ಶಿವಮೊಗ್ಗ : ಪ್ರೀತಿಸಲು ಹುಡುಗಿ ಸಿಕ್ಕಿಲ್ಲ ಎಂದು ಜುಗುಪ್ಸೆಗೊಂಡು ಡಿಗ್ರಿ ಓದುತ್ತಿದ್ದ ಯುವಕ ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಇಂದಾವರ ಗ್ರಾಮದ ಜಯದೀಪ್ ( 24 ) ಮೃತ ಯುವಕ. ಈತ ಮೊದಲು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ತನ್ನ ಪ್ರೀತಿಯನ್ನು ಆ ಹುಡುಗಿಗೆ ಹೇಳಿದ್ದ. ಆದರೆ ಆ ಹುಡುಗಿ ಆತನ ಪ್ರೀತಿ ನಿರಾಕರಣೆ ಮಾಡಿದ್ದಳು. ಇದಾದ ಬಳಿಕ ತನಗಿಂತ ಚಿಕ್ಕವರಿಗೆ ಪ್ರೀತಿಸಲು ಹುಡುಗಿಯರು ಸಿಕ್ಕಿದ್ದಾರೆ. ಆದರೆ ನನಗೆ ಮಾತ್ರ ಹುಡುಗಿ ಸಿಕ್ಕುತ್ತಿಲ್ಲ ಎಂದು ಬೇಸರಗೊಂಡಿದ್ದ ಎಂಬ ಮಾಹಿತಿ ಇದೆ.

ಹುಡುಗಿ ಸಿಕ್ಕಿಲ್ಲ ಎಂಬುದರ ಜೊತೆಗೆ ಆತ ಆನ್ಲೈನ್ ಟ್ರೇಡಿಂಗ್ ನಲ್ಲಿ ಸಿಲುಕಿಹಾಕಿಕೊಂಡಿದ್ದ. ಇದಕ್ಕಾಗಿ ತನ್ನ ಸ್ನೇಹಿತರ ಬಳಿ ಅಂದಾಜು 90 ಸಾವಿರ ಸಾಲ ಮಾಡಿದ್ದ. ಆದರೆ ಹಾಕಿದ ಹಣ ಬಾರದೇ ಇದ್ದಾಗ. ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ. ಬಳಿಕ ಯುವಕ ತುಂಗಾ ನದಿಗೆ ಹಾರಿ ತನ್ನ ಜೀವವನ್ನು ಕಳೆದುಕೊಂಡಿದ್ದಾನೆ.

ಶನಿವಾರ ಬೆಳಗ್ಗೆ ವಾಟ್ಸಪ್ ಸ್ಟೇಟಸ್ ಹಾಕಿ ತುಂಗಾ ನದಿಯ ಸಮೀಪ ಬೈಕ್ ನಿಲ್ಲಿಸಿ ಆತ ಕಣ್ಮರೆಯಾಗಿದ್ದ. ನಂತರ ತುಂಗಾ ನದಿಗೆ ಹಾರಿರಬಹುದು ಎಂಬ ಅನುಮಾನದಿಂದ ಅಗ್ನಿಶಾಮಾಕದಳದ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದರು. ಆದರೆ ಸ್ವಲ್ಪ ದೂರದಲ್ಲಿರುವ ಸ್ಮಶಾನಕಟ್ಟೆ ಸಮೀಪ ಆತನ ಶವ ಸಿಕ್ಕಿದೆ.

Share.
Leave A Reply

Exit mobile version