ ವಿಷಯದಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ದೈವಿಕ ಕಾರ್ಯಕ್ರಮಗಳನ್ನು ನಿರ್ವಹಿಸುತ್ತೀರಿ, ಅದೃಷ್ಟದ ದಿಕ್ಕು:ಆಗ್ನೇಯ ಅದೃಷ್ಟದ ಸಂಖ್ಯೆ:6 ಅದೃಷ್ಟದ ಬಣ್ಣ:ಹಸಿರು *03,♊👥,🧜‍♂️, ಮಿಥುನ ರಾಶಿ*🧜‍♂️ ನೇತ್ರ ಸಂಬಂಧಿ ಕಾಯಿಲೆಗಳು ನೋವುಂಟು ಮಾಡುತ್ತವೆ. ಕೈಗೆತ್ತಿಕೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ಆರ್ಥಿಕ ವಾತಾವರಣ ಹೆಚ್ಚು ಕಷ್ಟಕರವಾಗಿರುತ್ತದೆ. ನಿರುದ್ಯೋಗಿಗಳು ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ವೃತ್ತಿಪರ ವ್ಯವಹಾರದಲ್ಲಿ ಸಣ್ಣ ಲಾಭವನ್ನು ಪಡೆಯಲಾಗುತ್ತದೆ…

Read More

ಬೆಂಗಳೂರು: ಸಾರ್ವಜನಿಕರಿಗೆ ಮಧುಮೇಹದ ಬಗ್ಗೆ ಕರಪತ್ರ ವಿತರಣೆ, ಅರಿವು ಮೂಡಿಸುವ ಸಲುವಾಗಿ ವಿಶ್ವ ಮಧುಮೇಹ ದಿನವನ್ನು ಅರ್ಥ ಪೂರ್ಣವಾಗಿ ಬೆಂಗಳೂರಿನ ದೊಡ್ಡಕಲ್ಲ ಸಂದ್ರದಲ್ಲಿ ಜೈಮಸ್ ಆಸ್ಪತ್ರೆಯಿಂದ ಆಚರಣೆ ಮಾಡಲಾಯಿತು. ಬೆಂಗಳೂರಿನ ದೊಡ್ಡಕಲ್ಲಸಂದ್ರ ಸಿಟಿ ಎಂಜಿನಿಯರಿಂಗ್ ಕಾಲೇಜುನಿಂದ ಜೈಮಸ್ ಆಸ್ಪತ್ರೆವರೆಗೆ 3 ಕಿಮೀ ವರೆಗೆ ಜಾತಮಾಡ ಲಾಯಿತು. ಜೈ ಮಸ್ ಆಸ್ಪತ್ರೆಯ ನೇತೃತ್ವದಲ್ಲಿ ಸಕ್ಕರೆ ಕಾಯಿಲೆ ಬಗ್ಗೆ ತಿಳುವಳಿಕೆ ಜಾತ ಮಾಡಲಾಯಿತು. ಜೈ ಮುಸ್ ಆಸ್ಪತ್ರೆ ಕೆಲಸ ಕಾರ್ಯಗಳಿಗೆ ಅಪಾರ್ಟ್ಮೆಂಟ್ ನಿವಾಸಿಗಳ ಸಂಘ, ಸ್ಥಳೀಯ ಸಂಘ ಸಂಸ್ಥೆಗಳ, ಸಾರ್ವಜನಿಕರು,ವೈದ್ಯರು, ವಿದ್ಯಾರ್ಥಿಗಳು ಕೈಜೋಡಿಸಿದರು, ಸುಮಾರ್ 3 ಕಿಮೀ ವರೆಗೆ ನಡೆಗೆ ಮಾಡುವ ಮೂಲಕ ಸಾರ್ವಜನಿಕರಿಗೆ ಮಧುಮೇಹ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿದರು. ಅರಿವಿನ ಜಾತದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನೆಲೆ ಪುಟ್ಟ ಬಾಲಕಿಗೆ ತಾಯಿ ಭುವನೇಶ್ವರಿ ವೇಷ ಹಾಕಿಸುವ ಮೂಲಕ ಅರಿವಿನ ಜಾತದಲ್ಲಿ ವಿಶೇಷತೆ ಮೆರೆದರು. ಜೈಮಸ್ ಆಸ್ಪತ್ರೆಯ ಮಧುಮೇಹ ವಿಭಾಗದ ವೈದ್ಯಕೀಯ ನಿರ್ದೇಶಕ ಡಾ.ನಾಗರಾಜು ಮಾತನಾಡಿ, ನಿತ್ಯ ಮಧುಮೇಹದ ಬಗ್ಗೆ ಜನರಿಗೆ…

