ಚನ್ನಗಿರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದಲ್ಲಿ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನಡೆಸಲು ಕಲಾವಿದರಿಗೆ ಅವಕಾಶ ಮಾಡಿಕೊಡುವ ಮೂಲಕ ಕನ್ನಡ ನಾಡು ನುಡಿ ಸಂಸ್ಥತಿಯನ್ನು ಪೋಷಿಸುತ್ತಿದೆ ಎಂದು ಪತ್ರಕರ್ತ ಸತೀಶ್ ಎಂ ಪವಾರ್ ಹೇಳಿದರು.

ಪಟ್ಟಣದ ಆರ್.ವಿ.ಎಸ್. ವಿದ್ಯಾಸಂಸ್ಥೆಯಲ್ಲಿ ರಂಗನಾಥ ವಿದ್ಯಾಸಂಸ್ಥೆ ಕಂಚಿಗನಾಳ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಾರಶೆಟ್ಟಿಹಳ್ಳಿ ರಾಜಪ್ಪ ಮತ್ತು ಸಂಗಡಿಗರ ವತಿಯಿಂದ ಕನ್ಬಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡು ನುಡಿ ನೆಲ ಜಲವನ್ನು ಉಳಿಸುವಂತಹ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಕನ್ನಡ ನುಡಿಯನ್ನು ಬಿಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಆರ್.ವಿ.ಎಸ್. ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯ ಮೋಹನ್‌ಕುಮಾರ್ ಮಾತನಾಡಿ, ಇಂದು ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರುವಂತಹ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.

ನಮ್ಮ ಶಾಲೆಯಲ್ಲಿ ೧ ರಿಂದ ೧೦ ರವಗೂ ಕನ್ನಡ ಮಾಧ್ಯಮವಿದ್ದು ವಿದ್ಯಾರ್ಥಿಗಳು ಕನ್ನಡದಲ್ಲಿಯೂ ಉತ್ತಮ ಸಾಧನೆ ಮಾಡಬಹುದು ಎನ್ನುವುದನ್ನು ತೋರಿಸಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ದೊಡ್ಡಘಟ್ಟ ಸಂಗೀತ ಶಿಕ್ಷಕ ಮೆಹಬೂಬ್ ಅಲಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ನದೀಮಾಖಾನಂ, ಶಾಲೆಯ ಹಿರಿಯ ಶಿಕ್ಷಕ ಅರುಣ್‌ಕುಮಾರ್ ಹಾಜರಿದ್ದರು. ರಾಜಪ್ಪ, ಸುರೇಶ್ ಮತ್ತು ಕಲಾವಿದರು ಗೀತಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Share.
Leave A Reply

Exit mobile version