ಚನ್ನಗಿರಿ: ರಿವಾರ್ಡ್ ಜಲಾನಯನ ಅಭಿವೃದ್ದಿ ಯೋಜನೆಯು ಇಡೀ ಭಾರತದಲ್ಲಿಯೇ ಮೊದಲಬಾರಿಗೆ ಅದು ಕರ್ನಾಟಕ ರಾಜ್ಯದಲ್ಲಿ ಮೊದಲಬಾರಿಗೆ ಅನುಷ್ಠಾನ ಗೊಳ್ಳುತ್ತಿದೆ. ಈ ಯೋಜನೆಗೆ ರಾಜ್ಯದ 11 ಜಿಲ್ಲೆಗಳು ಆಯ್ಕೆಯಾಗಿದ್ದು ಅದರಲ್ಲಿಯೂ ದಾವಣಗೆರೆ ಜಿಲ್ಲೆಯ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಜಮ್ಮಾಪುರ ಗ್ರಾಮಕ್ಕೆ ಈ ಯೋಜನೆ ಒದಗಿ ಬಂದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಬಸವರಾಜು ಶಿವಗಂಗಾ ಹೇಳಿದರು.
ತಾಲೂಕಿನ ಮರವಂಜಿ ಗ್ರಾಮದಲ್ಲಿ ಕೃಷಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 6 ಕೋಟಿ 13 ಲಕ್ಷ ರೂ. ವೆಚ್ಚದ ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ ಯೋಜನೆ ಮತ್ತು ಜನತಾದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ಯೋಜನೆಯಲ್ಲಿ ಸುಮಾರು 4966 ಹೆಕ್ಟೇರ್ ಅಂದರೆ 12365 ಎಕೆರೆ ಪ್ರದೇಶವು ಆಯ್ಕೆಯಾಗಿದ್ದು 4756 ಜನ ರೈತರಿಗೆ ಅನುಕೂಲವಾಗಲಿದೆ ಎಂದರು.
ಯೋಜನೆಗೆ ಸರಕಾರದಿಂದ 120 ಕೋಟಿ
ಚನ್ನಗಿರಿ ಸಹಾಯಕ ಕೃಷಿ ನಿರ್ದೇಶಕ ಅರುಣ್ಕುಮಾರ್ ಮಾತನಾಡಿ, ಈ ಯೋಜನೆಗೆ ರಾಜ್ಯ ಸರಕಾರ 120 ಕೋಟಿಗಳು ಇದರೊಂದಿಗೆ ವಿಶ್ವ ಬ್ಯಾಂಕ್ ಕಡೆಯಿಂದ 480 ಕೋಟಿಗಳ ನೆರವನ್ನು ಪಡೆಯುವ ಮೂಲಕ ಒಟ್ಟು 600 ಕೋಟಿ ರೂಗಳನ್ನು ಜಲಾನಯನ ಅಭಿವೃದ್ದಿ ಕಾರ್ಯಗಳಿಗೆ ಮೀಸಲಿರಿಸಿದೆ.
ಒಟ್ಟು 2900 ಹೆಕ್ಟೇರ್ ಪ್ರದೇಶವು ಉಪಚಾರಕ್ಕೆ ಲಭ್ಯವಿದ್ದು ಈ ಪ್ರದೇಶದಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ, ತೋಟಗಾರಿಕೆ, ಅರಣ್ಯೀಕರಣ ಚಟುವಟಿಕೆಗಳನ್ನು ಸೇರಿ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ. ಮತ್ತು ಅಟಲ್ ಭೂ ಜಲ್ ಯೋಜನೆಯಡಿ ತುಂತು ನೀರಾವರಿ ಘಟಕ ಪಡೆಯಬಹುದಾಗಿದ್ದು ರೈತರು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮರವಂಜಿ ಗ್ರಾಮದ ಗೌಡ್ರು ತಿಪ್ಪೇಸ್ವಾಮಿ, ತಾ.ಪಂ. ಮಾಜಿ ಸದಸ್ಯ ಎ.ಜೆ. ಜಗದೀಶ್, ಮರವಂಜಿ ಗ್ರಾ.ಪಂ. ಅಧ್ಯಕ್ಷೆಅಭಿಲಾಷಾ, ಉಪಾಧ್ಯಕ್ಷೆ ಪುಟ್ಟಮ್ಮ, ಪಾಂಡೋಮಟ್ಟಿ ಗ್ರಾ.ಪಂ. ಅಧ್ಯಕ್ಷೆ ಪುಟ್ಟಮ್ಮ ಸದಸ್ಯೆ ಚಂದ್ರಮ್ಮ, ಸುರೇಶ್. ಕುಮಾರ್ ಇತರರು ಹಾಜರಿದ್ದರು.
….