ಚನ್ನಗಿರಿ:   ಚನ್ನಗಿರಿಯಿಂದ ಚಿತ್ರದುರ್ಗ ಕಡೆ ಇಂಡಿಕಾ ವಾಹನದಲ್ಲಿ  ಕುಟುಂಬದೊಂದಿಗೆ  ತೆರಳುತ್ತಿದ್ದ  ವೇಳೆ  ಚಿತ್ರದುರ್ಗಕಡೆಯಿಂದ ವೇಗವಾಗಿ ಬಂದ ಬೊಲೆರೂ ಪಿಕಪ್  ವಾಹನವು ನೇರವಾಗಿ ಡಿಕ್ಕಿಹೊಡೆದು  ವಾಹನವನ್ನು ನಿಲ್ಲಿಸದೇ ಪರಾರಿಯಾದ ಘಟನೆ  ಸೋಮವಾರ  ಸಂಜೆ  ಸಂಭವಿಸಿದೆ. 

ತಾಲೂಕಿನ ಲಕ್ಷ್ಮೀಸಾಗರದಿಂದ ಚಿತ್ರದುರ್ಗದ ಕಡೆ  ತೆರಳುತ್ತಿದ್ದ  ವೇಳೆ ಈ ಘಟನೆ ಪಟ್ಟಣದ  ನವನಗರದ ಬಳಿ  ಸಂಭವಿಸಿದ್ದು  ಕಾರಿನಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  ಡಿಕ್ಕಿಯಾದ ಸದ್ದು ಕೇಳಿದಾಕ್ಷಣ  ಸ್ಥಳೀಯರು  ಕಾರಿನಲ್ಲಿದ್ದರನ್ನು ಕೆಳಗಿಳಸಿ ನೋಡುವಷ್ಟರಲ್ಲಿ  ಬೊಲೆರೋ ಪಿಕಪ್ ನಾಪತ್ತೆಯಾಗಿದೆ

Share.
Leave A Reply

Exit mobile version