ದಾವಣಗೆರೆ :ಮಹಿಳೆ ಅಡುಗೆನೂ ಮಾಡ್ತಾಳೆ, ಆಕಾಶದಲ್ಲೂ ಹಾರಾಡುತ್ತಾಳೆ  ಎಂದು ಗಾಯಿತ್ರಿ ಸಿದ್ದೇಶ್ವರ ಶಾಸಕ ಶಾಮನೂರು ವಿರುದ್ದ ಹರಿಹಾಯ್ದಿದ್ದಾರೆ.

ದಾವಣಗೆರೆ ಲೋಕಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮಾತಿನ ಸಮರ ಮುಂದುವರಿದಿದೆ. ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಟೀಕಿಸುವ ಭರದಲ್ಲಿ ಶಾಮನೂರು ಶಿವಶಂಕರಪ್ಪ , ಮಹಿಳೆಯರು ಅಡುಗೆ ಮಾಡೋಕೆ ಮಾತ್ರ ಲಾಯಕ್ಕು” ಬಿಜೆಪಿ ಅಭ್ಯರ್ಥಿಗೆ ಸರಿಯಾಗಿ ಮಾತನಾಡೋದಕ್ಕೂ ಬರೋದಿಲ್ಲ ಎಂದು ಇತ್ತೀಚೆಗೆ ನಡೆದ  ಕಾಂಗ್ರೆಸ್ ಸಭೆಯಲ್ಲಿ ಶಾಸಕರು ಹೇಳಿದ್ದರು. ಈ ಮಾತಿಗೆ ದಾವಣಗೆರೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಗಾಯಿತ್ರಿ ಸಿದ್ದೇಶ್, ಮಹಿಳೆಯರು ಈಗ ಎಲ್ಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಅವರದ್ದೇ ಆದ ಸಾಧನೆ ಮಾಡುತ್ತಿದ್ದು, ಎಲ್ಲಾ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವ ವಿಚಾರ ಅಜ್ಜಗೆ ಗೊತ್ತಿಲ್ಲ ಅಂತಾ ಕಾಣಿಸುತ್ತಿದೆ. ಈ ರೀತಿ ಮಾತನಾಡುವ ಮೂಲಕ ಶಾಮನೂರು ಮಹಿಳೆಯರಿಗೆ ಅಗೌರವ ತೋರಿದ್ದಾರೆ, ಅಡುಗೆ ಮಾಡಿ ಕೈ ತುತ್ತು ಕೊಡೊ ಪ್ರೀತಿ ಅವರಿಗೆ ಗೊತ್ತಿಲ್ಲ, ನಾವೆಲ್ಲ ಮಹಿಳೆಯರು ಅಡುಗೆ ಮಾಡೋಕೆ ಮಾತ್ರ ಸೀಮಿತಾನಾ, ಮಹಿಳೆ ಅಡುಗೆನೂ ಮಾಡ್ತಾಳೆ, ಆಕಾಶದಲ್ಲೂ ಹಾರಾಡುತ್ತಾಳೆ, ಮೋದಿಜಿ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ, ಆದರೆ ಇಂತಹವರು ಮಹಿಳೆಯರಿಗೆ ಅಪಮಾನ ಮಾಡುತ್ತಾರೆ ಎಂದು ಅವರು ಕಿಡಿಕಾರಿದರು.

ದಾವಣಗೆರೆ ನಗರದ ಬಂಟರ ಭವನದಲ್ಲಿ ಇತ್ತೀಚೆಗೆ  ಕಾಂಗ್ರೆಸ್ ಸಭೆ ನಡೆದಿತ್ತು. ಆಗ ಶಾಸಕ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಅಭ್ಯರ್ಥಿ, ಸೊಸೆ ಪ್ರಭಾ ಮಲ್ಲಿಕಾರ್ಜುನ್ ಎದುರು ಬಿಜೆಪಿ ಅಭ್ಯರ್ಥಿಗೆ ಜನರ ಮಧ್ಯೆ ಮಾತನಾಡೋಕೆ ಬರಲ್ಲ, ಅವರು ಮನೆಯಲ್ಲಿ ಅಡುಗೆ ಮಾಡೋಕೆ ಮಾತ್ರ ಲಾಯಕ್ಕಿದ್ದಾರೆ.  

