Author: davangerevijaya.com

ಶಿವಮೊಗ್ಗ : ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗೆ ಸಮಯದ ಪರಿಪಾಲನೆ, ನಿರಂತರ ಅಭ್ಯಾಸ, ಛಲ ಬಿಡದ ಪ್ರಯತ್ನ, ಓದುವ ಸಮಯದ ನಿಗಧಿ, ಕಲಿಕಾ ಕೊಠಡಿಯ ವಾತಾವರಣ, ಅಭ್ಯಾಸದ ವೇಳಾ ಪಟ್ಟಿಯ ಸಿದ್ಧತೆ & ಅದರ ಪಾಲನೆ ಎಲ್ಲವನ್ನು ಅವಲಂಬಿಸಿದ್ದು, ಇವುಗಳನ್ನು ಪಾಲನೆ ಮಾಡಿದರೆ ಯಶಸ್ಸು ಖಂಡಿತ ಎಂದು ಜೆ.ಸಿ.ಐ. ವಲಯ ತರಬೇತುದಾರೆ ಸೌಮ್ಯ ಹರಳಪ್ಪ ಹೇಳಿದರು. ನಗರದ ರೋಟರಿ ಪೂರ್ವ ಆಂಗ್ಲ ಶಾಲೆಯಲ್ಲಿ ಸೋಮವಾರ  ನಡೆದ ‘ಅಧ್ಯಯನ ಕೌಶಲ ಹಾಗೂ ಸಮಯ ನಿರ್ವಹಣೆ’ ಉಪನ್ಯಾಸ ಮಾಲಿಕೆಯಲ್ಲಿ ಮುಖ್ಯ ತರಬೇತುದಾರರಾಗಿ ಮಾತನಾಡಿದರು.  ಶರಾವತಿ ಜೆ.ಸಿ.ಐ.ನ ಅಧ್ಯಕ್ಷೆ ಸ್ವಪ್ನ ಮಾತನಾಡಿ, ವಿದ್ಯಾರ್ಥಿಗಳ ಪ್ರೌಢ ಶಿಕ್ಷಣವು ವ್ಯಕ್ತಿತ್ವ ನಿರ್ಮಾಣದ ಹಾಗೂ ಭವಿಷ್ಯದ ಜೀವನವನ್ನು ರೂಪಿಸುವ ಪ್ರಮುಖ ಘಟ್ಟವಾಗಿದ್ದು, ಈ ಹಂತದಲ್ಲಿ ವಿದ್ಯಾರ್ಥಿಗಳು ಸಮಯದ ಸರಿಯಾದ ನಿರ್ವಹಣೆ ಮಾಡುವುದರ ಜೊತೆಗೆ ಬೋಧಕರು ಹಾಗೂ ಪೋಷಕರ ಸಲಹೆ ಸೂಚನೆಯನ್ನು ಪಾಲಿಸಿದಾಗ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಬಹುದು ಎಂದರು. ಉಪನ್ಯಾಸ ಮಾಲಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೋಟರಿ ಶಿವಮೊಗ್ಗ ಪೂರ್ವ…

