- ಪ್ರಮುಖ ಸುದ್ದಿ
- ದಾವಣಗೆರೆ ವಿಶೇಷ
- ಕ್ರೈಂ ಸುದ್ದಿ
- ರಾಜಕೀಯ ಸುದ್ದಿ
- ರೈತಮಿತ್ರ
- ಅಡಕೆ ಧಾರಣೆ
- ಚಿನ್ನ, ಬೆಳ್ಳಿ ಧಾರಣೆ
- Blog
Subscribe to Updates
Get the latest creative news from FooBar about art, design and business.
Author: davangerevijaya.com
ದಾವಣಗೆರೆ : ವಾಹನಗಳ ಕಳ್ಳತನ, ಅಕ್ರಮ ಚಟುವಟಿಕೆಗಳಿಗೆ ವಾಹನಗಳ ಬಳಕೆ, ಡ್ಯೂಪ್ಲಿಕೇಟ್ ಆರ್ ಸಿಗೆ ಕಡಿವಾಣ ಹಾಕಲು ಸರಕಾರ ಮುಂದಾಗಿದ್ದು, ಚಿಪ್ ಇರುವ ಆರ್ ಸಿ, ಡಿಎಲ್ ಕಾರ್ಡ್ ಗಳನ್ನು ನೀಡಲು ನಿರ್ಧಾರ ಮಾಡಿದೆ. 2024 ರ ಫೆಬ್ರವರಿ ನಂತರ ಚಿಪ್ ಇರುವ ಡಿಎಲ್, ಆರ್ ಸಿ ಕಾರ್ಡ್ ಗ್ರಾಹಕರ ಕೈಗೆ ಸೇರಬಹುದು ಎಂಬುದು ಸಾರಿಗೆ ಇಲಾಖೆ ಅಧಿಕಾರಿಗಳ ಮಾಹಿತಿ. ಚಿಪ್ ಇರುವ ಕಾರ್ಡ್ ಗಳಿಂದ ಪೊಲೀಸರಿಗೆ, ಆರ್ ಟಿಒ ಅಧಿಕಾರಿಗಳು, ಸಾರ್ವಜನಿಕರಿಗೂ ಅನುಕೂಲವಾಗಲಿದ್ದು, ಕಳ್ಳತನ ಪ್ರಕರಣಗಳು ಕಡಿಮೆಯಾಗಲಿದೆ. ಮೊದಲಿದ್ದಡಿಎಲ್, ಆರ್‌ಸಿ ಕಾರ್ಡುಗಳಿಗೆ ಹೋಲಿಸಿದರೆ, ಈ ಕಾರ್ಡುಗಳಲ್ಲಿ ಹೆಚ್ಚುವರಿ ಮಾಹಿತಿ ಇರಲಿದೆ. ಚಿಪ್ ಇರುವುದರಿಂದ ಅಧಿಕಾರಿಗಳಿಗೆ, ಟ್ರಾಫಿಕ್ ಪೊಲೀಸರಿಗೆ ಕ್ಷಣಮಾತ್ರದಲ್ಲಿ ಲಭ್ಯವಾಗಲಿದೆ. ಇದರಿಂದ ಟ್ರಾಫಿಕ್ ಪೊಲೀಸರು ಮತ್ತು ಅಧಿಕಾರಿಗಳಿಗೆ ವಾಹನ ಮಾಲೀಕನ ಹಾಗೂ ಆತನ ಡಿಎಲ್ ಬಗ್ಗೆ ಮಾಹಿತಿ ಶೀಘ್ರದಲ್ಲಿ ಸಿಗಲಿದೆ. ಹೇಗಿರಬಹುದು ಹೊಸ ಕಾರ್ಡ್ ಈ ಹೊಸ ಕಾರ್ಡ್ ನಲ್ಲಿ ರಿಜಿಸ್ಟ್ರೇಷನ್ ನಂಬರ್ , ದಿನಾಂಕ,ವ್ಯಾಲಿಡಿಟಿ, ಎಂಜಿನ್ ನಂಬರ್, ಓನರ್…
ಚನ್ನಗಿರಿ: ರಿವಾರ್ಡ್ ಜಲಾನಯನ ಅಭಿವೃದ್ದಿ ಯೋಜನೆಯು ಇಡೀ ಭಾರತದಲ್ಲಿಯೇ ಮೊದಲಬಾರಿಗೆ ಅದು ಕರ್ನಾಟಕ ರಾಜ್ಯದಲ್ಲಿ ಮೊದಲಬಾರಿಗೆ ಅನುಷ್ಠಾನ ಗೊಳ್ಳುತ್ತಿದೆ. ಈ ಯೋಜನೆಗೆ ರಾಜ್ಯದ 11 ಜಿಲ್ಲೆಗಳು ಆಯ್ಕೆಯಾಗಿದ್ದು ಅದರಲ್ಲಿಯೂ ದಾವಣಗೆರೆ ಜಿಲ್ಲೆಯ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಜಮ್ಮಾಪುರ ಗ್ರಾಮಕ್ಕೆ ಈ ಯೋಜನೆ ಒದಗಿ ಬಂದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಬಸವರಾಜು ಶಿವಗಂಗಾ ಹೇಳಿದರು. ತಾಲೂಕಿನ ಮರವಂಜಿ ಗ್ರಾಮದಲ್ಲಿ ಕೃಷಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 6 ಕೋಟಿ 13 ಲಕ್ಷ ರೂ. ವೆಚ್ಚದ ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ ಯೋಜನೆ ಮತ್ತು ಜನತಾದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ಯೋಜನೆಯಲ್ಲಿ ಸುಮಾರು 4966 ಹೆಕ್ಟೇರ್ ಅಂದರೆ 12365 ಎಕೆರೆ ಪ್ರದೇಶವು ಆಯ್ಕೆಯಾಗಿದ್ದು 4756 ಜನ ರೈತರಿಗೆ ಅನುಕೂಲವಾಗಲಿದೆ ಎಂದರು. ಯೋಜನೆಗೆ ಸರಕಾರದಿಂದ 120 ಕೋಟಿ ಚನ್ನಗಿರಿ ಸಹಾಯಕ ಕೃಷಿ ನಿರ್ದೇಶಕ ಅರುಣ್‌ಕುಮಾರ್ ಮಾತನಾಡಿ, ಈ ಯೋಜನೆಗೆ ರಾಜ್ಯ ಸರಕಾರ 120 ಕೋಟಿಗಳು ಇದರೊಂದಿಗೆ ವಿಶ್ವ ಬ್ಯಾಂಕ್ ಕಡೆಯಿಂದ 480 ಕೋಟಿಗಳ…
ಹೊಸದುರ್ಗ : ಕಾರಿನಲ್ಲಿ ಇಟ್ಟಿದ್ದ 10 ಲಕ್ಷ ರೂಪಾಯಿಯನ್ನು ಕೆಲವೇ ನಿಮಿಷಗಳಲ್ಲಿ ಕದ್ದಿರುವ ಘಟನೆ ಹೊಸದುರ್ಗ ಪಟ್ಟಣದ ಬರೋಡ ಬ್ಯಾಂಕ್ ಸಮೀಪ ನಡೆದಿದೆ. ತಾಲೂಕಿನ ಲಕ್ಕಿಹಳ್ಳಿ ಗ್ರಾಮದ ಮುದ್ದಪ್ಪ ಹಣ ಕಳೆದುಕೊಂಡವರು. ಮುದ್ದಪ್ಪ ಅವರ ಮಾವ ರುದ್ರಪ್ಪ ಅವರಿಗೆ ಸೇರಿದ ದೊಡ್ಡಕಿಟ್ಟದಹಳ್ಳಿಯ ಜಮೀನು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಾಗಿ ಸರಕಾರ ಭೂಸ್ವಾಧೀನ ನಪಡಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅಪ್ಪರ್ ಭದ್ರಾ ಇಲಾಖೆಯಿಂದ ಜಮೀನಿಗೆ 19 ಲಕ್ಷದ 97 ಸಾವಿರ ರೂ. ಅವಾರ್ಡ್ ನೀಡಿತ್ತು. ಈ ಹಣ ರುದ್ರಪ್ಪ ಅವರ ಹೊಸದುರ್ಗದ ಕರ್ನಾಟಕ ಬ್ಯಾಂಕ್‍ನ ಖಾತೆಗೆ ಹಣ ಪಾವತಿಯಾಗಿತ್ತು.ಈ ಹಣವನ್ನು ಡ್ರಾ ಮಾಡಲು ಹೋದಾಗ ಕಳ್ಳತನದ ಘಟನೆ ನಡೆದಿದೆ. ಕರ್ನಾಟಕ ಬ್ಯಾಂಕ್ ನಲ್ಲಿ ಹಣ ಡ್ರಾ ಬೆಳಗ್ಗೆ 12 ಗಂಟೆ ಸುಮಾರಿಗೆ ಮುದ್ದಪ್ಪ ಹಾಗೂ ಮಾವ ರುದ್ರಪ್ಪ ಅವರು ಪಟ್ಟಣದ ಕರ್ನಾಟಕ ಬ್ಯಾಂಕ್‍ನಲ್ಲಿ 10 ಲಕ್ಷ ರೂ ಹಣ ಡ್ರಾ ಮಾಡಿದ್ದರು. ನಂತರ ಮತ್ತಷ್ಟು ಹಣ ಡ್ರಾ ಮಾಡುವ ಸಲುವಾಗಿ ಹುಳಿಯಾರು ರಸ್ತೆಯ ಬರೋಡ…
