
ದಾವಣಗೆರೆ : ಭ್ರಷ್ಟಾಚಾರ ರಹಿತ ಮತ್ತು ಸ್ವಾಭಿಮಾನಿಯುತ ಆಡಳಿತಕ್ಕಾಗಿ ಗಂಧದನಾಡಿನಲ್ಲಿ ಶಾಸಕ ಬಸವರಾಜ್ ಪಾಟೇಲ್ ಯಾತ್ನಳ್ ರಂತವರು ಮುಖ್ಯಮಂತ್ರಿಯಾಗಲು ನಾಡಿನ ಜನತೆ ಕಾತುರದಿಂದ ಕಾಯುತ್ತಿದ್ದಾರೆಂದು ದಾವಣಗೆರೆ ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಆಶಯ ವ್ಯಕ್ತಪಡಿಸಿದ್ದಾರೆ.
ಇಂದು ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಯತ್ನಾಳ್ ರವರನ್ನ ಆತ್ಮೀಯವಾಗಿ ಸನ್ಮಾನಿಸಿ ಮಾತನಾಡುತ್ತಾ, ಈ ರಾಜ್ಯದಲ್ಲಿ ಮುಲಾಜಿಲ್ಲದೆ ನಿರ್ದಾರ ತೆಗೆದುಕೊಳ್ಳುವಂತಹ ಪ್ರಧಾನಿ ನರೇಂದ್ರ ಮೋದಿ,ಯುಪಿ ಮುಖ್ಯಮಂತ್ರಿ ಯೋಗಿಯಂತಿರುವ ರಾಜ್ಯದ ಪೈರ್ ಬ್ರಾಂಡ್ ಎಂದೇ ಹೆಸರಾಗಿರುವ ಜನಪ್ರಿಯ ಶಾಸಕ ಬಸವರಾಜ್ ಪಾಟೀಲ ಯತ್ನಾಳ್ ರಂತವರು ಒಮ್ಮೆ ರಾಜ್ಯದ ಮುಖ್ಯಮಂತ್ರಿಯಾದರೆ ಭ್ರಷ್ಟಾಚಾರ, ವಂಶಾಡಳಿತ ರಾಜಕಾರಣ ಮತ್ತು ಅರ್ಜೆಸ್ಟಮೆಂಟ್ ರಾಜಕಾರಣಕ್ಕೆ ತಿಲಾಂಜಲಿಯಿಟ್ಟು ಸಮೃದ್ದ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ಬಾಡದ ಆನಂದರಾಜ್ ತನ್ನಬಯಕೆಯನ್ನ ಬಿಚ್ಚಿಟ್ಟರು ಯತ್ನಾಳ್ ರಂತಹವರನ್ನ ಸಿಎಂ.ಮಾಡಲು ಮದ್ಯಕರ್ನಾಟಕದ ಬಿಜೆಪಿ ಹಿರಿಯಾ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಡಾ.ಜಿಎಂ.ಸಿದ್ದೇಶ್ವರರವರ ಬೆಂಬಲ ಆನೆ ಬಲ ಸಿಕ್ಕಂತಾಗಿದೆ ಎಂದರು ಇದೇ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಡಾ.ಜಿಎಂ.ಸಿದ್ದೇಶ್ವರ,ರಾಯಚೂರು ಮಾಜಿ ಸಂಸದ ಬೀಮನಾಯ್ಕ್.ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ವಿರೇಶ್ ಹನಗವಾಡಿ.ಮಾಜಿ ಪ್ರಕಾರ್ಯದರ್ಶಿ ಬಿಎಸ್.ಜಗದೀಶ್.ಬಿಜೆಪಿ ಯುವನಾಯಕ ಎಲ್ ಡಿ.ರವಿ.ದಾಗಿಕಟ್ಟೆ ನಾಗರಾಜ್ ನಿಲೋಗಲ್ಲ ಪ್ರಸನ್ನಕುಮಾರ್ ಇನ್ನೂ ಮುಂತಾದವರಿದ್ದರು.