ಬೆಂಗಳೂರು:ನಗರ ಪೊಲೀಸರು ಕಾರ್ಯಾಚರಣೆ ಕೈಗೊಂಡು 12 ಮಂದಿ ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ ಒಟ್ಟು 60 ಲಕ್ಷ ರೂ. ಮೌಲ್ಯದ 62 ದ್ವಿಚಕ್ರ ವಾಹನ, 25 ಮೊಬೈಲ್ ಹಾಗೂ 34 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಆರ್ಟಿ ನಗರ: ರಾತ್ರಿ ವೇಳೆ ಮನೆಯ ಪಾರ್ಕಿಂಗ್ ಸ್ಥಳದಲ್ಲಿ ಬೀಗ ಹಾಕಿ ನಿಲ್ಲಿಸಿದಂತಹ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ. ಇಬ್ಬರನ್ನು ಆರ್ಟಿ ನಗರ ಠಾಣೆ ಪೊಲೀಸರು ಬಂಧಿಸಿ, ಅನಂತಪುರ ಜಿಲ್ಲೆಯ ಹಿಂದುಪುರದ ಗ್ಯಾರೇಜ್ ನಲ್ಲಿ ನಿಲ್ಲಿಸಿದಂತಹ 12 ದ್ವಿಚಕ್ರ ವಾಹನ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಅನಂತಪುರ ಜಿಲ್ಲೆಯವರಾಗಿದ್ದು, ಒಬ್ಬಾತ ಮೆಕಾನಿಕ್ ಅಂಗಡಿ ಇಟ್ಟುಕೊಂಡಿದ್ದಾನೆ. ದ್ವಿಚಕ್ರ, ವಾಹನಗಳ ಬಿಡಿ ಭಾಗಗಳನ್ನು ಖರೀದಿಸಲು ಆಗಾಗ್ಗೆ ನಗರಕ್ಕೆ ಬರುತ್ತಿದ್ದಾಗ ವಾಪಸ್ ಹೋಗುವ ಸಮಯದಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಅವುಗಳ ಚಾರ್ಸಿ ನಂಬರ್ ಆಳಿಸಿ ನಕಲಿ ನಂಬರ್ ಅಳವಡಿಸುತ್ತಿದ್ದುದು ತನಿಖೆಯಿಂದ
ಸೋಲದೇವನಹಳ್ಳಿ
ನಗರದ ವಿವಿಧ ಕಡೆಗಳಲ್ಲಿ ದ್ವಿಚಕ್ರ ವಾಹನ ಮತ್ತು ಆಟೋ ರಿಕ್ಷಾ ಕಳವು ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ಏಳು ಲಕ್ಷ ಮೌಲ್ಯದ 9 ದ್ವಿಚಕ್ರ ವಾಹನ ಹಾಗೂ ಆಟೋ ರಿಕ್ಷಾ ಸೋಲದೇವನಹಳ್ಳಿ ಠಾಣೆ ಪೊಲೀಸರು ವಶಪಡಿಸಿ ಕೊಂಡಿದ್ದಾರೆ.ಈ ಪೈಕಿ ಒಬ್ಬ ಅಪ್ರಾಪ್ತನಾಗಿದ್ದು, ಆತನ ಪೋಷಕರನ್ನು ಕರೆಸಿ ಮುಂದೆ ಯಾವುದೇ ರೀತಿಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ತಿಳುವಳಿಕೆ ನೀಡಿ ಕಳುಹಿಸಿದ್ದಾರೆ.
