ಭರಮಸಾಗರ : ಭರಮಸಾಗರ ಸಮೀಪದ ಬಹದ್ದೂರ್ಘಟ್ಟ ಗ್ರಾಮದ ಬಳಿ ಗ್ಯಾಸ್ ಸಿಲಿಂಡರ್ಗಳನ್ನು ಸಾಗಿಸುತ್ತಿದ್ದ ಲಾರಿಯು ಚಾಲಕನ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.
ಭರಮಸಾಗರದಿಂದ ಹುಲ್ಲಿಕಟ್ಟೆ ಗ್ರಾಮಕ್ಕೆ ಹೋಗುತ್ತಿದ್ದ ಲಾರಿಯಲ್ಲಿ 342 ಗ್ಯಾಸ್ಸಿಲಿಂಡರ್ಗಳಿದ್ದು, ಲಾರಿ ಪಲ್ಟಿಯಾದ ಪರಿಣಾಮ ತಿಪಟೂರು ಮೂಲದ ಚಾಲಕ ಕೆ.ರುದ್ರೇಶ್ಗೆ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಯದಿಂದ ಪಾರಾಗಿದ್ದಾನೆ. ಜೊತೆಗೆ ಯಾವುದೇ ಸಿಲಿಂಡರ್ಗಳು ಸ್ಪೋಟಗೊಳ್ಳದ ಕಾರಣ ಸ್ಥಳದಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ತಿಳಿದುಬಂದಿದೆ.
ಭರಮಸಾಗರದ ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿದ್ದು, ರಸ್ತೆಯಲ್ಲಿ ಬಿದ್ದಿದ್ದ ಗ್ಯಾಸ್ ಸಿಲಿಂಡರ್ಗಳನ್ನು ರಸ್ತೆಯ ಬದಿಗೆ ಸ್ಥಳಾಂತರಿಸಿದರು. ಇದಕ್ಕೆ ಗ್ರಾಮಸ್ಥರು ಕೈಜೋಡಿಸಿದರು. ಒಂದೆರಡು ಗ್ಯಾಸ್ ಸಿಲಿಂಡರ್ಗಳು ಜಖಂಗೊಂಡಿದ್ದು ಅದೃಷ್ಟವಶಾತ್ ಯಾವುದು ಸ್ಪೋಟಗೊಂಡಿಲ್ಲ.
ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ರಸ್ತೆಗೆ ಬಿದ್ದಿರುವ ಸಿಲಿಂಡರ್ಗಳು ಸ್ಪೋಟಗೊಳ್ಳದಂತೆ ಮುಂಜಾಗ್ರತೆ ಕ್ರಮವಾಗಿ ಅಗ್ನಿ ನಿಂದಕಗಳನ್ನ ಹಾಗೂ ಲಾರಿಯ ಸುತ್ತಲೂ ಕೂಲಿಂಗ್ ನೀರನ್ನ ಹರಡಿದರು. ನಂತರ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸಲಾಯಿತು. ಹಾಗೂ ಚಾಲಕನನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದ್ದು,ಭರಮಸಾಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.