ಕಮಲ ಗೆಲ್ಲಿಸಿ ಮೋದಿಯವರಿಗೆ ಕೊಡೋಣ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಹೇಳುತ್ತಾರೆ, ಮತ್ತೆ ಈ ಹಿಂದೇ ಗೆದ್ದಿದ್ದು ನೀವೆ ಅಲ್ಲವೇ, ಆಗ ಕಮಲ ಹೂವನ್ನ ಕಳುಹಿಸಿದ್ರಾ, ಕಮಲ ಹೂವನ್ನ ಕಳುಹಿಸಿದರೆ ದಾವಣಗೆರೆ‌ಅಭಿವೃದ್ದಿ ಆಗೋದಿಲ್ಲ. ಇಲ್ಲಿ ಅಭಿವೃದ್ದಿ ಕೆಲಸಗಳನ್ನ ಮಾಡಬೇಕು, ಕೇವಲ ಮೋದಿ ಮೋದಿ ಎನ್ನುವುದಲ್ಲ, ಎದುರಾಳಿ ಅಭ್ಯರ್ಥಿಗೆ ಜನರ ಮಧ್ಯೆ ಮಾತನಾಡೋಕೆ ಬರಲ್ಲ, ಅವರು ಅಡುಗೆ ಮಾಡೋಕೆ ಮಾತ್ರ ಲಾಯಕ್ಕು ಎಂದು ವಿವಾದ ಸೃಷ್ಟಿಸಿದ್ದರು.  ಇನ್ನು ವಿರೋಧ ಪಕ್ಷದವರು ಮೋದಿ.. ಮೋದಿ ಅಂತಾರೆ. ಆದರೆ ಮೋದಿ ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ? ನಮ್ಮ ರಾಜ್ಯಕ್ಕೆ ಬರಬೇಕಾದ ಹಣ ನೀಡದೇ ಅನ್ಯಾಯ ಮಾಡಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಇದೇ ವೇಳೆ ವಾಗ್ದಾಳಿ ಕೂಡ ನಡೆಸಿದ್ದರು‌. ಅಲ್ಲದೆ ಸ್ವತಃ ಸೊಸೆ ಪ್ರಭಾ ಕೂಡ ಒಬ್ಬ ಮಹಿಳೆಯಾಗಿದ್ದು, ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದಾರೆ. ಶಾಮನೂರು ಶಿವಶಂಕರಪ್ಪ ಈ ರೀತಿ ಮಾತನಾಡಬಾರದು ಎಂದು ಸ್ಥಳೀಯ ಮಹಿಳೆಯರು ಕೂಡ ಶಾಮನೂರು ಶಿವಶಂಕರಪ್ಪ ವಿರುದ್ಧ ಹರಿಹಾಯ್ದಿದ್ದರು. ಅಲ್ಲದೇ ಮಹಿಳೆ ಅಡುಗೆನೂ ಮಾಡ್ತಾಳೆ, ಆಕಾಶದಲ್ಲೂ ಹಾರಾಡುತ್ತಾಳೆ‌ ಈ ಬಗ್ಗೆ ಶಾಮನೂರು ಶಿವಶಂಕರಪ್ಪ ತಿಳಿದುಕೊಳ್ಳಬೇಕು ಎಂದು ಗಾಯಿತ್ರಿ ಸಿದ್ದೇಶ್ವರ ಟಾಂಗ್ ನೀಡಿದ್ದಾರೆ.

 

 

 ..‌.

 

Share.
Leave A Reply

Exit mobile version