ಭದ್ರಾವತಿ: ಶಿವಮೊಗ್ಗದಿಂದ ಬೆಂಗಳೂರಿಗೆ ಮಂಗಳವಾರ ರಾತ್ರಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ತಾಲ್ಲೂಕ್ ಬಿ.ಆರ್.ಪ್ರಾಜೆಕ್ಟ್ ನಿವಾಸಿ ಅನ್ನಪೂರ್ಣ ಇವರ ಮೇಲೆ ಅಮಾನುಷವಾಗಿ ಹತ್ಯೆಗೈದು ರೈಲಿನಲ್ಲಿ ಹೊರಗೆ ತಳ್ಳಿರಬಹುದು ಎನ್ನಲಾದ ಘಟನೆಯ ಬಗ್ಗೆ ಅಂದು ಕಾರ್ಯನಿರ್ವಹಿಸು ತ್ತಿದ್ದ ರೈಲ್ವೆ ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ಕೈಗೊಂಡು, ಕೊಲೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಹಾಗೂ ಕೊಲೆಗಡಕರುಗಳನ್ನು ಶೀಘ್ರವಾಗಿ ಬಂಧಿಸುವಂತೆ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ರಮೇಶ್ ಶೆಟ್ಟಿ ಶಂಕರಘಟ್ಟ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿರುವ ಅವರು, ಇಂತಹ ಘಟನೆಗಳಿಂದ ರಾತ್ರಿ ಹೊತ್ತು ರೈಲುಗಳಲ್ಲಿ ಮಹಿಳೆಯರಿಗೆ ಮೀಸಲಾದ ಬೋಗಿಯಲ್ಲಿ ಏಕಾಂಗಿ ಹೆಣ್ಣು ಮಕ್ಕಳು ಪ್ರಯಾಣಿಸುವುದು ಎಷ್ಟು ಸುರಕ್ಷಿತ ಎಂಬುದು ಪ್ರಯಾಣಿಕರು ಯೋಚಿಸಬೇಕಿದೆ.

ಈ ಬಗ್ಗೆ ಸಂಬಂಧಪಟ್ಟ ಆಧಿಕಾರಿಗಳು ಗಂಬೀರವಾಗಿ ಯೋಚಿಸಬೇಕಾಗಿದೆ. ಬಿ.ಆರ್.ಪ್ರಾಜೆಕ್ಟ್ ನಲ್ಲಿ ಸುಮಾರು 60 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ವಾಸವಾಗಿರುವ ಅತ್ಯಂತ ಸುಸಂಸ್ಕೃತ ವರ್ಗದ ರಾನಡೆ ಕುಟುಂಬಕ್ಕೆ ಸೇರಿದ ಈ ಹೆಣ್ಣುಮಗಳು ಶಾರ್ಟ್ ಹ್ಯಾಂಡ್ ತರಗತಿ ಯಲ್ಲಿ ಪರಿಣತರು.  ನನ್ನ ವಿದ್ಯಾರ್ಥಿನಿಯಾಗಿದ್ದ ಅನ್ನಪೂರ್ಣ ಅತ್ಯಂತ ಸೌಮ್ಯ ಸ್ವಭಾವದ ಬುದ್ದಿವಂತೆ ಹೆಣ್ಣುಮಗಳು. ತಾನು ಕೆಲಸ ನಿರ್ವಹಿಸುತ್ತಿದ್ದ ಅರಣ್ಯ ಇಲಾಖೆಯಲ್ಲಿಯೂ ಒಳ್ಳೆಯ ಹೆಸರನ್ನು ಗಳಿಸಿದ್ದ ಇವರಿಗೆ ಈ ರೀತಿಯ ಸಾವು ಬರಬಾರದಿತ್ತು ಎಂದು ತಿಳಿಸಿದ್ದಾರೆ.

Share.
Leave A Reply

Exit mobile version