ದಾವಣಗೆರೆ: ದಾವಣಗೆರೆಯಲ್ಲಿ ನಾನು ಕೂಡ ಸಿದ್ದರಾಮೋತ್ಸವ ಮಾಡುತ್ತೇನೆ ಎಂದು ದಾವಣಗೆರೆಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಜಿ.ಬಿ ವಿನಯಕುಮಾರ್ ಹೇಳಿದ್ದಾರೆ. ನಮ್ಮ ದಾವಣಗೆರೆವಿಜಯ.ಕಾಂ ನೊಂದಿಗೆ ಕೆಲವೊತ್ತು ಬಿಡುವು ಮಾಡಿಕೊಂಡು ಮಾತನಾಡಿದ ವಿನಯ್ ಕುಮಾರ್, ಬೆಣ್ಣೆನಗರಿಯಲ್ಲಿ ನಡೆದ ಸಿದ್ದರಾಮೋತ್ಸವ ಇತಿಹಾಸ ಸೃಷ್ಟಿಸಿದೆ. ಆದ್ದರಿಂದ ನಾನು ಕೂಡ ದಾವಣಗೆರೆಯಲ್ಲಿ ಮತ್ತೊಮ್ಮೆ ನಾನು ಸಿದ್ದರಾಮೋತ್ಸವ ಮಾಡುತ್ತೇನೆ. ಇಲ್ಲೂ ಕೂಡ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು ಸಾಕಷ್ಟೀದ್ದು, ಅವರಿಗೋಸ್ಕರ ನಾನೂ ಕೂಡ ಸಿದ್ದರಾಮೋತ್ಸವ ಮಾಡಲು ರೆಡಿ ಎಂದರು. ನನ್ನದು ಪವರ್ ಪಾಲಿಟಿಕ್ಸ್ ಅಲ್ಲ ಅಭಿವೃದ್ಧಿ ರಾಜಕಾರಣ ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ನನ್ನ ಎದುರು ನರೇಂದ್ರ ಮೋದಿಯವರು ಬಂದು ಸ್ಪರ್ಧಿಸಿದ್ದರೂ ನಾನು ಸೋಲಿಸುತ್ತೇನೆ ಆ ವಿಶ್ವಾಸ ನನಗಿದೆ. ನನ್ನದು ಪವರ್ ಪಾಲಿಟಿಕ್ಸ್ ಅಲ್ಲ, ಅಭಿವೃದ್ಧಿ ರಾಜಕಾರಣ. ನನಗೆ ಯಾರೂ ಸಹ ಕಾಂಪಿಟೇಟರ್ಸ್ ಗಳು ಇಲ್ಲ ಎಂಬುದು ನನ್ನ ಅಭಿಪ್ರಾಯ. ನನಗೆ ನಾನೇ ಕಾಂಪಿಟೇಟರ್ ಪ್ರಸ್ತುತ ರಾಜಕಾರಣ ಗಮನಿಸಿದರೆ ದಾವಣಗೆರೆ ಕ್ಷೇತ್ರದಲ್ಲಿ ವಿನಯ್ ಕುಮಾರ್ ಎಂಬ ಹೆಸರೇ ಕೇಳಿಬರುತ್ತಿದೆ.…
ವಾಣಿಜ್ಯ ನಗರಿ ದಾವಣಗೆರೆಯಲ್ಲಿ ನಡೆಯುವ ಪ್ರತಿದಿನದ ಕಾರ್ಯಕ್ರಮಗಳ ವಿವರ. ದಾವಣಗೆರೆ ನಗರ ಹಾಗೂ ಹರಿಹರ, ಹೊನ್ನಾಳಿ, ನ್ಯಾಮತಿ, ಜಗಳೂರು, ಚನ್ನಗಿರಿ ತಾಲೂಕುಗಳಲ್ಲಿ ಪ್ರತಿನಿತ್ಯ ನಡೆಯುವ ಪ್ರತಿ ಕಾರ್ಯಕ್ರಮದ ಮಾಹಿತಿಯನ್ನು ದಾವಣಗೆರೆವಿಜಯ.ಕಾಂ ನೀಡಲಿದೆ. ನಿಮ್ಮ ಊರುಗಳಲ್ಲಿ ನಡೆಯುವ ಕಾರ್ಯಕ್ರಮದ ಮಾಹಿತಿಯನ್ನು ಮೂರು ದಿನಗಳ ಮುಂಚಿತವಾಗಿ ನೀಡಿದರೆ ದಾವಣಗೆರೆವಿಜಯ.ಕಾಂ ಉಚಿತವಾಗಿ ಪ್ರಕಟಿಸಲಿದೆ. ನಿಮ್ಮೂರಿನಲ್ಲಿ ನಡೆಯುವ ಕಾರ್ಯಕ್ರಮದ ಮಾಹಿತಿಯನ್ನು ನಮ್ಮ 9113614148 ಈ ನಂಬರ್‌ಗೆ ವಾಟ್ಸ್ಆಪ್ ಮಾಡಿ.
ದಾವಣಗೆರೆ : ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು ಹಾಗೂ ಶ್ರೀ ಎಸ್.ಎ. ರವೀಂದ್ರನಾಥ್ ಅಭಿಮಾನಿಗಳ ಬಳಗದ ವತಿಯಿಂದ ಇದೇ ನ.26 ರಂದು ಬೆಳಗ್ಗೆ 11 ಕ್ಕೆ ಶಿರಮಗೊಂಡನಹಳ್ಳಿಯಲ್ಲಿರುವ ಶ್ರೀಮತಿ ಸುಧಾ ವೀರೇಂದ್ರ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಎಸ್ ಎ ರವೀಂದ್ರನಾಥ್ ಜನ್ಮದಿನದ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ಕೆ.