ಭದ್ರಾವತಿ : ಎರಡು ಕಾರುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ತಾಲೂಕಿನ ಮಾಚೇನಹಳ್ಳಿ ಕೈಗಾರಿಕೆ ವಲಯದಲ್ಲಿರುವ ಶಾಂತಲಾ ಫ್ಯಾಕ್ಟರಿ ಮ್ಯಾನೇಜರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ
ಶಿವಮೊಗ್ಗದ ನಿದಿಗೆ ಕೆರೆಯ ಬಳಿ ಸೋಮವಾರ ಬೆಳಗ್ಗೆ ಅಪಘಾತ ನಡೆದಿದೆ. ಅಪಘಾತದಲ್ಲಿ ಶಾಂತಲಾ ಫ್ಯಾಕ್ಟರಿಯ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದ ಮೇಘರಾಜ್ ಮೃತರಾಗಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿದೆ.
ರೆನಾಲ್ಡ್ ಕಾರು ಹಾಗೂ ವ್ಯಾಗನರ್ ಕಾರುಗಳು ಮುಖಾಮುಖಿಯಾಗಿ ಢಿಕ್ಕಿಯಾಗಿದೆ. ಲಿಂಗದಹಳ್ಳಿಯಿಂದ ಬರುತ್ತಿದ್ದ ರೆನಾಲ್ಡ್ ಕಾರು ಶಿವಮೊಗ್ಗದಿಂದ ಮಾಚೇನಹಳ್ಳಿಗೆ ಹೋಗುತ್ತಿದ್ದ ವ್ಯಾಗನರ್ ಕಾರಿಗೆ ಡಿಕ್ಕಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ರೋಡ್ ಕ್ರಾಸಿಂಗ್ ಮಾಡಿ ಒನ್ವೆ ಮಾಡಲಾಗಿದೆ.ಆದರೆ ಈ ಬಗ್ಗೆ ಸವಾರರಿಗೆ ಗೊತ್ತಾಗುತ್ತಿಲ್ಲ. ಈ ಕಾರಣದಿಂದ ಆಗಾಗ ಅಪಘಾತ ಸಂಭವಿಸಿದೆ.
ರೆನಾಲ್ಡ್ ಕಾರಿನ ಚಾಲಕ ಮೇಘರಾಜ್ ಇನ್ನೊಂದು ಬದಿಯಲ್ಲಿ ಸಾಗಬೇಕಿತ್ತು. ಆದೃ ಒನ್ ವೇನಲ್ಲಿ ಬಂದ ಈ ಕಾರು ಎದುರಿಗೆ ಬರುತ್ತಿದ್ದ ವ್ಯಾಗನರ್ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ವ್ಯಾಗನರ್ ಕಾರು ಚಾಲಕ ಮೇಘರಾಜ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ತೀವ್ರ ಪೆಟ್ಟಿನಿಂದ ಸಾವನ್ನಪ್ಪಿರುವ ಅವರನ್ನ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಿಲ್ಲ. ಅಪಘಾತದ ರಭಸಕ್ಕೆ ಎರಡು ಕಾರು ಜಖಂಗೊಂಡಿದೆ. ಇನ್ನೂ ವಿಷಯ ತಿಳಿಯುತ್ತಲೇ ಶಾಂತಲಾ ಫ್ಯಾಕ್ಟರಿ ಅಧಿಕಾರಿಗಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಆವರಣಕ್ಕೆ ಧಾವಿಸಿದದ್ದರು. ಗಾಯಾಳುಗಳ ಬಗ್ಗೆ ಇನ್ನಷ್ಟೆ ಮಾಹಿತಿ ಲಭ್ಯವಾಗಬೇಕಿದೆ ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಶಾಂತಲಾ ಫ್ಯಾಕ್ಟರಿಯಲ್ಲಿ ಈಗ ನೀರವ ಮೌನ ಆವರಿಸಿದ್ದು, ನೌಕರರಿಗೆ ರಜೆ ಘೋಷಣೆ ಮಾಡಲಾಗಿದೆ ಅಂತ ಹೇಳಲಾಗುತ್ತಿದೆ.