Read More

ಶಿವಮೊಗ್ಗ : ಪ್ರೀತಿಸಲು ಹುಡುಗಿ ಸಿಕ್ಕಿಲ್ಲ ಎಂದು ಜುಗುಪ್ಸೆಗೊಂಡು ಡಿಗ್ರಿ ಓದುತ್ತಿದ್ದ ಯುವಕ ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಇಂದಾವರ ಗ್ರಾಮದ ಜಯದೀಪ್ ( 24 ) ಮೃತ ಯುವಕ. ಈತ ಮೊದಲು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ತನ್ನ ಪ್ರೀತಿಯನ್ನು ಆ ಹುಡುಗಿಗೆ ಹೇಳಿದ್ದ. ಆದರೆ ಆ ಹುಡುಗಿ ಆತನ ಪ್ರೀತಿ ನಿರಾಕರಣೆ ಮಾಡಿದ್ದಳು. ಇದಾದ ಬಳಿಕ ತನಗಿಂತ ಚಿಕ್ಕವರಿಗೆ ಪ್ರೀತಿಸಲು ಹುಡುಗಿಯರು ಸಿಕ್ಕಿದ್ದಾರೆ. ಆದರೆ ನನಗೆ ಮಾತ್ರ ಹುಡುಗಿ ಸಿಕ್ಕುತ್ತಿಲ್ಲ ಎಂದು ಬೇಸರಗೊಂಡಿದ್ದ ಎಂಬ ಮಾಹಿತಿ ಇದೆ. ಹುಡುಗಿ ಸಿಕ್ಕಿಲ್ಲ ಎಂಬುದರ ಜೊತೆಗೆ ಆತ ಆನ್ಲೈನ್ ಟ್ರೇಡಿಂಗ್ ನಲ್ಲಿ ಸಿಲುಕಿಹಾಕಿಕೊಂಡಿದ್ದ. ಇದಕ್ಕಾಗಿ ತನ್ನ ಸ್ನೇಹಿತರ ಬಳಿ ಅಂದಾಜು 90 ಸಾವಿರ ಸಾಲ ಮಾಡಿದ್ದ. ಆದರೆ ಹಾಕಿದ ಹಣ ಬಾರದೇ ಇದ್ದಾಗ. ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ. ಬಳಿಕ ಯುವಕ ತುಂಗಾ ನದಿಗೆ ಹಾರಿ ತನ್ನ ಜೀವವನ್ನು ಕಳೆದುಕೊಂಡಿದ್ದಾನೆ. ಶನಿವಾರ ಬೆಳಗ್ಗೆ ವಾಟ್ಸಪ್…

Read More

ದಾವಣಗೆರೆ: ಕೋವಿಡ್ ಸಮಯದಲ್ಲಿ ಹಗರಣಗಳಾಗಿದೆ ಎಂದು ಹೇಳುವ ಕಾಂಗ್ರೆಸ್ ಆಗ ವಿರೋಧ ಪಕ್ಷವಾಗಿ ಏಕೆ ಸುಮ್ಮನಿತ್ತು ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಸಚಿವ ಬಿ.ಸಿ. ಪಾಟೀಲ್ ಪ್ರಶ್ನಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಬದಲಾವಣೆ ಆಗಿ ಒಂದು ವರ್ಷ ನಾಲ್ಕು ತಿಂಗಳಾದ ಮೇಲೆ ಈಗ ಬಿಜೆಪಿ ಹಗರಣದ ಬಗ್ಗೆ ಮಾತನಾಡುತ್ತಾರೆ. ಇಷ್ಟು ದಿನ ಏನ್ ಮಾಡ್ತಾ ಇದ್ದರು. ಹಗರಣದಲ್ಲಿ ಕಾಂಗ್ರೆಸ್ ನಾಯಕರಿಗೂ ಕೂಡ ಏನಾದರೂ ಪಾಲು ಇದ್ಯಾ ಎನ್ನುವ ಅನುಮಾನ ಕಾಡುತ್ತಿದೆ. ಆಗ ಸುಮ್ಮನೆ ಕೂತುಕೊಂಡು ಈಗ ಮಾತನಾಡುತ್ತಿರೀ ಎಂದರೆ ಹೇಗೆ? ಎಂದು ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಕೋವೀಡ್ ಹಗರಣದ ವರದಿ ಕೈ ಸೇರಿದೆ ಎಂದು ಹೇಳುತ್ತೀರಿ ಅದನ್ನು ಬಿಚ್ಚಿ ಇಡ್ತಿರೋ ಹೊರಗೆ ಇಡ್ತಿರೋ ಒಟ್ಟು ತನಿಖೆ ಮಾಡಿ. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಎಲ್ಲಾರೂ ಕಾನೂನಿನ ಅಧೀನರು. ಕಾನೂನಿನ ಮೂಲಕ ತನಿಖೆ ಮಾಡಿ ಕಾನೂನಿನ ಪ್ರಕಾರ ಶಿಕ್ಷೆ ಆಗಲಿ. ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಅವರಿವರ ಮೇಲೆ ಗೂಬೆ ಕೂರಿಸುವ ಕೆಲಸ…