ಬಾಗಲಗುಂಟಿ
ವೃದ್ಧ ಒಂಟಿ ಮಹಿಳೆಯ ಮನೆಗೆ ನುಗ್ಗಿ ಸರ ಅಪಹರಣ ಮತ್ತು ದ್ವಿಚಕ್ರ, ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ 2.5 ಲಕ್ಷ ಮೌಲ್ಯದ 13 ಗ್ರಾಂ ಚಿನ್ನದ ಸರ ಸೇರಿದಂತೆ 5 ದ್ವಿಚಕ್ರ ವಾಹನಗಳನ್ನು ಬಾಗಲಗುಂಟೆ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚಿಕ್ಕಜಾಲ:
ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದಂತಹ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ 14.45 ಲಕ್ಷ ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಕಳವು ಮಾಡಿದ ದ್ವಿಚಕ್ರ ವಾಹನಗಳ ಪೈಕಿ ಸ್ನೇಹಿತರಿಗೆ ನೀಡಿದ್ದ ಈ ಬೈಕ್ ಸೇರಿದಂತೆ ರಿಪೇರಿಗೆಂದು ಮೆಕಾನಿಕ್ಗೆ ನೀಡಿದ್ದ 4 ದ್ವಿಚಕ್ರ ವಾಹನಗಳನ್ನು ಚಿಕ್ಕಜಾಲ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ 11 ಪ್ರಕರಣಗಳು ಹಾಗೂ 2 ದರೋಡೆ ಪ್ರಕರಣಗಳು ಪತ್ತೆಯಾಗಿವೆ.
ಎಲೆಕ್ಟ್ರಾನಿಕ್ ಸಿಟಿ:
ನಗರದ ವಿವಿಧ ಕಡೆಗಳಲ್ಲಿ ದ್ವಿಚಕ್ರ ವಾಹನ, ಮೊಬೈಲ್ ಮತ್ತು ಮನೆಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ 11 ದ್ವಿಚಕ್ರ ವಾಹನ, 25 ಮೊಬೈಲ್ ಹಾಗೂ 21 ಗ್ರಾಂ ಚಿನ್ನಾಭರಣ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಳವು ಮಾಡಿದ ದ್ವಿಚಕ್ರ ವಾಹನಗಳ ಪೈಕಿ ಜಕ್ಕಸಂದ್ರದ ರಾಷ್ಟ್ರಕವಿ ಕುವೆಂಪು ಪಾರ್ಕ್ನ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು, ಚಿಕ್ಕತೋಗೂರು ಬ್ರಿಡ್ಜ್ ಬಳಿ ನಿಲ್ಲಿಸಿದ್ದ 4 ದ್ವಿಚಕ್ರ ವಾಹನ ಸೇರಿ 11.30 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಇನ್ಪೆಕ್ಟರ್ ನವೀನ್ ತಂಡ ಯಶಸ್ವಿಯಾಗಿದೆ.
ಕಾರು ಹಾಗೂ ದ್ವಿಚಕ್ರ ಕಳವು ಮಾಡಿದ್ದ ಆರೋಪಿ ಬಂಧಿಸಿ 10 ಲಕ್ಷ ಮೌಲ್ಯದ ದ್ವಿಚಕ್ರ ವಾಹನಗಳು ಹಾಗೂ ಕಾರನ್ನು ಬಾಣಸವಾಡಿ ಇನ್ವೆಕ್ಟರ್ ಅರುಣ್ ಸಾಳುಂಕೆ ಮತ್ತು ಸಿಬ್ಬಂದಿ ತಂಡ ವಶಪಡಿಸಿಕೊಂಡಿದೆ. ಆರೋಪಿಯ ಬಂಧನದಿಂದ 9 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಹಾಗೂ ಕಾರು, ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.
ಕಾಡುಗೋಡಿ
ಟ್ರಿ ಪಾರ್ಕ್ ಹತ್ತಿರದ ಟೈಟಾನಿಯಂ ಚಿಕ್ ಪ್ರಾಜೆಕ್ಟ್ ಬಿಲ್ಲಿಂಗ್ ಮ್ಯಾನೇಜರಿಗೆ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ವಶಪಡಿಸಿಕೊಂಡಿದ್ದಾರೆ ಈ ಇಬ್ಬರು ಆರೋಪಿಗಳು ಕಾಪರ್ ಮತ್ತು ಇನ್ಸುಲೇಟೆಡ್ ವೈರ್ಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.ಕಾಡುಗೋಡಿ ಪಕರ್ ರಂಗಸ್ವಾಮಿ ಹಾಗೂ ಸಿಬ್ಬಂದಿ ತಂಡ ಕೈಗೊಂಡಿತ್ತು. ಬಂಧಿತ 12 ಮಂದಿ ಆರೋಪಿಗಳ ಪೈಕಿ ಐವರು ಹಳಯ ಆರೋಪಿಗಳು ಎಂದು ತಿಳಿದುಬಂದಿದೆ