ಎಂ ಸುರೇಶ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.26 ರಸಂಜೆ 5.45 ಕ್ಕೆ ನಗರದ ಹದಡಿ ರಸ್ತೆಯಲ್ಲಿರುವ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್‌ರವರ ಜನ್ಮದಿನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ದೇಶಪ್ರೇಮವನ್ನು ಪ್ರಚುರಪಡಿಸುವ ‘ವೀರಭಾರತಿ’ ನೃತ್ಯರೂಪಕ ಪ್ರದರ್ಶನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಮಾರಂಭದ ಉದ್ಘಾಟನೆಯನ್ನು ಸಂಸದರಾದ ಡಾ. ಜಿ.ಎಂ. ಸಿದ್ದೇಶ್ವರ ನೆರವೇರಿಸಲಿದ್ದಾರೆ.ಇದೇ ವೇಳೆ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ. ಡಾ.ಮಲ್ಲಿಕಾರ್ಜುನ ಬಾಳೆಕಾಯಿ ಅವರಿಂದ ಉಪನ್ಯಾಸ ಸಮಾರಂಭದಲ್ಲಿ ಭಾರತೀಯ ಪರಂಪರೆ ಮತ್ತು ಯುವಜನಾಂಗ ವಿಷಯ ಕುರಿತು ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತ ಹಾಗೂ ವೈದ್ಯರಾದ ಡಾ.ಮಲ್ಲಿಕಾರ್ಜುನ ಬಾಳೆಕಾಯಿ…
ನಂದೀಶ್ ಭದ್ರಾವತಿ ದಾವಣಗೆರೆ ಎಲ್ಲೆಂದರಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಹೊಸ ನಿಯಮವೊಂದನ್ನು ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೆ ತಂದಿದೆ. ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ಅದರಲ್ಲೂ ಶಾಲೆಯ ಗೇಟ್ ಬಳಿಯೇ ಗೂಡಂಗಡಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿತ್ತು. ಇದರಿಂದ ಯುವಸಮೂಹ ತಂಬಾಕು ಉತ್ಪನ್ನಗಳನ್ನು ಹೆಚ್ಚಾಗಿ ಖರೀದಿಸಿ ಧೂಮಪಾನ ವ್ಯಸನಿಗಳಾಗಿ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದರು. ಆದ್ದರಿಂದ ಇದನ್ನು ತಡೆಗಟ್ಟಲು, ಧೂಮಾಪಾನ ಸೇವನೆ ಮಾಡದಂತೆ ಹಾಗೂ ಯುವಕರು ತಂಬಾಕಿನ ದಾಸರಾಗುವುದನ್ನು ತಡೆಯಲು ಸರಕಾರ ಮುಂದಾಯಿತು. ಸಿಗರೇಟ್ ಮಾರಾಟಕ್ಕೆ ಲೈಸೇನ್ಸ್ ಕಡ್ಡಾಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್ ಹೇಳುವಂತೆ, ಸರ್ಕಾರದ ಆದೇಶದಂತೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ತಂಬಾಕು ಪರವಾನಗಿ ಪಡೆಯಲು