Read More

ದಾವಣಗೆರೆ: ಅವಳಿ ಜಿಲ್ಲೆಗಳಾದ ದಾವಣಗೆರೆ-ಚಿತ್ರದುರ್ಗದಲ್ಲಿ ಸಿರಿಗೆರೆ ಮಠದ ಚರ್ಚೆಯೇ ಜೋರಾಗಿದ್ದು, ದಾವಣಗೆರೆಯಲ್ಲಿ ಸಿರಿಗೆರೆ ಶ್ರೀಗಳ ವಿರೋಧಿ ಬಣವಿದ್ದರೇ, ಚಿತ್ರದುರ್ಗದ ವ್ಯಾಪ್ತಿಯಲ್ಲಿ ಸಿರಿಗೆರೆ ಶ್ರೀಗಳ ಪರ ಭಕ್ತರು ನಿಂತಿದ್ದಾರೆ. ಅಂತೆಯೇ ಅಪೂರ್ವ ರೆಸಾರ್ಟ್ನಲ್ಲಿ ಸಿರಿಗೆರೆ ಶ್ರೀಗಳ ವಿರುದ್ಧ ಸಿರಿಗೆರೆ ಮಠದ ಭಕ್ತ ಅಣಬೇರು ರಾಜಣ್ಣ ನೇತೃತ್ವದಲ್ಲಿ ಎರಡನೇ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಅಣಬೇರು ರಾಜಣ್ಣ, ಸಿರಿಗೆರೆ ಮಠದ ಮುಂದಿನ ಪೀಠಾಧಿಪತಿ ಯಾರು ಎಂದು ಘೋಷಿಸಬೇಕು. ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಟ್ರಸ್ಟ್ ಡೀಡ್ ರದ್ಧಾಗಬೇಕು ಎಂದು ಒತ್ತಾಯಿಸಿದರು. ಸಿರಿಗೆರೆಯಲ್ಲಿ ಶ್ರೀಗಳು ಇತ್ತೀಚೆಗೆ ಭಕ್ತರೆಲ್ಲರನ್ನು ಸೇರಿಸಿ ಸಭೆ ನಡೆಸಿ ವಿರೋಧಿ ಬಣಕ್ಕೆ ಟಾಂಗ್ ನೀಡಿತ್ತು. ಅಂತೆಯೇ ಈಗ ಎಂದು ಸಾಧು ಸದ್ಧರ್ಮ ಸಮಾಜದ ಹಿರಿಯ ಮುಖಂಡರು ಸಭೆ ನಡೆಸಿದರು. ಈ ಸಭೆಯಲ್ಲಿ ಈ ಎರಡು ವಿಷಯಗಳೇ ಪ್ರಮುಖ ಚರ್ಚೆಯಾಗಿದ್ದವು. ತಮ್ಮ ಸ್ವ ಹಿತಾಸಕ್ತಿಗಾಗಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ 30 ವರ್ಷದ ಹಿಂದೆ ಟ್ರಸ್ಟ್ ಡೀಡ್ ಮಾಡಿದ್ದು, ತಮ್ಮ ಇಚ್ಛೇನುಸಾರ ನಡೆದುಕೊಳ್ಳುತ್ತಿದ್ದಾರೆ.…