Read More

ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಮಂಡಿ ನೋವು ಕಾಣಿಸುತ್ತಿದ್ದು, ಉತ್ತಮ ಆಹಾರ ಪದ್ಧತಿ, ಸರಿಯಾದ ಜೀವನ ಶೈಲಿ ಇಲ್ಲದಿರುವುದು ಹಾಗೂ ಸ್ಥೂಲ ಕಾಯ ಪ್ರಮುಖ ಕಾರಣವಿದೆ ಎಂದು ಕೀಲುಮೂಳೆ ತಜ್ಞ ಡಾ. ಪಿ.ಸುಧೀಂದ್ರ ಹೇಳಿದರು. ರಾಜೇಂದ್ರನಗರದ ರೋಟರಿ ಸಭಾಂಗಣದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಸದಸ್ಯರು ಹಾಗೂ ಸಾರ್ವಜನಿಕರಿಗೆ ಆಯೋಜಿಸಿದ್ದ ಮಂಡಿ ನೋವಿನ ತಪಾಸಣೆ ಶಿಬಿರ ಹಾಗೂ ಸಲಹೆ ಮುನ್ನೆಚ್ಚರಿಕಾ ಕ್ರಮಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ಆಹಾರ ಪದ್ಧತಿ ಪಾಲಿಸಬೇಕು. ಸರಿಯಾದ ಜೀವನ ಶೈಲಿ ಪಾಲಿಸಬೇಕು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ತಿಳಿಸಿದರು. ಮಂಡಿ ನೋವಿನ ವಿವಿಧ ಬಗೆಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಮಂಡಿ ನೋವಿನ ಕಾರಣಗಳು, ಬರದೇ ಇರುವ ರೀತಿ ಮುಂಜಾಗ್ರತಾ ಕ್ರಮಗಳು, ಬಂದ ನಂತರ ಮಾಡುವ ಚಿಕಿತ್ಸಾ ಕ್ರಮಗಳನ್ನು ವಿವರಿಸಿದರು. ಆಹಾರ ಪದ್ಧತಿ ಮತ್ತು ವ್ಯಾಯಾಮಗಳ ಮಹತ್ವ ತಿಳಿಸಿದರು. ಮೂಳೆ ಸವಕಳಿ ತಡೆಗಟ್ಟುವುದು ಹಾಗೂ ಚಿಕಿತ್ಸಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮುಖಾಂತರ…

Read More

*✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕* *💫📖ದಿನ ಭವಿಷ್ಯ 11/11/2024 ಸೋಮವಾರ📖💫* *01, ♈🐏,⚜️,ಮೇಷ ರಾಶಿ*⚜️ ಕೈಗೊಂಡ ವ್ಯವಹಾರಗಳಲ್ಲಿ ಸ್ವಲ್ಪ ಗೊಂದಲಗಳು ಉಂಟಾಗುತ್ತವೆ. ಕುಟುಂಬದ ಸದಸ್ಯರ ವರ್ತನೆಯು ಮಾನಸಿಕ ಸಮಸ್ಯೆಗಳನ್ನು ಉಂಟಾಗುತ್ತವೆ . ಮಕ್ಕಳ ಆರೋಗ್ಯ ಮಕ್ಕಳ ಆರೋಗ್ಯದ ವಿಷಯದಲ್ಲಿ ಜಾಗ್ರತೆ ವಹಿಸಬೇಕು. ಆರ್ಥಿಕ ಸ್ಥಿರತೆ ಇರುವುದಿಲ್ಲ. ವೃತ್ತಿಪರ ಉದ್ಯೋಗಗಳಲ್ಲಿ ಗೊಂದಲದ ಪರಿಸ್ಥಿತಿಗಳಿರುತ್ತವೆ. ವ್ಯಾಪಾರಗಳು ನಿಧಾನವಾಗಿ ಸಾಗುತ್ತವೆ, ಅದೃಷ್ಟದ ದಿಕ್ಕು:ದಕ್ಷಿಣ ಅದೃಷ್ಟದ ಸಂಖ್ಯೆ:3 ಅದೃಷ್ಟದ ಬಣ್ಣ:ಹಳದಿ *02, ♉🐂,⚜️,ವೃಷಭ ರಾಶಿ*⚜️ ಸಹೋದರರೊಂದಿಗಿನ ಸ್ಥಿರಾಸ್ತಿ ವಿವಾದಗಳನ್ನು ಬಗೆಹರಿಸುತ್ತೀರಿ. ಆದಾಯದ ಮಾರ್ಗಗಳು ಹೆಚ್ಚಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಕೆಲಸದಲ್ಲಿ ನಿರೀಕ್ಷಿತ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ದೂರದ ಬಂಧು ಮಿತ್ರರಿಂದ ಶುಭ ಸುದ್ದಿ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಪಾಲುದಾರರೊಂದಿಗೆ ಸಮಸ್ಯೆಗಳನ್ನು ನಿವಾರಿಸುತ್ತೀರಿ ಅದೃಷ್ಟದ ದಿಕ್ಕು:ವಾಯುವ್ಯ ಅದೃಷ್ಟದ ಸಂಖ್ಯೆ:6 ಅದೃಷ್ಟದ ಬಣ್ಣ:ಬಿಳಿ *03,♊👥,⚜️,ಮಿಥುನ ರಾಶಿ*⚜️ ಅಗತ್ಯಕ್ಕೆ ಹಣ ಕೈಯಲ್ಲಿ ಇರುವುದಿಲ್ಲ. ಕೈಗೊಂಡ ಕೆಲಸಗಳಲ್ಲಿ ಎಷ್ಟೇ ಕಷ್ಟಪಟ್ಟರೂ ಫಲಿತಾಂಶ ನಿಧಾನವಾಗಿ ಸಾಗುತ್ತದೆ. ಕೆಲವು ವ್ಯವಹಾರಗಳಲ್ಲಿ ಸಂಗಾತಿಯ ಸಲಹೆಯೊಂದಿಗೆ ಮುಂದುವರಿಯುವುದು…

