ಚಿತ್ರದುರ್ಗ ; ಕೋಟೆ ನಾಡಿನಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಷ್ಟು ದಿನ ಲಕ್ಷಾಂತರ ರೂ. ದರೋಡೆಯಾಗುತ್ತಿದ್ದು, ಈಗ ಆ ಸಂಖ್ಯೆ ಕೋಟಿಗೆ ಏರಿದೆ. ಈ ಹಿಂದೆ ದರೋಡೆಯಾದ ಪ್ರಕರಣಗಳ ವಿವರ ನಿಮ್ಮ ದಾವಣಗೆರೆಯ ವಿಜಯದಲ್ಲಿ
ಪ್ರಕರಣ-1
ಚಿತ್ರದುರ್ಗದ ಬ್ಯಾಂಕ್ ಕಾಲೊನಿಯಲ್ಲಿರುವ ಹೋಟೆಲ್ ಉದ್ಯಮಿ ನಜೀರ್ ಅಹ್ಮದ್ ಅವರ ಮನೆಗೆ ಜುಲೈ 9, 2023 ರ ಬೆಳಗ್ಗೆ ನುಗ್ಗಿದ ಕಳ್ಳರು ರೂ. 50 ಲಕ್ಷ ಹಾಗೂ 120 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳನ್ನು ಪೊಲೀಸರು ಬೆನ್ನಟ್ಟಿ ಬಂಧಿಸಿದ್ದರು. ಒಬ್ಬ ಆರೋಪಿ ಸೆರೆಯಾಗಿದ್ದು, ಇಬ್ಬರು ತಪ್ಪಿಸಿಕೊಂಡಿದ್ದರು. ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು ಕೈಯಲ್ಲಿ ಮಾರಕಾಸ್ತ್ರ ಹಿಡಿದಿದ್ದರು. ಪಿಸ್ತೂಲ್ನಿಂದ ಬೆದರಿಸಿ ಕುಟುಂಬದ ಸದಸ್ಯರನ್ನು ಕೊಠಡಿಯೊಂದರಲ್ಲಿ ಕೂಡಿಹಾಕಿದ್ದರು. ರೂ. 50 ಲಕ್ಷ ನೀಡುವಂತೆ ಬೆದರಿಸಿದ್ದರು. ರೂ. 25 ಲಕ್ಷ ಹಣ, ಚಿನ್ನಾಭರಣ ದೋಚಿದ್ದಲ್ಲದೆ, ಪುತ್ರ ಸಮೀರ್ ಹಾಗೂ ಅಳಿಯ ಶಹಜಹಾನ್ ಅವರನ್ನು ಅಪಹರಿಸಿ ಕರೆದೊಯ್ದಿದ್ದರು.
ಪ್ರಕರಣ 2
ಸ್ಥಳೀಯ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ (ಕೆಒಎಫ್) ಸಿಬ್ಬಂದಿಗೆ ಮಾ.25, 2023ರಂದು
ಚಾಕುತೋರಿಸಿ ಬೆದರಿಸಿ ರೂ. 6.5 ಲಕ್ಷ ದರೋಡೆ ಮಾಡಿದ ಘಟನೆ ನಗರದ ಐಯುಡಿಪಿ ಬಡಾವಣೆಯಲ್ಲಿ ನಡೆದಿತ್ತು..
ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ದರೋಡೆಗಳು
ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಗಳಲ್ಲಿ ದರೋಡೆ ಪ್ರಕರಣಗಳು 2022 ರ ಜುಲೈನಲ್ಲಿ ಹೆಚ್ಚಾಗಿತ್ತು.
ಆಗ ಕಳೆದ ಹದಿನೈದು ದಿನಗಳಲ್ಲಿ 6 ದರೋಡೆ ಪ್ರಕರಣಗಳು ದಾಖಲಾಗಿದ್ದವು.
ಭರಮಸಾಗರ ಬಳಿ ಲಕ್ಷಾಂತರ ಮೌಲ್ಯದ ವಸ್ತುಗಳ ದರೋಡೆ ನಡೆದಿತ್ತು. ಲಾರಿ ಚಾಲಕ ಮತ್ತು ಕ್ಲೀನರ್ನ ಕೈಕಾಲು ಕಟ್ಟಿ 64 ಲಕ್ಷ ರೂ. ಮೌಲ್ಯದ ಮೊಬೈಲ್, ಲ್ಯಾಪ್ ಟಾಪ್, ವೆಬ್ ಕ್ಯಾಂ ಸೇರಿ ಹಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ದೋಚಿದ್ದರು.
ಗುಟ್ಕಾ ಲಾರಿ ಹೈಜಾಕ್ : ಖದೀಮರ ಗ್ಯಾಂಗ್ ಗುಟ್ಕಾ ಲಾರಿ ಹೈಜಾಕ್ ಮಾಡಿ ದರೋಡೆ ನಡೆಸಿತ್ತು. 19.77 ಲಕ್ಷ ಮೌಲ್ಯದ ಗುಟ್ಕಾ ಎಗರಿಸಿದ್ದ 4 ಮಂದಿಯ ಗ್ಯಾಂಗ್ಅನ್ನು ಭರಮಸಾಗರ ಪೊಲೀಸರು ಹೆಡೆಮುರಿ ಕಟ್ಟಿದ್ದರು.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹೆಚ್ಚು ಪ್ರಕರಣ
ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ 2022 ರಲ್ಲಿ 2 ದರೋಡೆ ಪ್ರಕರಣ ದಾಖಲಾಗಿದ್ದವು. ದೊಡ್ಡಸಿದ್ದವ್ವನಹಳ್ಳಿ ಬಳಿ ಲಾರಿ ಚಾಲಕನಿಗೆ ಚಾಕು ತೋರಿಸಿ ಮೊಬೈಲ್, ಹಣ ಕಿತ್ತುಕೊಂಡಿದ್ದರು. ಮಲ್ಲಾಪುರ ಬಳಿ ಕಾರಿನಲ್ಲಿದ್ದ ಇಬ್ಬರು ಪ್ರೇಮಿಗಳಿಗೆ ಚಾಕು, ಲಾಂಗ್ ತೋರಿಸಿ ಲ್ಯಾಪ್ಟಾಪ್, 2 ಮೊಬೈಲ್, ಹಣ ಎಗರಿಸಿದ್ದರು. ಈ ಎರಡು ಗ್ಯಾಂಗನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಸದೆಬಡಿದಿದ್ದರು.