Read More

ಶಿವಮೊಗ್ಗ: ಶಿವಮೊಗ್ಗದ ಬಿ.ಎಸ್.ವೈ.ಕುಟುಂಬದ ಭೂ ಹಗರಣಗಳನ್ನೂ ತನಿಖೆಗಳಿಗೆ ಒಳಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ, ಮಾಜಿ ಸಂಸದ ಆಯನೂರು ಮಂಜುನಾಥ್ ಆಗ್ರಹಿಸಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ವೈ.ವಿಜಯೇಂದ್ರ, ಬಿ.ವೈ.ರಾಘವೇಂದ್ರ ಮತ್ತು ಬಿಜೆಪಿಯ ಮುಖಂಡರು ಮೂಡಾ ಹಗರಣದ ಬಗ್ಗೆ ಮಾತನಾಡುತ್ತಾರೆ,ಪಾದಯಾತ್ರೆ ಮಾಡುತ್ತಾರೆ, ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎನ್ನುತ್ತಾರೆ. ಆದರೆ, ಇವರೇ ಭೂಗಳ್ಳರಾಗಿದ್ದಾರೆ, ಇವರಿಗೆ ರಾಜೀನಾಮೆ ಕೇಳುವ ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದರು. ತೀರ್ಥಹಳ್ಳಿ ರಸ್ತೆಗೆ ಹೋಗುವ ನ್ಯೂಮಂಡ್ಲಿ ಕೈಗಾರಿಕಾ ಹೊಸಹಾತು ಪ್ರದೇಶದಲ್ಲಿ ಯಾರ ಆಸ್ಪತ್ರೆ ಇದೆ. ಸಹ್ಯಾದ್ರಿ ನಾರಾಯಣ ಹೃದಯಾಲಯ ಯಾರ ಒಡೆತನದ್ದು, ಅಲ್ಲಿ 30 ಎಕರೆಗೂ ಹೆಚ್ಚು ಜಮೀನು ಇರುವುದು ಯಾರದ್ದು ಎಂದರು. 30 ಎಕರೆ ಜಮೀನು ಇದ್ದರೂ ಕೂಡ ಕೆಐಡಿಬಿಯವರು ಕೇವಲ 4 ಎಕರೆ ಜಾಗವನ್ನು ಹೇಗೆ ವಶಪಡಿಸಿಕೊಂಡರು, ಕೈಗಾರಿಕಾ ಅಭಿವೃದ್ಧಿಗೆ 4 ಎಕರೆ ಜಾಗ ಸಾಕೆ? ಹೀಗೆ ವಶಪಡಿಸಿಕೊಂಡ ಜಾಗ, ಏನಾಯಿತು, ಯಾರ ಬೇನಾಮಿ ಹೆಸರಿನಲ್ಲಿತ್ತು. ನಂತರ ಯಾರಿಗೆ ವರ್ಗಾವಣೆಯಾಗಿದೆ ಎಂಬುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ…

Read More

ದಾವಣಗೆರೆ : ದಾವಣಗೆರೆಯಲ್ಲಿ ವಿಧಾನಸಭೆ ಹಾಗೂ ಲೋಕ ಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲುಂಡಿದ್ದು, ಪಕ್ಷ ಸಂಘಟನೆಗೆ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಪುತ್ರ ಅನಿತ್ ಮುಂದಾಗಿದ್ದು, ಎಲ್ಲರನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.ಅಂತೆಯೇ ದಾವಣಗೆರೆ ಲೋಕಸಭಾ ಕ್ಷೇತ್ರದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಸದಸ್ಯತಾ ಅಭಿಯಾನದ ತಾಲ್ಲೂಕು ಕಾರ್ಯಗಾರದಲ್ಲಿ ಬಿಜೆಪಿ ಯುವ ಮುಖಂಡ ಜಿ.ಎಸ್. ಅನಿತ್ ಕುಮಾರ್ ಭಾಗವಹಿಸಿ ಮಾತನಾಡಿ, ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಲು ಕಾರ್ಯಕರ್ತರಲ್ಲಿ ಮನವಿ ಮಾಡಿದರು.  ಈ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಗಿರೀಶ್ ನಾಯ್ಕ, ಚನ್ನಗಿರಿಯ ಬಿಜೆಪಿ ಮುಖoಡ ಹೆಚ್ ಎಸ್ ಶಿವಕುಮಾರ್ , ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಂಜುಳ ಟಿ ವಿ ರಾಜು ಮತ್ತು ಟಿ ವಿ ರಾಜು ಪಟೇಲ್ ರವರು ಮತ್ತು ಬಿಜೆಪಿ ಯ ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ನವೀನ್  ಮತ್ತು ಅನೇಕ ಹಿರಿಯರು ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಬೆಂಗಳೂರು : ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಎಸ್.ಟಿ ಮೋರ್ಚಾ ವತಿಯಿಂದ ಪಕ್ಷದ ಸದಸ್ಯತಾ ಅಭಿಯಾನದ ಕಾರ್ಯಾಗಾರದಲ್ಲಿ ದಾವಣಗೆರೆ ಬಿಜೆಪಿ ನಾಯಕ ಶ್ರೀನಿವಾಸ ದಾಸಕರಿಯಪ್ಪ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿರೋಧ ಪಕ್ಷ ನಾಯಕರಾದ ಶ್ರೀ ಆರ್ ಅಶೋಕ್, ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಡಾ.ಸಿ.ಎನ್. ಅಶ್ವಥ್ ನಾರಾಯಣ್, ಎಸ್.ಟಿ.ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಬಂಗಾರು ಹನುಮಂತು ಸೇರಿದಂತೆ ರಾಜ್ಯ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Read More

