ದಾವಣಗೆರೆ.ಜಗಳೂರು ಪಟ್ಟಣದ ತರಳಬಾಳು ಕಲ್ಯಾಣ ಮಂದಿರದಲ್ಲಿ ಬಂಗಾರದ ಆಭರಣ ಮತ್ತು ಇತರೆ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಗಳೂರು ತಾಲೂಕಿನ ಬಸವಾಪುರ ಗ್ರಾಮದ ಸಿದ್ದೇಶ್(19) ಬಂಧಿತ ಆರೋಪಿ.ಡಿಸೆಂಬರ್ 4 ರಂದು ನಿಬಗೂರು ಗ್ರಾಮದ ಶರಣಪ್ಪ ಅವರಿಗೆ ಸಂಬಂಧಿಸಿದ 55 ಗ್ರಾಂ ಬಂಗಾರ ಮತ್ತು ಮೊಬೈಲ್, ಬ್ಲೂಟೂತ್ ಹೆಡ್ಸೆಟ್ ಸಾಮಾನುಗಳು ಕಳುವಾಗಿರುವ ಕುರಿತು ಜಗಳೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.
ತಾಂತ್ರಿಕ ಪರಿಶೀಲನೆ ಮಾಡಿ ವಿವಿಧಡೆ ಸಿ.ಸಿ.ಟಿ.ವಿಗಳನ್ನು ಪರಿಶೀಲಿಸಿ ಆರೋಪಿ ಸಿದ್ದೇಶ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿದಾಗ ಈ ಹಿಂದೆ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.
ಬಂಧಿತನಿಂದ ಸುಮಾರು 3 ಲಕ್ಷದ 85 ಸಾವಿರ ಬೆಲೆ ಬಾಳುವ 55 ಗ್ರಾಂ ಬಂಗಾರದ ಆಭರಣಗಳು ಮತ್ತು 10.000/- ರೂ ಬೆಲೆ ಬಾಳುವ ರೆಡ್ ಮೀ ಕಂಪೆನಿಯ ಮೊಬೈಲ್, 1500/- ರೂ ಬೆಲೆ ಬಾಳುವ ಒಪ್ಪೋ ಕಂಪೆನಿಯ ಬ್ಲೂಟೂತ್ನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