ಚಳ್ಳಕೆರೆ: ಗೃಹಿಣಿಯೊಬ್ಬಳು ತನ್ನ ಇಬ್ಬರು ಕಂದಮ್ಮಗಳನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ತಾನು ನೇಣು ಬಿಗಿದುಕೊಂಡಿರುವ ಘಟನೆ ತಾಲ್ಲೂಕಿನ ಯಲಗಟ್ಟೆ ಗ್ರಾಮದಲ್ಲಿ ನಡೆದಿದೆ.
ಲತಾ 30) ಮಗಳು( 5) ಮಗ ಜ್ಞಾನೇಶ(1) ಮೃತರು ಬೇತೂರು ಗ್ರಾಮದ ಲತಾ ಎಂಬುವರನ್ನು 6 ವರ್ಷಗಳ ಹಿಂದೆ ಯಲವಟ್ಟೆ ಗ್ರಾಮದ ತಿಪ್ಪೇಸ್ವಾಮಿ ವಿವಾಹವಾಗಿದ್ದರು.
ಪತಿ ತಿಪ್ಪೇಸ್ವಾಮಿ ಹೊಲಕ್ಕೆ ಹೋದಾಗ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಲತಮ್ಮ ಇಬ್ಬರು ಮಕ್ಕಳನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ತಾನು ಮನೆಯಲ್ಲಿ ನೇಣಿಗೆ ಶರಣಾಗಿರಬಹುದು ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಗ್ರಾಮಕ್ಕೆ ಪಿಐ ಆರ್. ಎಫ್, ದೇಸಾಯಿ, ಪಿಎಸ್ಐ ಸತೀಶ್ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಂತರವೇ ಸ್ಪಷ್ಟ ಮಾಹಿತಿ ತಿಳಿಯಲಿದೆ.