ಶಿವಮೊಗ್ಗ : ನಗರದ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ವತಿಯಿಂದ ‘ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ದಿನ’ ವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಾಣಿಜ್ಯ ಹಾಗೂ ಕೈಗಾರಿಕೆಗಳ ಇಲಾಖೆಯ ಉಪನಿರ್ದೇಶಕ  ಸುರೇಶ್  ಮಾತನಾಡಿ, ಸಣ್ಣ ಕೈಗಾರಿಕೆ ಹಾಗೂ ಉದ್ಯಮಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರವು 2008 ರಲ್ಲಿ ಜಾರಿಗೊಳಿಸಿದ ಯೋಜನೆಯಾದ PMEGP (Prime Minister’s Employment Generation Programme) ಕುರಿತಾದ ವಿಸ್ತೃತ ಮಾಹಿತಿ ನೀಡಿದರು. ಈ ಯೋಜನೆಯ ಫಲಾನುಭವಿಗಳಾಗಲು ಅನುಸರಿಸಬೇಕಾದ ನಿಯಮಗಳು, ಕಾರ್ಯ ಯೋಜನೆ, ಬ್ಯಾಂಕ್ ಗಳ ಪಾತ್ರ, ಇಲಾಖೆಯ ಜವಾಬ್ದಾರಿಗಳ ಕುರಿತಾಗಿ ಸವಿವರವಾದ ಮಾಹಿತಿಯನ್ನು ಸುರೇಶ್  ಹಂಚಿಕೊಂಡರು. ಈ ಯೋಜನೆಯು ಸಾಲಾಧಾರಿತ ಸಬ್ಸಿಡಿ ಯೋಜನೆಯಾಗಿದ್ದು ಸಮಾಜದ ಎಲ್ಲಾ ವರ್ಗದ ಜನರು ಇದರ ಸದುಪಯೋಗ ಪಡೆಯಬಹುದೆಂದು ತಿಳಿಸಿದರು. ಈ ಯೋಜನೆ ಕುರಿತಾದ ಯಾವುದೇ ಮಾಹಿತಿ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇರುವವರು ನಗರದ ಎ ಎ ವೃತ್ತ ಸಮೀಪದ ಸ್ಮಾರ್ಟ್ ಸಿಟಿ ಕಚೇರಿಯ ಮೇಲ್ಭಾಗದಲ್ಲಿ ಇರುವ ಇಲಾಖೆಯ ಕಚೇರಿಗೆ…

