ನ್ಯಾಮತಿ : ವಿವಾಹವಾಗಿ 20 ವರ್ಷ ಕಳೆದರೂ ಮಕ್ಕಳಾಗದ ಕಾರಣ ದಂಪತಿಗಳು ವಿಷ ಸೇವನೆ ಮಾಡಿರುವ ಘಟನೆ ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿಯಲ್ಲಿ ನಡೆದಿದೆ.
ತಾಲೂಕಿನ ಮಲ್ಲಿಗೇನಹಳ್ಳಿ ಗ್ರಾಮದ ಷಣ್ಮುಖಪ್ಪ (60) ಇಂದ್ರಮ್ಮ(50) ಮೃತ ದಂಪತಿಗಳು. ಪತಿ ಷಣ್ಮುಖಪ್ಪಒತ್ತಡಕ್ಕೆ ಒಳಗಾಗಿದ್ದ ಕಾರಣ ಪಾರ್ಶ್ವವಾಯು, ಸಕ್ಕರೆ ಕಾಯಿಲೆಗೆ ತುತ್ತಾಗಿದ್ದರು. ಈ ನೋವನ್ನು ತಾಳಲಾರದೇ
ಪತಿ-ಪತ್ನಿ ಇಬ್ಬರು ವಿಷದ (ಜೋಳಕ್ಕೆ ಹುಳುಗಳಾಗುವುದನ್ನು ತಡೆಯಲು ಇಡುವ) ಮಾತ್ರೆಗಳನ್ನು ನುಂಗಿದ್ದಾರೆ. ನಂತರ ಸಾವಿನ ಭಾದೆ ತಡೆಯಲಾರದೆ ಕಿರುಚಾಡಿದ್ದಾರೆ. ಆಗ ಅಕ್ಕ-ಪಕ್ಕದ ಮನೆಯವರು ಬಂದುನೋಡಿ ವಿಷಯ ತಿಳಿದು ನ್ಯಾಮತಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದ್ಯೂಯ್ಯುವ ಮಾರ್ಗಮದ್ಯೆ ಪತಿ ಷಣ್ಮುಖಪ್ಪ ಮೃತಪಟ್ಟರೆ. ಪತ್ನಿ ಇಂದ್ರಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾರೆ.
ಈ ಸಂಬಂಧ ಮೃತರ ಸಂಬಂಧಿಕರು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.