Read More

ದಾವಣಗೆರೆ: ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿ ನಾಗರಿಕರು, ವಾರ್ಡ್ ನ ಪ್ರಮುಖರು ಸೇರಿ ಮಹಾನಗರ ಪಾಲಿಕೆಯ ಸದಸ್ಯ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ನೇತೃತ್ವದಲ್ಲಿ ಕನ್ನಡ ದಿನಾಚರಣೆಯನ್ನು ಆಚರಿಸಿದರು. ಈ ವೇಳೆ ಮಾತನಾಡಿದ ಗಡಿಗುಡಾಳ್ ಮಂಜುನಾಥ್ ಅವರು, ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ ಸಂರಕ್ಷಣೆಗೆ ಶ್ರಮಿಸಿದವರನ್ನು ನೆನಪು ಮಾಡಿಕೊಳ್ಳಬೇಕು. ಇಂಥ ಮಹನೀಯರಿಗೆ ಗೌರವ ಸಲ್ಲಿಸುವ ಕೆಲಸ ಮಾಡೋಣ. ಅವರ ಆಶಯಗಳಂತೆ ಕನ್ನಡ ಉಳಿಸಿ ಬೆಳೆಸಲು ಶ್ರಮಿಸೋಣ ಎಂದು ಕರೆ ನೀಡಿದರು. ಕನ್ನಡ ನಾಡು, ನುಡಿ, ಇತಿಹಾಸಕ್ಕೆ ತನ್ನದೇ ಆದ ವಿಶಿಷ್ಟ, ಮಹತ್ವ, ಪ್ರಾಮುಖ್ಯತೆ ಇದೆ. ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡವೇ ಶ್ರೇಷ್ಠ. ಕನ್ನಡ ನುಡಿಯೇ ಚೆಂದ. ಕನ್ನಡ ಸಂಸ್ಕೃತಿ ಪರಂಪರೆಯೇ ಅಂದ. ಇಂಥ ಮಹೋನ್ನತ ಇತಿಹಾಸ ಹೊಂದಿರುವ ಕನ್ನಡ ಭಾಷೆ ಉಳಿಸಬೇಕಾದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು. ಆಡಳಿತ ಭಾಷೆ ಕನ್ನಡ ಭಾಷೆಯಾಗಿದ್ದರೂ ಪರಭಾಷೆಗಳ ಹಾವಳಿ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಆಗಬೇಕಿದೆ. ಕನ್ನಡ ನಾಡಿನಲ್ಲಿ ಕನ್ನಡವೇ…

