ದಾವಣಗೆರೆ : ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎಎಸ್ಪಿ ಗನ್ ಮ್ಯಾನ್ ಜಯಣ್ಣ ಪತ್ನಿ ಮೃತರಾಗಿದ್ದು, ಜಯಣ್ಣ ಸ್ಥಿತಿ ಗಂಭೀರವಾಗಿದೆ.
ಸದಾ ಲವಲವಿಕೆಯಿದ್ದ ಗನ್ ಮ್ಯಾನ್ ಉತ್ತಮ ಕೆಲಸ ಮಾಡುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನವರಾಗಿದ್ದು ಊರಿಗೆ ಹೋಗಿದ್ದರು. ನಂತರ ದಾವಣಗೆರೆ ಡ್ಯೂಟಿಗೆ ಬರಲು ಬೈಕ್ ನಲ್ಲಿ ಬರುವಾಗ ಅಪಘಾತವಾಗಿದೆ.
ಚಿಕ್ಕಮಗಳೂರು ಕಡೂರು ತಾಲೂಕಿನ ತಂಗಲಿ ಬಳಿ ಈ ಅಪಘಾತ ಸಂಭವಿಸಿದೆ. ದಾವಣಗೆರೆ ಎಎಸ್ಪಿ ಗನ್ ಮ್ಯಾನ್ ಜಯಣ್ಣ ಹಾಗೂ ಆತನ ಪತ್ನಿ ಸುಮಾ(25) ಬೈಕಿನಲ್ಲಿ ರೈಲ್ವೆ ಸ್ಟೇಷನ್ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಪತ್ನಿ ಸ್ಥಳದಲ್ಲಿಯೇ ಮೃತಪಟ್ಟರೇ ಜಯಣ್ಣ ಸ್ಥಿತಿ ಗಂಭೀರವಾಗಿದೆ.ಸದ್ಯ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಕ್ ಚಾಲಕನ ಬೇಜಾಬ್ದಾರಿಯಿಂದ ಈ ಘಟನೆ ನಡೆದಿದೆ. ಒನ್ ವೇ ನಲ್ಲಿ ಬಂದ ಲಾರಿ ಚಾಲಕನ ಅಜಾಗೃತೆಯಿಂದ ಅಪಘಾತ ನಡೆದಿದೆ. ಪೊಲೀಸ್ ಜಯಣ್ಣ ಸ್ಥಿತಿ ಗಂಭೀರವಾಗಿದ್ದು, ಟ್ರಕ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಿದ್ದಾರೆ. ಆಸ್ಪತ್ರೆಗೆ ಕುಟುಂಬ ವರ್ಗ ಧಾವಿಸಿದ್ದು, ದುಃಖದ ಮಡಿಲಿನಲ್ಲಿ ಕುಟುಂಬವಿದ್ದು, ದಾವಣಗೆರೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಸೇರಿದಂತೆ ಎಎಸ್ಪಿ ಸಂತೋಷ್ ಕುಮಾರ್ ಘಟನೆ ಬಗ್ಗೆ ತೀವ್ರ ವಿಷಾಧ ವ್ಯಕ್ತಪಡಿಸಿದ್ದಾರೆ.