ನ್ಯಾಮತಿ :ಹೊಸಪೇಟೆ ಡ್ಯಾಂ ಒಡೆದ ಬೆನ್ನೆಲ್ಲೆ ಈಗ ನಾಲೆಗಳು ಒಡೆಯುತ್ತಿದ್ದು. ನ್ಯಾಮತಿ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಹರಿಯುವ ತುಂಗಾಮೇಲ್ದಂಡೆ ಯೋಜನೆ ನಾಲೆಯು ಒಡೆದು ಅಡಕೆ, ಹತ್ತಿ, ಮೆಕ್ಕೆಜೋಳ, ಭತ್ತದ ನೂರಾರು ಎಕರೆ ವ್ಯಾಪ್ತಿಯಲ್ಲಿ ಬೆಳೆದಿದ್ದ ಬೆಳೆಯು ಜಲಾವೃತಗೊಂಡಿದೆ.
ವಿಷಯ ತಿಳಿದು ಸ್ಥಳಕ್ಕೆ ಶಾಸಕ ಡಿ.ಜಿ.ಶಾಂತನಗೌಡ ಭೇಟಿನೀಡಿ ಘಟನೆ ಸ್ಥಳ ವೀಕ್ಷಿಸಿದರು.ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ನೀರು ಹರಿಯುವುದನ್ನು ನಿಲ್ಲಿಸುವ ಅಗತ್ಯ ಕ್ರಮಕೈಗೊಂಡು ಮುಂಗಾರು ಬೆಳೆಗೆ ಸಮಸ್ಯೆ ಆಗದಂತೆ ನೀರು ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ನೀರು ನಿಂತ ನಂತರ ಆಧುನಿಕ ತಂತ್ರಜ್ಞಾನ ಬಳಸಿ ನಾಲೆಯನ್ನು ವಾರದೊಳಗೆ ನಿರ್ಮಿಸಿ ರೈತರ ಬೆಳೆಗೆ ನೀರು ನೀಡಲಾಗುವುದು.ಸಂಬಂಧಿತ ಇಲಾಖೆಯವರಿಗೆ ಯಾವ ಬೆಳೆ ಎಷ್ಟು ಎಕರೆ ನಷ್ಟ ಆಗಿದೆ ಎಂದು ಪರಿಶೀಲನೆ ಮಾಡಿ ಬೆಳೆ ಹಾನಿ ವರದಿ ನೀಡುವಂತೆ ಸೂಚಿಸಲಾಗಿದ್ದು ಬೆಳೆ ಹಾನಿ ವರದಿ ಬಂದ ನಂತರ ರೈತರಿಗೆ ಆಗಿರುವ ಬೆಳೆ ಹಾನಿ ನಷ್ಟ ಭರಿಸುವ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ನ್ಯಾಮತಿ ತಹಸೀಲ್ದಾರ್ ಎಚ್.ಬಿ.ಗೋವಿಂದಪ್ಪ, ರಾಜಸ್ವ ನಿರೀಕ್ಷಕ ಸಂತೋಷ, ತುಂಗಾ ಮೇಲ್ದಂಡೆ ಯೋಜನೆಯ ಇಇ ಕೃಷ್ಣಮೂರ್ತಿ, ತುಂಗಾ ಮೇಲ್ದಂಡೆ ಯೋಜನೆಯ ಎಇಇ ಮಂಜುನಾಥ್ ಗ್ರಾಮಸ್ಥರು ಇದ್ದರು.