ದಾವಣಗೆರೆ : ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು, ಏಪ್ರಿಲ್ 26 ಮತ್ತು ಮೇ 07ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಜೊತೆಗೆ ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ. ಇದ್ರಿಂದ ರಾಜ್ಯದ ಮೂರು ಪಕ್ಷಗಳು ಗೆಲ್ಲುವ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿವೆ.

  ಹೌದು..ವೀಕ್ಷಕರೇ, ಬೆಂಗಳೂರಿನ ನಗರ್ತ ಪೇಟೆಯಲ್ಲಿ ನಿನ್ನೆ ನಡೆದ ಗಲಾಟೆಗೆ ಕೋಮು ಬಣ್ಣ ಕಟ್ಟಿದ ಬಿಜೆಪಿ ತನ್ನ ಸಿದ್ದ ಶೈಲಿಯಲ್ಲಿ ಚುನಾವಣಾ ಪ್ರಚಾರ ಆರಂಭಿಸಿದೆ ಅಂತೇಳಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿಕಾರಿದೆ. ದೂರುದಾರ ನೀಡಿದ ದೂರಿನಲ್ಲಿ “ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ” ಎನ್ನುವುದರ ಪ್ರಸ್ತಾಪವೇ ಇಲ್ಲ ಹಾಗೂ ಆರೋಪಿಗಳಲ್ಲಿ ಹಿಂದೂಗಳೂ ಇದ್ದಾರೆ. ವೈಯುಕ್ತಿಕ ವಿಷಯಕ್ಕಾಗಿ ನಡೆದ ಗಲಾಟೆ ಕೋಮು ಬಣ್ಣ ಕಟ್ಟಿದ ರಾಜ್ಯ ಬಿಜೆಪಿಗರಿಗೆ ನಾಡಿನ ಶಾಂತಿ ಕದಡುವುದರಲ್ಲಿ ಎಲ್ಲಿಲ್ಲದ ಆಸಕ್ತಿ. ಚುನಾವಣೆ ಸಮಯದಲ್ಲಿ ಕೋಮು ಪ್ರಚೋದನೆ ಮಾಡುವ ರಾಜಕೀಯ ಪಕ್ಷ ಅಥವಾ ಮಾಧ್ಯಮಗಳ ಮೇಲೆ ನೀತಿ ಸಂಹಿತೆಗೆ ಅನುಗುಣವಾಗಿ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಅಂತಾನೂ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಒತ್ತಾಯಿಸಿದೆ. ಅಷ್ಟೇ ಅಲ್ಲ., ಆರೋಪಿಗಳ ಹೆಸರುಗಳನ್ನೂ ಬಿಡುಗಡೆ ಮಾಡಿರೋ ರಾಜ್ಯ ಕಾಂಗ್ರೆಸ್​ ನಗರ್ತ ಪೇಟೆಯ ಗಲಾಟೆಯ ಆರೋಪಿಗಳಲ್ಲಿ •ತರುಣ್ •ರೋಹಿತ್ •ಡ್ಯಾನಿಶ್ •ಸುಲೆಮಾನ್ •ಶಾನವಾಜ್ ಅನ್ನೋ ಆರೋಪಿಗಳಿದ್ದಾರೆ. ಅಂದ್ರೆ  ಆರೋಪಿಗಳಲ್ಲಿ ಹಿಂದೂಗಳೂ ಇದ್ದಾರೆ.

ಚುನಾವಣೆಗಾಗಿ ಸುಳ್ಳನ್ನೇ ಉತ್ತಿ ಬಿತ್ತಿ ಬೆಳೆಯಲು ಪ್ರಯತ್ನಿಸುತ್ತಿರುವ ಬಿಜೆಪಿ ವಿಧಾನಸಭೆ ಚುನಾವಣೆಯಂತೆ ಲೋಕಸಭೆ ಚುನಾವಣೆಯಲ್ಲೂ ಮಕಾಡೆ ಮಲಗುವುದು ಖಚಿತ ಅಂತೇಳಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಬಿಜೆಪಿಯನ್ನ ತರಾಟೆಗೆ ತಗೊಂಡಿದೆ. ಪರಿಸ್ಥಿತಿ ಹೀಗಿರೋವಾಗ್ಲೇ,  ಈ ದಿನ ನಡೆಸಿದ ಕೆಲ ಮೆಗಾ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಕಾಂಗ್ರೆಸ್‌ ಅತಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲಿದೆ. ಗ್ಯಾರಂಟಿಗಳನ್ನ ಕೊಟ್ಟಿರುವ ಕಾಂಗ್ರೆಸ್‌ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಅಂತೇಳಿ ಈ ಸರ್ವೇ ಭವಿಷ್ಯ ನುಡಿದಿದೆ. ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಕೇವಲ 11 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಳ್ಳಬೇಕಿದೆ ಅಂತಾನೂ ಹೇಳಿದೆ. ಇನ್ನೂ ಉಳಿದ ಏಳು ಲೋಕಸಭಾ ಕ್ಷೇತ್ರಗಳಲ್ಲಿ ನೇರ ಹಣಾಹಣಿ ಏರ್ಪಡಿಲಿದೆ ಎಂದು ಸಮೀಕ್ಷೆ ಹೇಳಿದೆ..

ಅದೇನೇ ಇರ್ಲಿ, ಎಲೆಕ್ಷನ್​​ಗೆ ಇನ್ನು 1 ತಿಂಗಳು ಬಾಕಿ ಇದ್ದು, ಒಂದು ತಿಂಗಳಲ್ಲಿ ಮತದಾರರ ಒಲವು ಎತ್ತ ತಿರುಗುತ್ತೆ. ಕೊನೆ ಕ್ಷಣದಲ್ಲಿ ಏನಾಗುತ್ತೆ ಅಂತ ಹೇಳೋದಕ್ಕೆ ಬರಲ್ಲ.. ಹೀಗಾಗಿ ಮತದಾರರ ನಿರ್ಧಾರ ಏನು ಅಂತ ಗೊತ್ತಾಗಬೇಕು ಅಂದ್ರೆ ಜೂನ್ 4ರಂದು ಹೊರಬೀಳೋ ಫಲಿತಾಂಶದ ವರೆಗೂ ಕಾಯಲೇಬೇಕು.

Share.
Leave A Reply

Exit mobile version