Read More

ದಾವಣಗೆರೆ : ರೈತರ ಬಳಿ ಹಣ ವಸೂಲಿ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಆಜಾದ್ ನಗರ ಠಾಣೆಯ ಇಬ್ಬರು ಪೊಲೀಸ್ ಪೇದೆಗಳನ್ನು ಲೇಡಿಸಿಂಗಂ ಖ್ಯಾತಿಯ ಉಮಾಪ್ರಶಾಂತ್ ಅಮಾನತುಗೊಳಿಸಿದ್ದಾರೆ. ಆಜಾದ್ ನಗರ ಠಾಣೆಯ ಸಿಬ್ಬಂದಿಗಳಾದ ಅಂಕಳಪ್ಪ ಮತ್ತು ಮುಬಾರಕ್  ಅಮಾನತುಗೊಂಡವರು. ಇವರಿಬ್ಬರ ಮೇಲೆ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಜಾದ್ ನಗರ ಪೊಲೀಸ್ ನಿರೀಕ್ಷಕರು ನೀಡಿದ ವರದಿ ಮೇರೆಗೆ ನಗರ ಉಪ ವಿಭಾಗ ಡಿವೈಎಸ್ಪಿ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಶಿಫಾರಸ್ಸು ಮಾಡಿದ ಮೇರೆಗೆ  ಅಮಾನತುಗೊಂಡಿದ್ದಾರೆ.  ಸದರಿ ಮೇಲ್ಕಂಡ ಸಿಬ್ಬಂದಿಗಳ ವಿರುದ್ಧ ಮುಂದಿನ ಇಲಾಖಾ ಶಿಸ್ತು ಕ್ರಮವನ್ನು ಬಾಕಿ ಇರಿಸಿಕೊಂಡು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ  ಅಮಾನತ್ತಿನಲ್ಲಿ ಇರಿಸಲು ಎಸ್ಪಿ ಉಮಾಪ್ರಶಾಂತ್ ಆದೇಶಿಸಿರುತ್ತಾರೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ ಏನಿದು ಘಟನೆ ಆಜಾದ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಬೇತೂರು ರಸ್ತೆಯಲ್ಲಿ ಚೆಕ್ ಪೋಸ್ಟ್ ಗೆ ಇಬ್ಬರು ಪೊಲೀಸ್ ಪೇದೆಗಳನ್ನು ಕರ್ತವ್ಯಕ್ಕೆ  ನಿಯೋಜಿಸಲಾಗಿತ್ತು. ಇವರು ಬೇತೂರು ಕಡೆಯಿಂದ ದಾವಣಗೆರೆ ಮಾರ್ಗವಾಗಿ ಬರುವ …

Read More

ದಾವಣಗೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆಯಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ದ್ವಿತೀಯ ವರ್ಷದ ಎಂಕಾಂ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭವು ವಿಜೃಂಭಣೆಯಿಂದ ಜರುಗಿತು. ಇತಿಹಾಸ ವಿಭಾಗದ ಪ್ರಾಧ್ಯಾಪಕ ಹಾಗೂ ಸಂಜೆ ಕಾಲೇಜಿನ ಪ್ರಾಂಶುಪಾಲ ಪ್ರೋ.ಟಿ.ಮಂಜಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದ ಮಾತುಗಳನ್ನಾಡಿದರು.  ಅಲ್ಲದೇ ವಿದ್ಯಾರ್ಥಿಗಳಿಗೆ ಭವಿಷ್ಯದ ಕುರಿತು ಪ್ರಾಮುಖ್ಯ ಸಲಹೆಗಳನ್ನು ನೀಡಿದರು ಮತ್ತು ವಿದ್ಯಾಭ್ಯಾಸದ ಮಹತ್ವವನ್ನು ಉತ್ತೇಜಿಸಿದರು. ಪದವಿಯಲ್ಲಿ ಕಲಿತ ಶಿಕ್ಷಣವನ್ನು ಸಾರ್ವಜನಿಕವಾಗಿ ಬಳಸಿಕೊಳ್ಳಲು ಸಲಹೆ ನೀಡಿದರು. ವಿಭಾಗದ ಅಧ್ಯಾಪಕ ಡಾ.ವೆಂಕಟೇಶ್ ಬಾಬು ಎಸ್. ಅವರು ಮಾತನಾಡುತ್ತಾ,  ಪದವಿ ಶಿಕ್ಷಣದ ಮಹತ್ವ ಮತ್ತು ವಿದ್ಯಾರ್ಥಿಗಳ ಮುಂದಿನ ಜೀವನದ ಕುರಿತು ಸಲಹೆಗಳನ್ನು ನೀಡಿದರು. ಅಲ್ಲದೆ , ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಸಮಾಜದಲ್ಲಿ ಹೇಗೆ ಪ್ರಯೋಗಿಸಬಹುದು ಎಂಬುದರ ಕುರಿತು ಮಾಹಿತಿ ನೀಡಿದರು ಹಾಗೂ ತಾಂತ್ರಿಕತೆ ಮತ್ತು ನೈತಿಕತೆಯ ನಡುವಿನ ಸಮತೋಲನವನ್ನು ಸಾಧಿಸುವುದು ಇಂದಿನ ಕಾಲದ ಅಗತ್ಯವಾಯಿತು ಎಂದು ಸೂಚಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೋನಾಗರಾಜ್ ಆರ್ ಸಿ ರವರು ಪದವಿ ಪ್ರದಾನ…

Read More