ನ್ಯಾಮತಿ;- ತಾಲೂಕಿನ ಅಪ್ರಾಪ್ತ ಬಾಲಕಿ ಅಪಹರಣದ ಹಿನ್ನಲೆ ಕುಟುಂಬಸ್ಥರು ನೀಡಿದ ದೂರಿನನ್ವಯ ಪವನ ಎಂಬುವವನನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರುವುದಾಗಿ ನ್ಯಾಮತಿಯಲ್ಲಿ ಚನ್ನಗಿರಿ ಡಿವೈಎಸ್ಪಿ ರುದ್ರಪ್ಪ ಉಜ್ಜನಕೊಪ್ಪ ತಿಳಿಸಿದ್ದಾರೆ.
ಒಂದೇ ಗ್ರಾಮದ ಇಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದ್ದು ಬಾಲಕಿಯ ಮನೆಯವರು ನೀಡಿದ ದೂರಿನ ಮೇರೆಗೆ ಅದೇ ಗ್ರಾಮದ ಕೃಷಿ ಕೆಲಸ ಮಾಡುತ್ತಿದ್ದ ಯುವಕ ಬೇರೆಡೆಗೆ ಕರೆದೋಯ್ದಿದ್ದ .
ಈ ಹಿನ್ನಲೆ ಬಾಲಕಿ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಭದ್ರಾವತಿಯಲ್ಲಿದ್ದ ಅವರನ್ನು ಬಂಧಿಸಿ ನ್ಯಾಮತಿ ಠಾಣೆಗೆ ಗುರುವಾರ ಕರೆತರಲಾಗಿದೆ. ಪೊಕ್ಸೋ ಹಾಗೂ ಅಟ್ರಾಸಿಟಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ಸ್ಥಳ ಮಹಜರು ನಡೆಸಿದ್ದು ನಾಪತ್ತೆಗೆ ಸಹಕರಿಸಿದ್ದ ಯುವಕನ ಮೂವರು ಸ್ನೇಹಿತರಿಗಾಗಿ ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.