ವ್ಯಾಪಾರಸ್ಥರಿಗೆ ಷರತ್ತು ಹಾಗೂ ನಿಬಂಧನೆಗಳನ್ನು ವಿಧಿಸಲಾಗಿದೆ. ಅಲ್ಲದೇ ಸ್ವಂತ ಅಂಗಡಿಗಳನ್ನುಟ್ಟುಕೊಂಡು ಸಿಗರೇಟ್ ವ್ಯಾಪಾರ ಮಾಡುವರು ಪಾಲಿಕೆಯಲ್ಲಿನ ಆರೋಗ್ಯ ಇಲಾಖೆಯಿಂದ ಲೈಸೇನ್ಸ್ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದುಮಾಹಿತಿ ನೀಡಿದ್ದಾರೆ. ತಂಬಾಕು ಅಂಗಡಿಗಳಿಗೆ ಫಲಕ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ…
ದಾವಣಗೆರೆ ; ಹರಪನಹಳ್ಳಿ ತರಳಬಾಳು ಕಲ್ಯಾಣ ಮಂಟಪದಲ್ಲಿ ಜಿ ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ಭೀಮಸಮುದ್ರ ಮತ್ತು ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಹಿಮೋಫೀಲಿಯ ಸೊಸೈಟಿ , ಲೈಫ್ ಲೈನ್ ಬ್ಲಡ್ ಬ್ಯಾಂಕ್, ಜಿಎಂ ಹಾಸ್ಪಿಟಲ್ ಬೆಂಗಳೂರು ಇವರುಗಳ ಸಹಯೋಗದಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ನಡೆಯಿತು. ಸಂಸದ, ಮಾಜಿ ಕೇಂದ್ರ ರಾಜ್ಯ ಸಚಿವ ಜಿಎಂ ಸಿದ್ದೇಶ್ವರ ಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ಜಿ ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ವತಿಯಿಂದ ಬಡವರು ಮತ್ತು ನಿರ್ಗತಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ, ಶಿಕ್ಷಣ ಮತ್ತು ಉದ್ಯೋಗ ಒದಗಿಸುತ್ತಾ ಬಂದಿದೆ. ಇದಲ್ಲದೆ ಮಹಿಳೆಯರಿಗೆ ಸ್ವಂತ ಉದ್ದಿಮೆ ನಡೆಸಲು ಬೇಕಾದ ಸಂಪನ್ಮೂಲ, ಯುವ ಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ತರಬೇತಿ ಮತ್ತು ಮಾರ್ಗದರ್ಶನನ್ನು ನೀಡುತ್ತಾ ಬಂದಿದ್ದು, ಇಂದು ಈ ಚಾರಿಟಿ ಫೌಂಡೇಶನ್ ಬೃಹದಾಕಾರದಲ್ಲಿ ಬೆಳೆದು ನಿಂತಿದೆ ಎಂದರು. ಗುಣಮಟ್ಟದ ಆರೋಗ್ಯ ಎಲ್ಲರ…
ದಾವಣಗೆರೆ: ಜನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 79 ಕ್ಕೂಅಧಿಕ ಜನಪ್ರಿಯ ಕಾರ್ಯಕ್ರಮಗಳನ್ನು ಜನರಿಗೆ ಪರಿಣಾಮಕಾರಿ ತಲುಪಿಸುವ ನಿಟ್ಟಿನಲ್ಲಿ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆ ಮಹತ್ವದ ಹೆಜ್ಜೆ ಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕಿ ಮತ್ತು ವಿಕಸಿತ ಭಾರತ್ ಸಂಕಲ್ಪ ಯಾತ್ರಾ ದಾವಣಗೆರೆ ಜಿಲ್ಲಾ ಪ್ರಬಾರಿ ರೋಲಿ ಖೇರೆ ಹೇಳಿದರು. ದಾವಣಗೆರೆಯಲ್ಲಿಂದು ನಡೆದ ಯಾತ್ರೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲಿ ಇದೇ 24 ರಿಂದ 2024 ರ ಜನವರಿ 12 ರ ವರೆಗೆ ಯಾತ್ರೆ ನಡೆಯಲಿದೆ ಎಂದರು. ಕೇಂದ್ರ ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪಿ ಅವರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ಬಂದಿರುವುದನ್ನು ತಿಳಿಸುವುದರೊಂದಿಗೆ, ಕೇಂದ್ರ ಸರ್ಕಾರದ ಯೋಜನೆಗಳಿಂದ ವಂಚಿತರಾಗಿರುವವರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಸಮರ್ಪಕವಾಗಿ ಕೈಗೊಳ್ಳಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು. ವಿಕಸಿತ ಭಾರತ ಸಂಕಲ್ಪ ಯಾತ್ರೆ ದಾವಣಗೆರೆ ನಗರದಲ್ಲಿ 17 ಕಡೆ , 194 ಗ್ರಾಮ ಪಂಚಾಯತ್ ಸೇರಿದಂತೆ…
ದಾವಣಗೆರೆ : ನಗರದ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ನ.27 ಕ್ಕೆ ಸಚಿವರು, ಶಾಸಕರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ವೀರೇಶ ಎಸ್ ಒಡೇನಪುರ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಪ್ರದಾನ ಮತ್ತು ವಿಚಾರ ಸಂಕಿರಣ, ರಾಜ್ಯೋತ್ಸವ, 2022-2023 ನೇ ಸಾಲಿನ ವಾರ್ಷಿಕ ಮಹಾಸಭೆ, ಗಂಗಾವತಿ ಪ್ರಾಣೇಶ್ ತಂಡದವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದರು. ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟನೆ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ, ರಾಜ್ಯಾಧ್ಯಕ್ಷ ಷಡಕ್ಷರಿಯಿಂದ ಪ್ರತಿಭಾ ಪುರಸ್ಕಾರ ಪ್ರದಾನ ನಡೆಯಲಿದೆ. ಶಾಸಕರಾದ ಡಿ.ಜಿ.ಶಾಂತನಗೌಡ, ಬಿ.ಪಿ.ಹರೀಶ್, ಬಿ.ದೇವೇಂದ್ರಪ್ಪ, ಕೆ.ಎಸ್.ಬಸವಂತಪ್ಪ, ಬಸವರಾಜು ವಿ ಶಿವಗಂಗಾ ಆಗಮಿಸುವರು. ಡಿಸಿ ಡಾ.ವೆಂಕಟೇಶ್, ಸಿಇಒ ಡಾ.ಸುರೇಶ್ ಬಿ. ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್ ಆಗಮಿಸುವರು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಗುರುಮೂರ್ತಿ, ಜಿಲ್ಲಾ…