Read More

ದಾವಣಗೆರೆ: ವೋಟ್ ಬ್ಯಾಂಕ್ ರಾಜಕಾರಣಕ್ಕೆ ವಕ್ಫ್ ಆಸ್ತಿಯ ಹೆಸರಿನಲ್ಲಿ ರೈತರ ಜಮೀನು, ದೇಗುಲ ಹಾಗೂ ಮಠಗಳನ್ನು ಕಬಳಿಸಲು ಮುಂದಾಗಿ ರಾಜ್ಯದ ಶಾಂತಿ ಕದಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು. ವಕ್ಫ್‌ ಸಚಿವ ಜಮೀರ್‌ ಅಹಮ್ಮದ್‌ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಶಾಸಕ ಬಿ.ಪಿ.ಹರೀಶ್‌ ಆಗ್ರಹಿಸಿದರು. ‘ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಹಿಂದೂಗಳ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಗಣೇಶ ಹಬ್ಬದ ಮೆರವಣಿಗೆಗೆ ನಿರ್ಬಂಧ ವಿಧಿಸಲಾಗಿದೆ. ದೀಪಾವಳಿ ಹಬ್ಬದ ಪಟಾಕಿ ಸಿಡಿಸಲು ಕಡಿವಾಣ ಹಾಕಲಾಗಿದೆ. ವಕ್ಫ್‌ ಹೆಸರಿನಲ್ಲಿ ರೈತರ ಭೂಮಿಯನ್ನು ಸ್ವಾಧೀನಕ್ಕೆ ಪಡೆಯುವ ಹುನ್ನಾರ ನಡೆದಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ‘ವಕ್ಫ್‌ ವಿಚಾರದಲ್ಲಿ ರಾಜ್ಯದಲ್ಲಿ ಗೊಂದಲ ಸೃಷ್ಟಿಯಾಗಿದೆ. ರೈತರ ಪಹಣಿಯಲ್ಲಿ ವಕ್ಫ್‌ ಹೆಸರು ನಮೂದಾಗುತ್ತಿದೆ. ಇದರ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ವಿಜಯಪುರದಲ್ಲಿ ಹೋರಾಟ ನಡೆಸಲಾಗಿದೆ. ನ.14ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ಹೋರಾಟಕ್ಕೆ ರೂಪುರೇಷ ಸಿದ್ಧಪಡಿಸಲಾಗುವುದು’ ಎಂದರು. ‘ಭಾರತೀಯರನ್ನು ಒಡೆದಾಳುವ ಉದ್ದೇಶದಿಂದ ವಕ್ಫ್‌ ಕಾಯ್ದೆಯನ್ನು ಬ್ರಿಟಿಷರು ಜಾರಿಗೆ…

Read More

ದಾವಣಗೆರೆ: ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ನ.11ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಎನ್‌.ರುದ್ರಮುನಿ ತಿಳಿಸಿದರು.‘2022ರಿಂದ ಒನಕೆ ಓಬವ್ವ ಜಯಂತಿಯನ್ನು ಸರ್ಕಾರದಿಂದ ಆಚರಿಸಲಾಗುತ್ತಿದೆ. ಜಿಲ್ಲಾಡಳಿತದ ಸಹಯೋಗದೊಂದಿಗೆ ಜಯಂತಿ ಆಯೋಜಿಸಲಾಗಿದ್ದು, ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ‘ನಗರದ ವೃತ್ತವೊಂದಕ್ಕೆ ಒನಕೆ ಓಬವ್ವ ಹೆಸರು ನಾಮಕರಣ ಮಾಡಬೇಕು. ಸಮುದಾಯ ಭವನಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಕವಿ ಸಿದ್ದಲಿಂಗಯ್ಯ ಅವರ ಹೆಸರನ್ನು ರಸ್ತೆಯೊಂದಕ್ಕೆ ಇಡಬೇಕು. ವಿಶ್ವವಿದ್ಯಾಲಯದಲ್ಲಿ ಓಬವ್ವ ಅಧ್ಯಯನ ಕೇಂದ್ರ ತೆರೆಯಬೇಕು ಎಂಬ ಬೇಡಿಕೆಯನ್ನು ಜಿಲ್ಲಾಡಳಿತದ ಎದುರು ಇಡಲಾಗುವುದು’ ಎಂದು ಹೇಳಿದರು. ಮಹಾಸಭಾದ ಮಾಜಿ ಗೌರವಾಧ್ಯಕ್ಷ ಎಸ್‌.ಶೇಖರಪ್ಪ, ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ, ನಿವೃತ್ತ ವೈದ್ಯಾಧಿಕಾರಿ ಡಾ.ಜಗನ್ನಾಥ್‌, ನಿವೃತ್ತ ಎಂಜಿನಿಯರ್‌ ನಾಗಭೂಷಣ್‌, ಗುತ್ತಿಗೆದಾರ ಎಚ್‌.ಚಂದ್ರಪ್ಪ ಹಾಜರಿದ್ದರು.

