ದಾವಣಗೆರೆ : ಸಹಕಾರಿ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ತೊಟ್ಟಿರುವ ಸಂಡೂರು ಬಸಪ್ಪ ಮಂಗಳವಾರ ಉಮೇದುವಾರಿಕೆ ಸಲ್ಲಿಸಿದರು.
ಈಗಾಗಲೇ ಶಿಮುಲ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಬಸಪ್ಪ, ಹೈನೋದ್ಯಮಿ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಲು ಹೊರಟಿದ್ದಾರೆ. ಈ ಹಿನ್ನೆಲೆಯಲ್ಲಿ ಮತದಾರರ ಮನ ಕದಿಯಲು ಮುಂದಾಗಿದ್ದಾರೆ. ಅಲ್ದೇ ರೈತರಿಗೆ ಬೇಕಾದ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಾನು ಸದಾ ಸಿದ್ದ ಎಂಬ ಮಾತನ್ನು ನೀಡಿದ್ದಾರೆ.
ಶ್ರೀ ಸಾಮಾನ್ಯನ ಕೈಗೆ ಸಿಗುವ ಬಸಪ್ಪ
ಕೆಲವರು ಆಕಾಶದಲ್ಲಿನ ಚಂದ್ರನ ಹಾಗೆ, ಸಾಮಾನ್ಯನಿಗೆ ಎಟುಕದ ಕೈಗಳು. ಆದರೆ ಬಸಪ್ಪ ಸಾಮಾನ್ಯರ ರೀತಿ ಜೀವನ ನಡೆಸುತ್ತಿದ್ದು, ಅನ್ನದಾತನ ಮಗ. ಹೀಗಿರುವಾಗ ರೈತನ ಅಂತರಾಳವನ್ನು ತಿಳಿದುಕೊಂಡವರು. ಹಾಗಾಗಿ ರೈತರೇ ಅವರ ಮತದಾರ ಪ್ರಭುಗಳಾಗಿದ್ದು, ನಿಮ್ಮ ಕೈಗೆ ಸಿಗುವ ವ್ಯಕ್ತಿ ನಾನಾಗಿದ್ದೇನೆ. ಆದ್ದರಿಂದ ನನ್ನನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡುವೆ ಎಂದು ಬಸಪ್ಪ ಹೇಳುತ್ತಾರೆ.
ಬಸಪ್ಪಗೆ ಮೂವರು ಶಾಸಕರ ಬೆಂಬಲ
ಮೂಲತಃ ಕಾಂಗ್ರೆಸ್ ಕಟ್ಟಾಳು ಆಗಿರುವ ಬಸಪ್ಪಗೆ ಚನ್ನಗಿರಿ, ನ್ಯಾಮತಿ, ಹೊನ್ನಾಳಿ, ಮಾಯಕೊಂಡದ ಶಾಸಕರ ಬೆಂಬಲವಿದೆ. ಅದಕ್ಕಾಗಿ ಶಾಸಕ ಬಸವಂತಪ್ಪ, ಶಿವಗಂಗಾಬಸವರಾಜ್, ಶಾಂತನಗೌಡರಿಗೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ. ಈ ಮೂವರು ಶಾಸಕರು ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.
ಹಸುಗಳಿಗಳಿಗೆ ಸಬ್ಸಿಡಿ ನೀಡುವ ಭರವಸೆ ನೀಡಿದ ಬಸಪ್ಪ
ದಾವಣಗೆರೆ ಜಿಲ್ಲಾ ಅಭಿವೃದ್ಧಿಗೆ ನಿಂತಿರುವ ಸಚಿವ ಮಲ್ಲಿಕಾರ್ಜುನ್ ಹಸುಗಳಿಗೆ ಸಬ್ಸಿಡಿ ಘೋಷಿಸುವುದಾಗಿ ತಿಳಿಸಿದ್ದು, ಅವರ ಈ ಕಾರ್ಯಕ್ಕೆ ಬಸಪ್ಪ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹಸುಗಳನ್ನು ಸಬ್ಸಿಡಿ ದರದಲ್ಲಿ ಕೊಡಿಸುತ್ತೇನೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮತದಾರರು ಮತ ನೀಡುವಂತೆ ಕೋರಿದ್ದಾರೆ.
ಪ್ರತ್ಯೇಕ ಹಾಲಿನ ಒಕ್ಕೂಟವೇ ನನ್ನ ಗುರಿ
ದಾವಣಗೆರೆಗೆ ಪ್ರತ್ಯೇಕ ಹಾಲಿನ ಒಕ್ಕೂಟ ಬೇಕೆಂಬ ಗುರಿ ಮೊದಲಿನಿಂದಲೂ ಇದ್ದು, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಗೆ ಬಸಪ್ಪ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದಾರೆ. ಅಲ್ಲದೇ ಈ ಬಗ್ಗೆ ಹೋರಾಟ ಮಾಡಲು ಕೂಡ ಬಸಪ್ಪ ಸಜ್ಜಾಗಿದ್ದಾರೆ.
ವದಂತಿಗೆ ಕಿವಿ ಕೊಡಬೇಡಿ
ಕೆಲ ವಿರೋಧಿಗಳು ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದು, ವದಂತಿಗೆ ಕಿವಿಗೊಡಬೇಡಿ ಎಂದು ಬಸಪ್ಪ ಹೇಳಿದ್ದಾರೆ ಕೆಲವರು ಬಸಪ್ಪಗೆ ಪ್ರತಿನಿಧಿಗಳು ಕಡಿಮೆ ಎನ್ನುತ್ತಿದ್ದಾರೆ. ಆದರೆ ಇದು ಸುಳ್ಳು..ಇಂತಹದ್ದಕ್ಕೆ ಕಿವಿಗೊಡಬೇಡಿ ನಮ್ಮ ಮತಗಳು ಬೇರೇನೆ ಇದೆ. ನಾನು ಜನರ ಸೇವೆಗಾಗಿ ಬಂದಿದ್ದೇನೆ, ನಿಮ್ಮ ಸೇವೆ ಮಾಡಲು ಇದೊಂದು ಅವಕಾಶ ಕೊಡಿ ಎಂದು ಬಸಪ್ಪ ಮನವಿ ಮಾಡಿದ್ದಾರೆ. ಒಟ್ಟಾರೆ ರೈತನ ಬಗ್ಗೆ ಒಲವಿರುವ ಬಸಪ್ಪ ಈ ಬಾರಿ ಗೆಲ್ಲುತ್ತಾರಾ ಕಾದು ನೋಡಬೇಕಿದೆ.