ಜಗಳೂರು.ಮೇ.೨೦:- ಕಳೆದ ಎರಡು ವರ್ಷಗಳಿಂದ ಕೈ ಕೊಟ್ಟಿದ್ದ ಮಳೆರಾಯ ಈ ಬಾರಿ ಕೈಹಿಡಿಯುವ ನಿರೀಕ್ಷೆ ಯೊಂದಿಗೆ ರೈತಾಪಿ ಜನರು ಮತ್ತೆ ಮುಂಗಾರು ಹಂಗಾಮಿಗೆ ಸಿದ್ಧಗೊಳ್ಳುತ್ತಿ ದ್ದಾರೆ. ಉತ್ಸಾಹದಿಂದಲೇ ಭೂಮಿಗಳನ್ನು ಕೃಷಿ ಚಟುವಟಿಕೆಗೆ ಅಣಿಗೊಳಿಸುತ್ತಿದ್ದಾರೆ. ಈಗಾಗಲೇ ಜಮೀನುಗಳನ್ನು ಹದಗೊ ಳಿಸುವುದು, ಕಸಕಡ್ಡಿ ಆರಿಸಿ ಹೊಲವನ್ನು ಸ್ವಚ್ಛಗೊಳಿಸಿದ್ದಾರೆ. ಬಿತ್ತೆನೆಗೆ ಅನುಕೂಲವಾಗುವಂತೆ ಮಾಡಿದ್ದರೆ. ಇನ್ನೂ ಕೆಲವರು ಅದಾಗಲೇ ಜಮೀನುಗಳನ್ನು ಹರಗಿ ಸಮತಟ್ಟುಗೊಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮಳೆ ಕೊರತೆಯಿಂದಾಗಿ ತಾಲೂ ಕಿನಲ್ಲಿ ನಿರೀಕ್ಷಿತ ಬಿತ್ತನೆ ಗುರಿ ಸಾಧಿಸಿಲ್ಲ.ಇದೀಗ ಅಲ್ಲಲ್ಲಿ ಸುರಿ ಯುತ್ತಿರುವ ಮಳೆಯಿಂದ ಕೃಷಿ ಇಲಾಖೆಯಲ್ಲೂ ಉತ್ಸಾಹ ಮೂಡಿಸಿದೆ ಅಗತ್ಯ ಸಿದ್ಧತೆಯಲ್ಲಿ ತೊಡಗಿದೆ.ತಾಲೂಕಿನಲ್ಲಿ ಇತ್ತೀಚೆಗೆ ಉತ್ತಮವಾಗಿ ಮಳೆ ಸುರಿದಿದೆ. ಮಳೆ ಯಾಶ್ರಿತ ಬೇಸಾಯ ಮಾಡುವ ರೈತರು ತಮ್ಮ ಜಮೀನುಗಳಲ್ಲಿ ದ್ದ ಹತ್ತಿ,ತೊಗರಿ ಕೂಳೆಗಳು ಹಾಗೂ ಕಳೆ ಗಿಡ ತೆಗೆದಿದ್ದಾರೆ. ಭೂಮಿಗೆ ಕೊಟ್ಟಿಗೆ ಗೊಬ್ಬರ ಹರಡಿದ್ದು,ಭೂಮಿ ಹದಗೊಳಿಸಲು ಮುಂದಾಗಿದ್ದಾರೆ. ಜಗಳೂರು ತಾಲೂಕಿನಲ್ಲಿ ಮುಂಗಾರಿಗಿಂತ ಹಿಂಗಾರು ಮಳೆಗಳು ಚೆನ್ನಾಗಿ ಆಗುತ್ತಿರುವುದರಿಂದ ರೈತರು ಅಳೆದುತೂಗಿ ಬಿತ್ತನೆ ಮಾಡುವುದು ನಡೆದುಕೊಂಡು ಬಂದಿದೆ.
ಈ ಬಾರಿ ಸಾಮಾನ್ಯ ಮಳೆ ಬಗ್ಗೆ ಹವಾಮಾನ ಮುನ್ಸೂಚನೆ ಇರುವುದರಿಂದ ಬಿತ್ತನೆ ಹೀಗೆ ಆಗುತ್ತದೆ ಎಂದು ಹೇಳುವುದು ಕಷ್ಟಕರವಾಗಿದೆ.ತಾಲೂಕಿನಲ್ಲಿ ಬಹುತೇಕ ಕಡೆ ಅಲ್ಪ ಸ್ವಲ್ಪ ಮಳೆಯಾಗಿದ್ದು.ಇನ್ನೊಂದೆ ರೆಡು ದಿನದಲ್ಲಿ ಮತ್ತೆ ಮಳೆಯಾದರೆ ಉಳುಮೆ ಕಾರ್ಯ ನಡೆ ಯಲಿದೆ ವರುಣ ದೇವನ ಕಣ್ಣಾಮುಚ್ಚಾಲೆಯಿಂದ ನೇಗಿಲ ಯೋಗಿ ನಲುಗಿ ಹೋಗಿದ್ದಾನೆ. ಆದರೆ,ಈ ಬಾರಿ ಮುಂಗಾರು ಕೈಹಿಡಿಯುವ ಭರವಸೆಯೊಂದಿಗೆ ರೈತಾಪಿ ಜನರು ಮತ್ತೆ ಜಮೀನಿನತ್ತ ಮುಖ ಮಾಡಿದ್ದಾರೆ.ಮಳೆರಾಯನ ಆಗಮನದ ನಿರೀಕ್ಷೆ ಯೊಂದಿಗೆ ಮತ್ತೆ ಕೃಷಿ ಚಟುವಟಿಕೆ ಆರಂಭಿಸುತ್ತಿದ್ದು, ಮುಂಗಾರು ಬಿತ್ತನೆಗೆ ಜಮೀನು ಈಗಾಗಲೇ ಸಿದ್ಧಗೊಳಿಸುತ್ತಿ ದ್ದಾರೆ…!