Read More

ದಾವಣಗೆರೆ: ನಗರದ ಪಿ.ಜೆ.ಬಡಾವಣೆಯ ಕೆಲ ಭಾಗವನ್ನು ವಕ್ಫ್ ಮಂಡಳಿ ಹೆಸರಿಗೆ ಮಾಡಿರುವ ನೋಂದಣಿಯನ್ನು ಕೂಡಲೇ ರದ್ದುಪಡಿಸಬೇಕು. ಇಲ್ಲವಾದರೆ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಕೆ.ಪ್ರಸನ್ನಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, “ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ದಾಖಲೆ ತಿದ್ದುಪಡಿಯಾಗಿದೆ. 2015ರ ಮಾರ್ಚ್ನಲ್ಲಿ ಪಹಣಿಯಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿದೆ. ಅಂದಿನ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳಿಗೆ ಇದ್ದ ಒತ್ತಡ ಏನು ಎಂಬುದು ಬಹಿರಂಗವಾಗ ಬೇಕು. ಸ್ಥಳ ಪರಿಶೀಲನೆ ಮಾಡದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಮೈಸೂರು ಅರಸ ಜಯಚಾಮರಾ ಜೇಂದ್ರ ಒಡೆಯರ್ ಹೆಸರಿನಲ್ಲಿ ನಿರ್ಮಾಣವಾದ ಬಡಾವಣೆಯಲ್ಲಿ 80 ವರ್ಷಗಳಿಂದ ಜನರು ವಾಸವಾಗಿದ್ದಾರೆ. ಮೂರು ತಲೆಮಾರುಗಳು ಈ ಸ್ಥಳದಲ್ಲಿ ನೆಲೆಸಿವೆ. ಏಕಾಏಕಿ ಇದು ವಕ್ಫ್ ಆಸ್ತಿಯಾಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ. ‘ಈ ಬಡಾವಣೆಯನ್ನು ನಗರ ಸ್ಥಳೀಯ ಸಂಸ್ಥೆ ಅಭಿವೃದ್ಧಿಪಡಿಸಿ ಸಾರ್ವಜನಿಕ ರಿಗೆ ಹಂಚಿಕೆ ಮಾಡಿದೆ. ಮಧ್ಯಮ ವರ್ಗದ ಕುಟುಂಬಗಳ ವಾಸಕ್ಕೆ…

Read More

ದಾವಣಗೆರೆ: ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಗಳನ್ನು ಹೊಂಚು ಹಾಕಿ ಚಿನ್ನಾಭರಣ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಡಾವಣೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಶಾಂತಿ ನಗರದ ನಿವಾಸಿ ಕಿರಣ್ ನಾಯ್ಕ (25) ಹಾಗೂ ವಿನೋದ್ ನಾಯ್ಕ (23) ಬಂಧಿತರು. ಆರೋಪಿಗಳಿಂದ 5.3 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 1.2 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಕಿರಣ್ ನಾಯ್ಕ ವಿರುದ್ಧ ವಿದ್ಯಾನಗರ ಠಾಣೆಯಲ್ಲಿ 5, ಬಡಾವಣೆಯ ಠಾಣೆಯಲ್ಲಿ 4, ಗಾಂಧಿನಗರ, ಕೆಟಿಜೆ ನಗರ ಹಾಗೂ ಬಸವನಗರ ಠಾಣೆಯಲ್ಲಿ ತಲಾ 1 ಕಳವು ಪ್ರಕರಣ ದಾಖಲಾಗಿವೆ. ಬಿ.ಆರ್.ಕೌಶಿಕ್ ಎಂಬುವರು ಅ.26ರಂದು ನಿಜಲಿಂಗಪ್ಪ ಬಡಾವಣೆಯ ಬಕ್ಕೇಶ್ವರ ಕಲ್ಯಾಣ ಮಂಟಪಕ್ಕೆ ಬಂದಿದ್ದರು. ಬ್ಯಾಗಿನಲ್ಲಿ 73 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದ್ದವು. ಈ ಸಂಬAಧ ಬಡಾವಣೆ ಠಾಣೆಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಕಲ್ಯಾಣ ಮಂಟಪಗಳಲ್ಲಿ ಕಳವು ಮಾಡುತ್ತಿದ್ದ ಆರೋಪಿಗಳ ಸುಳಿವು ಸಿಕ್ಕಿತ್ತು.

Read More